

ಮೇಷ: ಸುಕೋಮಲ ಮನೋಭಾವದಿಂದ ನೀವು ಸಂತೋಷದಲ್ಲಿರಬಹುದು. ಆದರೂ ಸ್ವಲ್ಪ ಕಾಠಿಣ್ಯತೆ ತೋರಿಸಿ. ಶುಭಸಂಖ್ಯೆ: 3
ವೃಷಭ: ನಿಮ್ಮದಾದ ಕಾರ್ಯಯೋಜನೆಗಳನ್ನು ಜಾಗರೂಕತೆಯಿಂದ ಸಾಕಾರಗೊಳಿಸುವ ಉತ್ಸಾಹ ಉಂಟಾಗಲು ಸಾಧ್ಯ. ಶುಭಸಂಖ್ಯೆ: 2
ಮಿಥುನ: ನಿಮ್ಮ ಸ್ನೇಹವೃತ್ತದಿಂದ ಯಾರನ್ನೂ ದೂರ ಮಾಡಬೇಡಿ. ದೂರವಾದ ಕೆಲವರು ನಿಮಗೆ ಸಹಕರಿಸಲಿದ್ದಾರೆ. ಶುಭಸಂಖ್ಯೆ: 7
ಕಟಕ: ಬರಿದೇ ಪೀಡನೆಯನ್ನು ನೀಡುವವರು ಸಿಗುತ್ತಾರೆ. ಆದರೆ ನಿಮ್ಮ ದಾರಿ ಸ್ಪಷ್ಟವಾಗಿದ್ದರೆ ಕಾರ್ಯಸಿದ್ಧಿಗೆ ಕಷ್ಟವೇನಿಲ್ಲ. ಶುಭಸಂಖ್ಯೆ: 8
ಸಿಂಹ: ಹೊಸದಾಗಿ ಸಾಲ ಮಾಡಲು ಪ್ರಯತ್ನಿಸದಿರಿ. ಇದ್ದಷ್ಟೇ ಹಣವನ್ನು ಜಾಣತನದಿಂದ ಬಳಸಿದರೆ ಲಾಭವಿದೆ. ಶುಭಸಂಖ್ಯೆ: 4
ಕನ್ಯಾ: ಭಕ್ತಿಪೂರ್ವಕವಾಗಿ ಶಿವನನ್ನು ಧ್ಯಾನಿಸುತ್ತಿರಿ. ವ್ಯಾಜ್ಯವೊಂದರ ಪರಿಹಾರ ಶೀಘ್ರದಲ್ಲಿಯೇ ಸಾಧ್ಯವಾಗಲಿದೆ. ಶುಭಸಂಖ್ಯೆ: 1
ತುಲಾ: ನಿಮ್ಮ ಕೋಪದ ಸ್ವಭಾವದಿಂದ ಸಮಸ್ಯೆ ಉಂಟಾದೀತು. ಕಾರಣವಿರದೆ ಭಾವನಾತ್ಮಕ ಆವೇಶ ಬೇಡವೇ ಬೇಡ. ಶುಭಸಂಖ್ಯೆ: 6
ವೃಶ್ಚಿಕ: ಕುಟುಂಬದ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ಕಗ್ಗಂಟಾದ ಕಾರ್ಯವೊಂದು ಸುಲಭವಾಗಿ ಸಿದ್ಧಿಸಲಿದೆ. ಶುಭಸಂಖ್ಯೆ: 5
ಧನುಸ್ಸು: ಸ್ನೇಹಿತರು ನಿಮ್ಮ ದಾರಿಯಲ್ಲಿರá-ವ ಬಿಕ್ಕಟ್ಟುಗಳನ್ನು ಪರಿಹರಿಸುವ ದೀಪಗಳಾಗುವ ಸಾಧ್ಯತೆಗಳು ಅಧಿಕವಾಗಿವೆ. ಶುಭಸಂಖ್ಯೆ: 9
ಮಕರ: ಜೀವನದಲ್ಲಿ ಹೊಸದೇ ಶಕ್ತಿ, ಉತ್ಸಾಹಗಳು ಒದಗಿಬರಲು ಶ್ರೀಹರಿಯನ್ನು ಶ್ರದ್ಧೆ, ಭಕ್ತಿಯಿಂದ ಪ್ರಾರ್ಥಿಸಿಕೊಳ್ಳಿ. ಶುಭಸಂಖ್ಯೆ: 3
ಕುಂಭ:ಗೆಲುವು ಸಾಧಿಸಲು ಯಾವಾಗಲೂ ಮನುಷ್ಯಪ್ರಯತ್ನ ಬೇಕೇ ಬೇಕು. ಅದರ ಜತೆ ಕುಲದೇವರನ್ನೂ ಸ್ತುತಿಸಿ. ಶುಭಸಂಖ್ಯೆ: 2
ಮೀನ: ಸಂಗಾತಿಯ ಆರೋಗ್ಯದ ಬಗ್ಗೆ ಗಮನಹರಿಸಿ. ಶಾರೀರಿಕ ಆಯಾಸ ಇದ್ದರೆ ವೈದ್ಯರ ಜತೆ ಸಮಾಲೋಚಿಸಿ. ಶುಭಸಂಖ್ಯೆ: 7