

ಮೇಷ: ಒಂದೇ ದಾರಿ ಎಂಬ ನಿರ್ಧಾರವನ್ನು ಬದಲಿಸಿ ಬೇರೆ ಬೇರೆ ದಾರಿಗಳ ಆಯ್ಕೆ ಮಾಡಿಕೊಳ್ಳಿ. ಮನಃಶಾಂತಿ ಲಭ್ಯವಾಗಲಿದೆ. ಶುಭಸಂಖ್ಯೆ: 7
ವೃಷಭ: ಕಾನೂನಿನ ಚೌಕಟ್ಟಿನ ಇತಿಮಿತಿಗಳನ್ನು ಚೆನ್ನಾಗಿ ಅರಿತುಕೊಂಡಿದ್ದೀರಿ. ಆದರೆ ನಿಮ್ಮ ಹೋರಾಟವನ್ನು ಬಿಡದಿರಿ. ಶುಭಸಂಖ್ಯೆ: 4
ಮಿಥುನ: ಅನವಶ್ಯಕ ಕಾರಣಗಳನ್ನು ಮುಂದಿಟ್ಟುಕೊಂಡು ವಾಗ್ವಾದಕ್ಕೆ ಕರೆಯುವಂಥವರು ಹೆಚ್ಚಿನ ಅಪಾಯ ತಂದೊಡ್ಡಬಹುದು. ಶುಭಸಂಖ್ಯೆ: 1
ಕಟಕ: ಯಾರೊಡನೆಯೂ ಅತಿ ಸಲುಗೆ ವಹಿಸದಿರಿ. ಕೆಲವು ಅವಮಾನಗಳಿಂದ ತಪ್ಪಿಸಿಕೊಳ್ಳಲು ಇದು ನಿಮಗೆ ನೆರವಾಗಲಿದೆ. ಶುಭಸಂಖ್ಯೆ: 8
ಸಿಂಹ: ನಿಮಗೆ ತಿಳಿದ ಎಲ್ಲವನ್ನೂ ಶಾಂತ ರೀತಿಯಿಂದ ನಿರೂಪಿಸಿ. ಮಾತನಾಡಲು ಹಿಂಜರಿದರೆ ಸೋಲಬೇಕಾಗಬಹುದು. ಶುಭಸಂಖ್ಯೆ: 5
ಕನ್ಯಾ: ಯಾರೋ ನೀಡಿದ ಸಲಹೆಯನ್ನು ಕಣ್ಮುಚ್ಚಿ ಸ್ವೀಕರಿಸದಿರಿ. ನಿಮಗೆ ಸ್ಪಷ್ಟವಾಗಿ ತಿಳಿದಿದ್ದನ್ನು ಮಾತ್ರವೇ ಅಳವಡಿಸಿಕೊಳ್ಳಿ. ಶುಭಸಂಖ್ಯೆ: 2
ತುಲಾ: ಖಂಡಿತವಾಗಿ ವಿವಾದಗಳನ್ನು ಸೃಷ್ಟಿಸುವಂಥ ವಿಚಾರಗಳನ್ನು ಪ್ರತಿಪಾದಿಸದಿರಿ. ಅದರಿಂದ ಎಲ್ಲರಿಗೂ ಅಪ್ರಿಯರಾಗುವಿರಿ. ಶುಭಸಂಖ್ಯೆ: 9
ವೃಶ್ಚಿಕ: ಆದಾಯ ತೆರಿಗೆ, ಅಬಕಾರಿ ಇಲಾಖೆಗಳ ಕುರಿತ ಕಾನೂನುಗಳನ್ನು ಸೂಕ್ತವಾಗಿ ಪರಿಪಾಲಿಸಿದರೆ ಕ್ಷೇಮವಿದೆ. ಶುಭಸಂಖ್ಯೆ: 6
ಧನಸ್ಸು: ನೀತಿಯನ್ನು ಬೋಧಿಸಿ ನಾಟಕ ಮಾಡುವವರು ಭೇಟಿಯಾಗುತ್ತಾರೆ. ಅಂತಹ ಜನರನ್ನು ತಾಳ್ಮೆಯಿಂದ ದೂರ ಮಾಡಿ. ಶುಭಸಂಖ್ಯೆ: 3
ಮಕರ: ತಮ್ಮ ಹಕ್ಕು ಎಂದು ಸುಳ್ಳು ಕಾರಣ ಮುಂದಿಟ್ಟುಕೊಂಡು ಬಂದು ಗಲಾಟೆ ಮಾಡುವವರನ್ನು ಅಲಕ್ಷಿಸಿ. ಶುಭಸಂಖ್ಯೆ: 9
ಕುಂಭ: ನಿಮ್ಮ ವಿಶಿಷ್ಟ ಬಗೆಯ ಪ್ರತಿಭೆಯನ್ನು ಗುರುತಿಸುವಂತಹ ಸುದೈವವು ಇಂದು ನಿಮ್ಮ ಪಾಲಿಗೆ ಲಭ್ಯವಾಗಲಿದೆ. ಶುಭಸಂಖ್ಯೆ: 5
ಮೀನ: ನೈತಿಕ ಪ್ರಜ್ಞೆಯ ಉಳಿವಿನ ಕುರಿತಾದ ನಿಮ್ಮ ಸೂಕ್ಷ್ಮ ಚಿಂತನೆಯನ್ನು ಅನೇಕ ಮಂದಿ ಬೆಂಬಲಿಸಲಿದ್ದಾರೆ. ಶುಭಸಂಖ್ಯೆ: 1