ವಿಸ್ತೃತ ಲಾಕ್​ಡೌನ್​ ಅವಧಿಯಲ್ಲಿ ಈ ರಾಶಿಯವರು ಅವರಸದ ನಿರ್ಣಯ ಕೈಗೊಳ್ಳಬಾರದು

Nitya-Bhavishya-vvani-1
Published on

ಮೇಷ: ಬಿರುಗಾಳಿಯನ್ನೂ ತಡೆಯುವ ಶಕ್ತಿ ನಿಮ್ಮ ಶಾಂತ ಪ್ರತಿಕ್ರಿಯೆ ಹಾಗೂ ಜಾಣ್ಮೆಗಿದೆ. ಖರ್ಚು ಕಡಿಮೆ ಮಾಡಿಕೊಳ್ಳಿ. ಶುಭಸಂಖ್ಯೆ: 7

ವೃಷಭ: ನಿಮಗೆ ಜನ್ಮಜಾತವಾಗಿ ಬಂದ ಕೆಲವು ಸಂಗತಿಗಳನ್ನು ಮುಚ್ಚಿಡದಿರಿ. ಅವುಗಳಿಂದ ನಿಮಗೇ ಅನುಕೂಲವಿದೆ. ಶುಭಸಂಖ್ಯೆ: 9

ಮಿಥುನ: ಬಂಡಾಯದ ಕಹಳೆ ಊದುವ ಉತ್ಸಾಹವನ್ನು ಹೊಂದಿದ್ದೀರಿ. ಆದರೆ ನಿಮ್ಮವರಿಂದಲೇ ನಿಮಗೆ ಹಿನ್ನಡೆಯಾದೀತು. ಶುಭಸಂಖ್ಯೆ: 2

ಕಟಕ: ಕೆಲವು ವಿಚಾರಗಳನ್ನು ಪರಿಣತರ ಜತೆ ರ್ಚಚಿಸಿದರೆ ಉತ್ತಮ. ಹಿರಿಯರ ನೆರವಿನಿಂದ ಕೆಲಸ ಸಫಲವಾಗಲಿದೆ. ಶುಭಸಂಖ್ಯೆ: 1

ಸಿಂಹ: ಯಾವುದೇ ಕಾರಣಕ್ಕೆ ಅವಸರದ ನಿರ್ಣಯ ಕೈಗೊಳ್ಳದಿರಿ. ಹಿರಿಯರ ಅನುಭವಗಳನ್ನು ಕೇಳಿ ತಿಳಿದರೆ ಉತ್ತಮ. ಶುಭಸಂಖ್ಯೆ: 4

ಕನ್ಯಾ: ಉತ್ತಮ ಪುರಸ್ಕಾರ ಬರಲು ಕಾಲ ಪ್ರಶಸ್ತವಾಗಿದೆ. ಸಂಗಾತಿಯ ಬೆಂಬಲವಿದೆ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 6

ತುಲಾ: ಪರರ ಟೀಕೆಗಳಿಗೆ ಕಿವಿಗೊಡದಿರಿ. ಇದರಿಂದ ಮಾನಸಿಕ ಹಿಂಸೆ ಉಂಟಾಗಬಹುದು. ದೈವಕೃಪೆಯಿಂದ ಒಳಿತಿದೆ. ಶುಭಸಂಖ್ಯೆ: 3

ವೃಶ್ಚಿಕ: ಸರ್ಕಾರಿ ನೌಕರರಿಗೆ ಸ್ವಲ್ಪ ಕಷ್ಟಗಳು ಎದುರಾಗಬಹುದು. ಮಾಡದಿರುವ ತಪ್ಪಿನ ಹೊಣೆ ಹೊರಬೇಕಾದೀತು. ಶುಭಸಂಖ್ಯೆ: 5

ಧನಸ್ಸು: ಒತ್ತಡದಿಂದ ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಉಂಟಾಗಬಹುದು. ಜಗನ್ಮಾತೆ ದುರ್ಗೆಯನ್ನು ಪ್ರಾರ್ಥಿಸಿ. ಶುಭಸಂಖ್ಯೆ: 8

ಮಕರ: ಸಂಗಾತಿಯೊಡನೆ ವಾದಿಸಲು ಹೋಗಬೇಡಿ. ಅವರ ಜತೆ ರ್ಚಚಿಸದೆ ಬಹು ಮುಖ್ಯ ನಿರ್ಧಾರ ಮಾಡದಿರಿ. ಶುಭಸಂಖ್ಯೆ: 2

ಕುಂಭ: ಕೆಲಸದ ಒತ್ತಡದ ಮಧ್ಯೆ ಹವ್ಯಾಸಗಳ ಬಗ್ಗೆ ನಿರ್ಲಕ್ಷ್ಯ ತೋರಿಸದಿರಿ. ಹವ್ಯಾಸಗಳಿಂದ ಮಾನಸಿಕ ನೆಮ್ಮದಿ ಇದೆ. ಶುಭಸಂಖ್ಯೆ: 9

ಮೀನ: ಜವಾಬ್ದಾರಿಯುತ ನಿರ್ವಹಣೆಯಿಂದ ಮೇಲಧಿಕಾರಿಗಳ ಪ್ರಶಂಸೆ ಲಭ್ಯ. ಹಣಕಾಸಿನ ಸ್ಥಿತಿಯಲ್ಲಿ ಪ್ರಗತಿಯಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net