ವಿಸ್ತೃತ ಲಾಕ್​ಡೌನ್​ ಅವಧಿಯಲ್ಲಿ ಈ ರಾಶಿಯವರ ಮಕ್ಕಳಿಗೆ ಯಶಸ್ಸು ದೊರೆಯಲಿದೆ

Nitya-Bhavishya-vvani-1-2-1
Published on

ಮೇಷ: ವ್ಯವಹಾರದಲ್ಲಿ ನಿರೀಕ್ಷಿತ ಪ್ರಮಾಣದ ಲಾಭ ಸಿಗದು. ಈ ಬಗ್ಗೆ ಹೆಚ್ಚೇನೂ ಚಿಂತಿಸಬೇಡಿ. ಆದಿತ್ಯಹೃದಯ ಪಠಿಸಿ. ಶುಭಸಂಖ್ಯೆ: 2

ವೃಷಭ: ನೆರೆಹೊರೆಯವರ ಜತೆ ಭಿನ್ನಾಭಿಪ್ರಾಯ ಬರಲಿದೆ. ಆತ್ಮೀಯರ ಭೇಟಿಯಾಗಲಿದ್ದೀರಿ. ಮಾರುತಿಯ ಧ್ಯಾನ ಮಾಡಿ. ಶುಭಸಂಖ್ಯೆ: 5

ಮಿಥುನ: ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಖರ್ಚುಗಳ ಹೊರೆ ಸರಿದೂಗಿಸಲು ಸಾಲ ಮಾಡಬೇಕಾದೀತು. ಶುಭಸಂಖ್ಯೆ: 8

ಕಟಕ: ಮಕ್ಕಳಿಗೆ ಯಶಸ್ಸು ದೊರೆಯಲಿದೆ. ಉಪಯುಕ್ತ ಸಲಹೆಗಳು ಸಿಗುವುದರಿಂದ ಅವರೂ ಸಂತಸಪಡುವರು. ಶುಭಸಂಖ್ಯೆ: 1

ಸಿಂಹ: ಮಾತಿನಲ್ಲಿ ಸಣ್ಣತನ ತೋರಿಸಬೇಡಿ. ನಿಮ್ಮ ಘನತೆ, ಗೌರವಗಳನ್ನು ಕಾಪಾಡಿಕೊಳ್ಳಲು ಇದು ಅನಿವಾರ್ಯವಾಗಿದೆ. ಶುಭಸಂಖ್ಯೆ: 4

ಕನ್ಯಾ: ದಿಢೀರನೆ ಧನಲಾಭವಾದರೂ ನಿಮ್ಮ ವಿವೇಕವನ್ನು ಕಳೆದುಕೊಳ್ಳಬೇಡಿ. ಸರಿಯಾದ ದಿಕ್ಕಿನಲ್ಲಿ ಚಿಂತಿಸಿದರೆ ಒಳಿತು. ಶುಭಸಂಖ್ಯೆ: 7

ತುಲಾ: ಆನ್​ಲೈನ್ ವ್ಯವಹಾರಗಳಲ್ಲಿ ಎಚ್ಚರವಿರಲಿ. ನಿಮ್ಮ ಇತಿಮಿತಿಗಳನ್ನು ಅರಿತುಕೊಂಡು ನಡೆದರೆ ನಿಮಗೇ ಉತ್ತಮ. ಶುಭಸಂಖ್ಯೆ: 3

ವೃಶ್ಚಿಕ: ಕೈಗೊಂಡ ಕೆಲಸಗಳು ಕುಲದೇವರ ಕೃಪೆಯಿಂದ ಸರಾಗವಾಗಿ ಸಾಗುವುವು. ಬಡವರಿಗೆ ದಾನ ಮಾಡಿ. ಶುಭಸಂಖ್ಯೆ: 6

ಧನಸ್ಸು: ಪಾಲುಗಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಬರಬಹುದು. ಮಾತಿನಲ್ಲಿ ಸ್ವಲ್ಪ ನಯ ವಿನಯ ರೂಢಿಸಿಕೊಳ್ಳಿ. ಶುಭಸಂಖ್ಯೆ: 9

ಮಕರ: ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಆದರೆ ಆ ಬಗ್ಗೆ ತುಂಬ ಉದ್ವೇಗ ಬೇಡ. ವೆಂಕಟೇಶನನ್ನು ಸ್ತುತಿಸಿ. ಶುಭಸಂಖ್ಯೆ: 5

ಕುಂಭ: ಕೆಲಸದ ಬಗ್ಗೆ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುವರು. ಆತ್ಮೀಯ ಮಿತ್ರರಿಂದ ಧನಸಹಾಯ ಸಿಗಲಿದೆ. ಶುಭಸಂಖ್ಯೆ: 2

ಮೀನ: ಹಣಕಾಸು ವ್ಯವಹಾರದ ಲೆಕ್ಕಪತ್ರಗಳನ್ನು ಸರಿಯಾಗಿಟ್ಟುಕೊಳ್ಳಿ. ಮನೆಯಲ್ಲಿ ಶಾಂತಿಯ ವಾತಾವರಣ ನೆಲೆಸಲಿದೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net