

ಮೇಷ: ಮಾತು ಕೊಡುವ ಮೊದಲು ನಿಮ್ಮ ಶಕ್ತಿಯ ಬಗ್ಗೆ ಯೋಚಿಸಿ. ನಂತರ ಪರಿತಪಿಸದೆ ಇರಲು ಎಚ್ಚರ ವಹಿಸಿ. ಅದೃಷ್ಟ ಸಂಖ್ಯೆ: 7
ವೃಷಭ: ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಉತ್ತಮ. ಮಾತಿನ ವಿಚಾರದಲ್ಲಲ್ಲ, ಆಹಾರದ ವಿಚಾರದಲ್ಲೂ ಮುಖ್ಯ. ಅದೃಷ್ಟ ಸಂಖ್ಯೆ: 9
ಮಿಥುನ: ಕೆಲಸಗಳು ನಿಧಾನವಾಗಿ ಸಾಗಿದಂತೆ ಅನಿಸಬಹುದು. ಬೇಗ ಆಗಲು ಬಹಳ ಶ್ರಮ, ಒತ್ತಡ ಹಾಕಬೇಕು. ಅದೃಷ್ಟ ಸಂಖ್ಯೆ: 5
ಕಟಕ: ದುಷ್ಮನ್ ಕಹಾಂ ಹೈ ಅಂದರೆ ಆಸುಪಾಸು ನೋಡುವ ಸ್ಥಿತಿ! ಯಾರನ್ನು ನಂಬುವುದೆಂದು ಚೆನ್ನಾಗಿ ಆಲೋಚಿಸಿ. ಅದೃಷ್ಟ ಸಂಖ್ಯೆ: 4
ಸಿಂಹ: ಸಂಬಂಧಿಸದ ವಿಚಾರಕ್ಕೆ ನೀವು ತಲೆ ಹಾಕುವುದಿಲ್ಲ. ಹಾಗೆ ಮಾಡಿ ಅವಮಾನಕ್ಕೆ ಒಳಗಾಗಬೇಕಾದೀತು. ಅದೃಷ್ಟ ಸಂಖ್ಯೆ: 6
ಕನ್ಯಾ: ಆಲಸ್ಯ ನಿಮ್ಮನ್ನು ಕಾಡುತ್ತಿದೆ. ಮಾಡಿದ ಕೆಲಸವನ್ನೇ ಮತ್ತೆ ಮಾಡುತ್ತಿರುವ ಅನುಭವ. ಸದ್ಯ ಸುಮ್ಮನೆ ಇರಬೇಕಿದೆ. ಅದೃಷ್ಟ ಸಂಖ್ಯೆ: 2
ತುಲಾ: ನಿಮ್ಮ ಮೇಲೆ ಆರೋಪ ಬರಲಿದೆ. ಆರೋಪ ಮಾಡುವ ವ್ಯಕ್ತಿಯ ಮೇಲೆ ಕೋಪ ಮಾಡುವಿರಿ. ತಾಳ್ಮೆ ಇರಲಿ. ಅದೃಷ್ಟ ಸಂಖ್ಯೆ: 1
ವೃಶ್ಚಿಕ: ಮಾತು ಬೆಳ್ಳಿ, ಮೌನ ಬಂಗಾರ ಎಂಬ ವಿಚಾರ ನಿಮಗೆ ತಿಳಿದಿದೆ. ಅದನ್ನು ಪಾಲಿಸಿದರೆ ಸದ್ಯ ಧನ, ಮಾನಹಾನಿ ಆಗದು. ಅದೃಷ್ಟ ಸಂಖ್ಯೆ: 3
ಧನಸ್ಸು: ಪಕ್ಕದ ವ್ಯಕ್ತಿಯ ಬಳಿ ನಿಮ್ಮಲ್ಲಿಲ್ಲದ ಸೌಕರ್ಯ ಕಂಡು ಅರಿವಿಲ್ಲದೆ ಅಸೂಯೆ ಉಂಟಾಗುತ್ತದೆ. ಜಾಗ್ರತೆ ಇರಲಿ. ಅದೃಷ್ಟ ಸಂಖ್ಯೆ: 9
ಮಕರ: ಸಂದರ್ಭವನ್ನು ಹೊಸ ಬಗೆಯಲ್ಲಿ ನೋಡುವ, ಎದುರಿಸುವ ಕಲೆಯನ್ನು ಅಳವಡಿಸಿಕೊಳ್ಳಿ. ಪರಿವರ್ತನೆ ಅನಿವಾರ್ಯ. ಅದೃಷ್ಟ ಸಂಖ್ಯೆ: 5
ಕುಂಭ: ನೆಂಟರ ಆಗಮನ ಅಥವಾ ಹೊರಗೆ ಸುತ್ತಾಡುವ ನೆಪದಲ್ಲಿ ನಿಮ್ಮ ಬಾಯಿರುಚಿಯ ಆಸೆ ತಣಿಯಲಿದೆ. ಅದೃಷ್ಟ ಸಂಖ್ಯೆ: 4
ಮೀನ: ನೀವು ಒಬ್ಬರಿಗೆ ನೆರವಾಗುವ ಉದ್ದೇಶದಿಂದ ಹಣ ನೀಡಿದರೂ ಅದು ಸದುಪಯೋಗ ಆಗುವ ಸಾಧ್ಯತೆ ಕಡಿಮೆ. ಅದೃಷ್ಟ ಸಂಖ್ಯೆ: 6