

ಮೇಷ: ಕೀಲುನೋವು, ಎಲುಬಿನ ಸವಕಳಿ ಇತ್ಯಾದಿ ತೊಂದರೆಗಳ ಬಗ್ಗೆ ಹೆಚ್ಚಿನದಾದ ಎಚ್ಚರ, ಆರೈಕೆ ಇದ್ದೇ ಇರಲಿ. ಶುಭಸಂಖ್ಯೆ: 8
ವೃಷಭ: ಶಾರದೆಯನ್ನು ಭಕ್ತಿಯಿಂದ ಸ್ತುತಿಸಿ. ಮಕ್ಕಳ ಶಿಕ್ಷಣದ ವಿಷಯದಲ್ಲಿ ಸ್ಪಷ್ಟತೆ ಸಿಗಲು ಸಾಧ್ಯ. ಶುಭಸಂಖ್ಯೆ: 6
ಮಿಥುನ: ನೀವು ನಿರೀಕ್ಷಿಸಿಯೇ ಇರದ ಸ್ಥಳಕ್ಕೆ ವರ್ಗಾವಣೆ ಆಗುವ ಸಂಭವವಿದೆ. ಇದಕ್ಕೆ ಬೇಸರಿಸದೆ ತಯಾರಾಗಿರಿ. ಶುಭಸಂಖ್ಯೆ: 4
ಕಟಕ: ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು ಎಂಬ ಅನುಭವದ ಮಾತು ಮನಸ್ಸಿನಲ್ಲಿದ್ದರೆ ಕ್ಷೇಮವಿದೆ. ಶುಭಸಂಖ್ಯೆ: 9
ಸಿಂಹ: ಸುಲಭವಾದ ಮಾರ್ಗದಲ್ಲಿ ಹಣವನ್ನು ಗಳಿಸಬಹುದು ಎಂಬ ವಿಚಾರವನ್ನು ಕೈಬಿಡಿ. ಅದರಿಂದ ನಿರಾಳತೆ ಸಾಧ್ಯ. ಶುಭಸಂಖ್ಯೆ: 2
ಕನ್ಯಾ: ಮಹಾಗಣಪತಿಯನ್ನು ಭಕ್ತಿಯಿಂದ ಸ್ತುತಿಸಿ. ಸದ್ಯಕ್ಕೆ ಸಂಕಷ್ಟ ನಿವಾರಕ ಗಣೇಶ ಸ್ತೋತ್ರದ ಪಠಣ ಸೂಕ್ತವಾಗಿದೆ. ಶುಭಸಂಖ್ಯೆ: 7
ತುಲಾ: ಆತ್ಮೀಯರ ಬಳಿ ಬಿರುಕನ್ನು ತಂದಿಡುವಂತಹ ಜನರ ಬಗ್ಗೆ ಜಾಗ್ರತರಾಗುವ ಸಂದರ್ಭ ಅಧಿಕವಾಗಿದೆ. ಶುಭಸಂಖ್ಯೆ: 1
ವೃಶ್ಚಿಕ: ದುಷ್ಟರು ತಮ್ಮ ಯುಕ್ತವಲ್ಲದ ಬೇಡಿಕೆಯನ್ನು ಈಡೇರಿಸಲು ನಿಮ್ಮ ಬೆನ್ನುಹತ್ತುವ ಸಾಧ್ಯತೆಗಳು ಜಾಸ್ತಿ. ಎಚ್ಚರ. ಶುಭಸಂಖ್ಯೆ: 5
ಧನಸ್ಸು: ವಿನಾಕಾರಣ ಆರೋಪವನ್ನು ಎದುರಿಸುವ ಸಂದರ್ಭ ಬಂದೀತು. ತಾಳ್ಮೆಯಿಂದ ಇದ್ದು ಎಲ್ಲವನ್ನೂ ಎದುರಿಸಿ. ಶುಭಸಂಖ್ಯೆ: 3
ಮಕರ: ನಿಮ್ಮ ಕೆಲವು ಹವ್ಯಾಸಗಳಿಗೆ ವಿದಾಯವನ್ನು ಘೊಷಿಸುವ ಸಂದರ್ಭವೊಂದು ಸದ್ಯವೇ ಎದುರಾಗಬಹುದು. ಶುಭಸಂಖ್ಯೆ: 7
ಕುಂಭ: ನಿಶ್ಚಯವಾಗಿಯೂ ಗುರಿಯನ್ನು ತಲುಪುವ ಪ್ರತಿಭೆ ನಿಮ್ಮಲ್ಲಿದೆ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ: 5
ಮೀನ: ಚಿನ್ನಾಭರಣ ಖರೀದಿಗೆ ಅವಕಾಶ ಕೂಡಿಬರುವ ಸಾಧ್ಯತೆ ಜಾಸ್ತಿ. ಆದರೆ ಖಂಡಿತ ಸಾಲ ಮಾಡಲು ಹೋಗದಿರಿ. ಶುಭಸಂಖ್ಯೆ: 1