ನಿತ್ಯ ಭವಿಷ್ಯ: ಈ ರಾಶಿಯವರಿಗೆ ವ್ಯಾಜ್ಯಗಳ ವಿಚಾರದಲ್ಲಿ ವರ್ತಮಾನ ಅನುಕೂಲಕರವಾಗಿದೆ

Nitya-Bhavishya-vvani-1-2-1
Published on

ಮೇಷ: ಉನ್ನತ ವಿದ್ಯಾಭ್ಯಾಸದ ಬಗ್ಗೆ ಇಚ್ಛಿಸುವವರಿಗೆ ಉತ್ತಮ ಅವಕಾಶಗಳು ಲಭ್ಯ. ಪ್ರತಿಭಾವಂತ ಜನರಿಗೆ ಪ್ರೋತ್ಸಾಹ ಸಿಗಲಿದೆ. ಶುಭಸಂಖ್ಯೆ: 6

ವೃಷಭ: ಸಮಾಜದ ಗಣ್ಯರ ಜತೆಗಿನ ಸಂಪರ್ಕದಿಂದಾಗಿ ನಿಮ್ಮಲ್ಲೂ ನಾಯಕತ್ವದ ಶಕ್ತಿ ಆವಿರ್ಭವಿಸಲು ಅವಕಾಶ ಒದಗಿಬರಲಿದೆ. ಶುಭಸಂಖ್ಯೆ: 4

ಮಿಥುನ: ಮನೆಯಲ್ಲಿ ಕಲಹ ಏರ್ಪಡದಂತೆ ಎಚ್ಚರಿಕೆ ವಹಿಸಿ. ಸಂಗಾತಿಯಿಂದ ನಿಮ್ಮ ತಾಳ್ಮೆಗೆ ಪ್ರಶಂಸೆಯೂ ದೊರೆಯಲಿದೆ. ಶುಭಸಂಖ್ಯೆ: 1

ಕಟಕ: ವೇಗದ ಬದಲಾವಣೆಗಳಿಗಾಗಿ ಕಾಯುತ್ತಿದ್ದೀರಿ. ನಿಧಾನವಾಗಿದ್ದರೂ ಕ್ರಿಯಾಶೀಲರಾಗಿರಿ. ಅದರಿಂದ ಧನಲಾಭವಿದೆ. ಶುಭಸಂಖ್ಯೆ: 8

ಸಿಂಹ: ಯಶಸ್ಸಿನ ಎತ್ತರವನ್ನು ಏರಲು ಕಾದಿರುವ ರಾಜಕಾರಣಿಗಳ ಪಾಲಿಗೆ ಸಹಜವಾದ ಅವಕಾಶ ಎದುರಾಗಲಿದೆ. ಶುಭಸಂಖ್ಯೆ: 5

ಕನ್ಯಾ: ಮಕ್ಕಳಿಂದ ನೀವು ಹತ್ತುಹಲವು ರೀತಿಯ ಪ್ರಯೋಜನಗಳ ನಿರೀಕ್ಷೆ ಮಾಡಬಹುದು. ಚಿಂತಿಸದೆ ನಿರಾಳರಾಗಿ. ಶುಭಸಂಖ್ಯೆ: 2

ತುಲಾ: ವ್ಯಾಜ್ಯಗಳ ವಿಚಾರದಲ್ಲಿ ನಿಮಗೆ ವರ್ತಮಾನವು ಅನುಕೂಲಕರವಾಗಿದೆ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 9

ವೃಶ್ಚಿಕ: ಮಹಾವಿಷ್ಣುವನ್ನು ತುಳಸಿದಳಗಳಿಂದ ಅರ್ಚಿಸಿ. ಕೈಗೊಂಡ ಪ್ರಮುಖ ಕಾರ್ಯಗಳಲ್ಲಿ ಸಫಲತೆ ಸಿದ್ಧಿಯಾಗಲಿದೆ. ಶುಭಸಂಖ್ಯೆ: 1

ಧನಸ್ಸು: ಹಿರಿಯರ ಸಲಹೆ ಸೂಚನೆಗಳಿಂದ ಪ್ರಯೋಜನ ಪಡೆದುಕೊಳ್ಳಿ. ಸಿಕ್ಕಿದ ಅವಕಾಶವನ್ನು ಬಿಡದಿರಿ. ಶುಭಸಂಖ್ಯೆ: 8

ಮಕರ: ಕೆಲವು ಅಭ್ಯಾಸಗಳನ್ನು ಅಂಟಿಸಿಕೊಂಡು ತಪ್ಪು ಮಾಡುತ್ತಿದ್ದೀರಿ. ಹೊಸ ವ್ಯಕ್ತಿಯಾಗುವ ಅವಕಾಶಕ್ಕೆ ಸಜ್ಜಾದರೆ ಸೂಕ್ತ. ಶುಭಸಂಖ್ಯೆ: 3

ಕುಂಭ: ಯೋಗ್ಯವಾದ ನಿಮ್ಮ ನಡೆಯನ್ನು ಕೂಡ ರಕ್ತಸಂಬಂಧಿಗಳೇ ಟೀಕೆ ಮಾಡಬಹುದು. ಆದರೆ ಹಿಂಜರಿಯದೆ ಗೆಲ್ಲಿ. ಶುಭಸಂಖ್ಯೆ: 7

ಮೀನ: ಎಷ್ಟೇ ವಿರೋಧ ಬಂದರೂ ಕೋಪದಿಂದ ಉತ್ತರಿಸುವ ಉದ್ವೇಗಕ್ಕೆ ಒಳಗಾಗದಿರಿ. ಶಾಂತರಾಗಿದ್ದರೆ ಲಾಭವಿದೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net