ಈ ರಾಶಿಯವರಿಗೆ ಶತ್ರುಗಳ ಕಾಟ ಜಾಸ್ತಿ ಇದೆ. ಎಚ್ಚರಿಕೆ ವಹಿಸಬೇಕು

Nitya-Bhavishya-vvani-1-2-1
Published on

ಮೇಷ: ನಿಮಗೆ ಶತ್ರುಗಳ ಕಾಟ ಜಾಸ್ತಿ ಇದೆ. ಸಮಯಕ್ಕೆ ಸರಿಯಾಗಿ ಕೈಗೊಂಡ ನಿರ್ಧಾರಗಳು ರಕ್ಷಿಸುತ್ತವೆ. ಅದೃಷ್ಟಸಂಖ್ಯೆ: 7

ವೃಷಭ: ನಿಮ್ಮ ಮೇಲೆ ಆರೋಪ ಬರಬಹುದು. ತಪ್ಪಿಸಿಕೊಳ್ಳುವುದು ಕಷ್ಟ. ನೀವು ತಪ್ಪು ಮಾಡಿಲ್ಲ ಎಂದು ನಿರೂಪಿಸಿ. ಅದೃಷ್ಟಸಂಖ್ಯೆ: 1

ಮಿಥುನ: ಸಿಟ್ಟು ಜಾಸ್ತಿ ಮಾಡಿಕೊಳ್ಳುತ್ತೀರಿ. ಅದನ್ನು ಬಿಟ್ಟರೆ ರುಚಿಯಾದ ಆಹಾರ ಸೇವಿಸುವ ಯೋಗಫಲವಿದೆ. ಅದೃಷ್ಟಸಂಖ್ಯೆ: 5

ಕಟಕ: ಹೊಸದಾಗಿ ಪ್ರಯತ್ನ ಮಾಡೋಣ ಎನ್ನುತ್ತ ಹೊಸ ಉತ್ಸಾಹ ತೋರುತ್ತೀರಿ. ಆರ್ಥಿಕ ನೆಮ್ಮದಿ ಕೂಡ ಸಿಗಲಿದೆ. ಅದೃಷ್ಟಸಂಖ್ಯೆ: 6

ಸಿಂಹ: ಮುಖ್ಯ ಸಾಲ ತೀರಿಸಲು ಅತ್ಯುತ್ತಮ ಅವಕಾಶ ಲಭಿಸುತ್ತವೆ ಅಥವಾ ಸಾಲ ತೀರಿಸುವ ಆಲೋಚನೆ ಬರುತ್ತದೆ. ಅದೃಷ್ಟಸಂಖ್ಯೆ: 2

ಕನ್ಯಾ: ಚಿಕ್ಕ ತಪ್ಪು ಹೆಜ್ಜೆ ನಿಮ್ಮ ಇಡೀ ದಿನವನ್ನು ಹಾಳುಮಾಡುವ ಸಾಧ್ಯತೆ ಇದೆ. ಚೆನ್ನಾಗಿ ಯೋಚಿಸಿ ಕೆಲಸ ಮಾಡಿ. ಅದೃಷ್ಟಸಂಖ್ಯೆ: 4

ತುಲಾ: ಗುಟ್ಟಾಗಿ ಏನೋ ಮಾಡಲು ಪ್ರಯತ್ನ ಮಾಡುತ್ತೀರಿ. ಆದರೆ ಯಾರಿಗೆ ಯಶಸ್ಸು ಲಭ್ಯ ಎಂಬುದು ಮಾತ್ರ ನಿಗೂಢ. ಅದೃಷ್ಟಸಂಖ್ಯೆ: 5

ವೃಶ್ಚಿಕ: ಕೆಲವು ಕೆಲಸಗಳು ನಿಷ್ಪ್ರಯೋಜಕ ಎಂದು ತಿಳಿದೂ ಮಾಡಬೇಕಾಗುತ್ತದೆ. ನಿಮ್ಮಿಂದ ತಿರಸ್ಕರಿಸಲೂ ಆಗದು. ಅದೃಷ್ಟಸಂಖ್ಯೆ: 9

ಧನಸ್ಸು: ಪ್ರೀತಿ-ಪ್ರೇಮ ಅವಶ್ಯವಿರುವ ದಿನ. ದ್ವೇಷ ಸಿಟ್ಟು ಸರ್ವಥಾ ಬೇಡ. ಪ್ರಮುಖ ಕೆಲಸಗಳು ಸಂಪನ್ನವಾಗಲಿವೆ. ಅದೃಷ್ಟಸಂಖ್ಯೆ: 1

ಮಕರ: ಮಾತನಾಡುತ್ತೀರಿ ಅಷ್ಟೆ. ಬಹಳ ಕಾಲದಿಂದ ಯಾರಿಗೂ ಹೇಳದ ಹಲವು ವಿಚಾರಗಳ ಬಗ್ಗೆ ಬಾಯಿ ಬಿಡುತ್ತೀರಿ. ಅದೃಷ್ಟಸಂಖ್ಯೆ: 6

ಕುಂಭ: ತಮಗೆ ಬೇಕಾದುದನ್ನು ಮಾತ್ರ ಕೇಳುತ್ತಾರೆ, ಆದರೆ ಯಾರೂ ನಮ್ಮ ಕಷ್ಟ ಕೇಳಲಾರರು ಎನ್ನುವ ಭಾವ ಕಾಡುತ್ತದೆ. ಅದೃಷ್ಟಸಂಖ್ಯೆ: 2

ಮೀನ: ಯಾರು ಎಲ್ಲಿಗೆ ಕರೆದರೂ ಹೋಗದೆ ಮನೆಯಲ್ಲೇ ಇರುವುದರಿಂದ ನಿಮಗೆ, ಕುಟುಂಬದವರಿಗೆ ಲಾಭ. ಅದೃಷ್ಟಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net