

ಮೇಷ: ಹತ್ತಿರದಲ್ಲಿಯೇ ಇರುವ ಮಿತ್ರರು ನೆರವು ನೀಡಲಿದ್ದಾರೆ. ವಿವಾಹಾಪೇಕ್ಷಿಗಳಿಗೆ ಸಿಹಿ ಸುದ್ದಿ. ಆಂಜನೇಯನನ್ನು ಸ್ತುತಿಸಿ. ಶುಭಸಂಖ್ಯೆ: 3
ವೃಷಭ: ಸಂಭ್ರಮದ ವಾರ್ತೆಯೊಂದು ನಿಮ್ಮ ಮನಸ್ಸಿಗೆ ಸಂಜೀವಿನಿಯಾಗಿ ಒದಗಿಬರಲಿದೆ. ಬಾಳಿಗೆ ಹೊಸ ದಾರಿ ಸಿಗಲು ಸಾಧ್ಯ. ಶುಭಸಂಖ್ಯೆ: 6
ಮಿಥುನ: ನೀವು ನಂಬಿದ ಆದರ್ಶದಿಂದ ಸಿದ್ಧಿ ದೊರೆಯಲಿದೆ. ಹಿರಿಯರ ಸಲಹೆಗಳಿಂದ ಮನೆಯಲ್ಲಿ ನೆಮ್ಮದಿಯಿದೆ. ಶುಭಸಂಖ್ಯೆ: 9
ಕಟಕ: ಕಗ್ಗಂಟಿನ ಸಮಸ್ಯೆಯೊಂದು ಕೊನೆಗೊಳ್ಳಲಿದೆ. ಮನುಷ್ಯತ್ವ ಬಿಡದಿರಿ. ಕಿರಿಯರ ಸಹಾಯ ಸಿಗಲಿದೆ. ಲಾಟರಿ ಕೊಳ್ಳಬೇಡಿ. ಶುಭಸಂಖ್ಯೆ: 4
ಸಿಂಹ: ಯೋಚನೆಗಳ ಭಾರಕ್ಕೆ ಕುಗ್ಗುವಿರಿ. ಜಾಣರಾದ ನಿಮಗೆ ಅದರಿಂದ ಹೊರಬರುವ ದಾರಿ ಲಭ್ಯ. ಸಂಗಾತಿಯ ನೆರವೂ ಇದೆ. ಶುಭಸಂಖ್ಯೆ: 8
ಕನ್ಯಾ: ಕಾರಣವಿಲ್ಲದೆ ಉದ್ವೇಗದಲ್ಲಿ ಸಿಲುಕುವಿರಿ. ಹಣದ ವಿಚಾರದಲ್ಲಿ ಅದೃಷ್ಟವಿದೆ. ಆದರೆ ಯೋಚಿಸಿಯೇ ವ್ಯವಹರಿಸಿ. ಶುಭಸಂಖ್ಯೆ: 2
ತುಲಾ: ಸುಮ್ಮನೆ ಯಾರ ತಂಟೆಗೂ ಹೋಗಬೇಡಿ. ಮುಂಗೋಪ ನಿಮ್ಮ ಶತ್ರು. ಗುರು ಸ್ತೋತ್ರ ಪಠಣದಿಂದ ಶಾಂತಿಯಿದೆ. ಶುಭಸಂಖ್ಯೆ: 5
ವೃಶ್ಚಿಕ: ನ್ಯಾಯಾಲಯದ ವಿಚಾರ ಎದುರಾದೀತು. ಮಾತುಕತೆಯಿಂದ ಬಗೆಹರಿಸಿಕೊಳ್ಳಿ. ನೃಸಿಂಹ ಸ್ತೋತ್ರದ ಪಠಣ ಮಾಡಿ. ಶುಭಸಂಖ್ಯೆ: 1
ಧನಸ್ಸು: ಪ್ರವಾಸೋದ್ಯಮದ ಕುರಿತಾಗಿ ಚಿಂತಿಸುವಿರಿ. ಉತ್ತಮ ಪಾಲುದಾರರು ಸಿಕ್ಕಿದರಷ್ಟೇ ಮುಂದೆ ಸಾಗುವುದು ಸೂಕ್ತವೆನಿಸಲಿದೆ. ಶುಭಸಂಖ್ಯೆ: 7
ಮಕರ: ನಿಮ್ಮ ಬೌದ್ಧಿಕ ಪ್ರತಿಭೆಗೆ ಮನ್ನಣೆಯ ಕಾಲ ಬಂದಿದೆ. ಮನೆಯಲ್ಲಿನ ಹೊಸ ಬೆಳವಣಿಗೆಯ ಕಾರಣಕ್ಕೆ ಸಂತಸಪಡುವಿರಿ. ಶುಭಸಂಖ್ಯೆ: 3
ಕುಂಭ: ನೀವು ಸೋತು ಹಿಂದೆ ಸರಿಯುವವರಲ್ಲ. ಆದರೂ ಸೋತು ಗೆಲ್ಲಲು ಉತ್ತಮ ದಿನವಿದು. ಸಂಗಾತಿಯ ಮಾತನ್ನು ಕೇಳಿ. ಶುಭಸಂಖ್ಯೆ: 8
ಮೀನ: ಮನೆಯವರ ಯಶಸ್ಸಿನಲ್ಲಿ ಜತೆಯಾಗುವಿರಿ. ಹಷೋಲ್ಲಾಸಕ್ಕೆ ಉತ್ತಮ ದಾರಿಯಿದೆ. ಬೆಂಕಿಯಿಂದ ದೂರವಿರಿ. ಶುಭಸಂಖ್ಯೆ: 5