ನಿತ್ಯ ಭವಿಷ್ಯ: ಈ ರಾಶಿಯವರ ಕನಸುಗಳು ನನಸಿನ ರೂಪ ಪಡೆದುಕೊಳ್ಳಲಿವೆ

Nitya-Bhavishya-vvani-1-2
Published on

ಮೇಷ: ಇಂದೇ ಎಲ್ಲ ಕೆಲಸ ಮಾಡಿ ಮುಗಿಸಿಬಿಡಬೇಕು ಎಂಬ ಒತ್ತಡವನ್ನು ತಂದುಕೊಳ್ಳದಿರಿ. ನೀವೇ ವಿಜಯವನ್ನು ಸಾಧಿಸುತ್ತೀರಿ. ಶುಭಸಂಖ್ಯೆ: 9

ವೃಷಭ: ದೂರದ ಊರಿಗೆ ವರ್ಗಾವಣೆಯ ಆದೇಶ ಬಂದು ಗೊಂದಲ ಉಂಟುಮಾಡಬಹುದು. ಎಚ್ಚರಿಕೆ ವಹಿಸಿದರೆ ಉತ್ತಮ. ಶುಭಸಂಖ್ಯೆ: 8

 ಮಿಥುನ: ಮಕ್ಕಳನ್ನು ಜತೆ ಆತ್ಮೀಯವಾಗಿ ಬೆರೆತು ಮಾತಾಡಿ. ನಿಮ್ಮ ಪ್ರೋತ್ಸಾಹದ ಮಾತುಗಳಿಂದ ಅವರೂ ಸಂತಸಪಡಲಿದ್ದಾರೆ. ಶುಭಸಂಖ್ಯೆ: 7

ಕಟಕ: ಜೀವನಸಂಗಾತಿಯ ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ಅವಶ್ಯವಾಗಿದೆ. ಭಕ್ತಿಯಿಂದ ಧನ್ವಂತರೀ ಸ್ತೋತ್ರ ಪಠಿಸಿ. ಶುಭಸಂಖ್ಯೆ: 1

ಸಿಂಹ: ದೂರದ ನೆಂಟರ ಆಗಮನದಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆದುಕೊಳ್ಳುವ ಯೋಗ ಒದಗಿಬರಲಿದೆ. ಶುಭಸಂಖ್ಯೆ: 2

ಕನ್ಯಾ: ಹಲವು ವಿಚಾರಗಳಲ್ಲಿ ನಿಮ್ಮ ಸಂತೋಷಕ್ಕೆ ಕಾರಣವಾಗುವ ಅದೃಷ್ಟ ಕೂಡಿಬರಲಿದೆ. ಆದರೆ, ಅಹಂಕಾರಪಡಬೇಡಿ. ಶುಭಸಂಖ್ಯೆ: 3

ತುಲಾ: ಹಿರಿಯರ ಅಪೇಕ್ಷೆಗಳೆಲ್ಲ ಅಧಿಕವಾಗಿಯೇ ಇರುತ್ತವೆ. ಅವರ ಬಗ್ಗೆ ಸಿಟ್ಟಾಗದೆ ಶಾಂತವಾಗಿ ಮಾತಾಡಿ. ನಿರಾಳರಾಗುವಿರಿ. ಶುಭಸಂಖ್ಯೆ: 6

ವೃಶ್ಚಿಕ: ಹಲವು ದಿನಗಳ ಕನಸುಗಳು ನನಸಿನ ರೂಪ ಪಡೆದುಕೊಳ್ಳಲಿವೆ. ಮಹಾಗಣಪತಿಯನ್ನು ದೂರ್ವೆಗಳಿಂದ ಆರಾಧಿಸಿ. ಶುಭಸಂಖ್ಯೆ: 5

ಧನುಸ್ಸು: ಕಾಗದಪತ್ರಗಳ ಕುರಿತು ನಿರ್ಲಕ್ಷ್ಯ ತೋರಬೇಡಿ. ಸದ್ಯದಲ್ಲೇ ಬೇಕಾಗಲಿರುವ ದಾಖಲೆಯ ಬಗೆಗೆ ಹೆಚ್ಚಿನ ಎಚ್ಚರವಿರಲಿ. ಶುಭಸಂಖ್ಯೆ: 4

ಮಕರ: ಶ್ವಾಸಕೋಶದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈದ್ಯರ ಅನುಮತಿಯ ನಂತರವೇ ಕಚೇರಿ ಕಾರ್ಯ ನಿರ್ವಹಿಸಿ. ಶುಭಸಂಖ್ಯೆ: 9

ಕುಂಭ: ಹತ್ತಿರದವರು ಬೇಗನೆ ನೆರವು ನೀಡುವುದಕ್ಕೆ ಬರಲಿದ್ದಾರೆ. ಒಳ್ಳೆಯ ಬೆಳವಣಿಗೆಯ ಕಡೆಗೆ ಚಾಲನೆ ದೊರೆಯಲಿದೆ. ಶುಭಸಂಖ್ಯೆ: 6

ಮೀನ: ಕುಲದೇವರ ಆರಾಧನೆಯಿಂದ ನಿಮ್ಮದಾದ ಹೊಸ ಕಾರ್ಯಯೋಜನೆಗಳಲ್ಲಿ ದೊಡ್ಡ ಸಾಫಲ್ಯವನ್ನು ಹೊಂದುವಿರಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net