

ಮೇಷ: ಇಂಜಿನಿಯರ್ಗಳು, ವಜ್ರಾಭರಣ, ರತ್ನಪಡಿ ವ್ಯಾಪಾರಿಗಳು, ಸಾಲ ವಸೂಲಿ ಮಾಡುವವರಿಗೆ ಅಪಕೀರ್ತಿಯ ಸಾಧ್ಯತೆ ಇದೆ. ಶುಭಸಂಖ್ಯೆ: 4
ವೃಷಭ: ಮನಸ್ಸಿನ ಇಚ್ಛೆಗಳೆಲ್ಲ ಖಂಡಿತವಾಗಿ ನೆರವೇರಲಿವೆ. ಕುಹಕ ಬುದ್ಧಿಯ ಜನರ ಮಾತಿಗೆ ಗಮನ ಕೊಡಬೇಡಿ. ಶುಭಸಂಖ್ಯೆ: 6
ಕಟಕ: ಎಲ್ಲ ಬಗೆಯ ಉಪಾಯಗಳನ್ನು ಹೂಡಿ ವಿರೋಧಿಗಳನ್ನು ಎದುರಿಸಿ. ಆದರೆ ದೈಹಿಕ ಹೋರಾಟ ಮಾಡುವುದು ಬೇಡ. ಶುಭಸಂಖ್ಯೆ: 5
ಮಿಥುನ: ಮಕ್ಕಳ ವಿಷಯದಲ್ಲಿ ಸ್ವಲ್ಪ ಕಠಿಣವಾಗಿ ವರ್ತಿಸುವುದು ತಪ್ಪಲ್ಲ. ಆದರೆ ಅದು ಅತಿ ಎನಿಸದ ಹಾಗೆ ಗಮನ ಹರಿಸಿ. ಶುಭಸಂಖ್ಯೆ: 2
ಸಿಂಹ: ಶತ್ರುವಿನ ಶತ್ರು ನಿಮ್ಮ ಮಿತ್ರ ಎಂದು ನೆನಪಿಟ್ಟುಕೊಳ್ಳಿ. ಆದರೆ ಅದೇ ಅಂತಿಮ ಸತ್ಯವಲ್ಲ ಎಂಬುದು ತಿಳಿದಿರಲಿ. ಶುಭಸಂಖ್ಯೆ: 3
ಕನ್ಯಾ: ಶ್ರದ್ಧಾಪೂರ್ವಕವಾಗಿ ಪರಶಿವನ ಧ್ಯಾನ ಮಾಡಿ. ಇದರಿಂದ ಸಂಕಲ್ಪಿಸಿದ ಕಾರ್ಯಗಳಲ್ಲಿ ಬೇಗನೆ ಯಶಸ್ಸು ಲಭಿಸುವುದು. ಶುಭಸಂಖ್ಯೆ: 1
ತುಲಾ: ಗ್ರಹಗತಿಯ ಏರಿಳಿತಗಳಿಂದ ಬಳಲುತ್ತಿದ್ದೀರಿ. ನವಗ್ರಹ ಸ್ತೋತ್ರವನ್ನು ಒಂಬತ್ತು ಬಾರಿ ಪಠಿಸಿದರೆ ಒಳಿತಾಗಲಿದೆ. ಶುಭಸಂಖ್ಯೆ: 9
ವೃಶ್ಚಿಕ: ಕಚೇರಿಯಲ್ಲಿ ವ್ಯಂಗ್ಯದ ಮಾತುಗಳಿಗೆ ಸಿಟ್ಟಾಗದಿರಿ. ಸಹನೆಯಿಂದ ಯಶಸ್ಸು ದೊರೆಯುವುದು ನಿಶ್ಚಿತವಾಗಿದೆ. ಶುಭಸಂಖ್ಯೆ: 7
ಧನುಸ್ಸು: ತೀರ ಹತ್ತಿರದ ಜನರೇ ದೂರವಾದಾರು. ಆದರೆ ಅದಕ್ಕೆ ಬೆದರದೆಯೇ ನಿಮ್ಮದಾದ ಕರ್ತವ್ಯಗಳನ್ನು ನಿಭಾಯಿಸಿ. ಶುಭಸಂಖ್ಯೆ: 8
ಕುಂಭ: ಅನೇಕ ಹೊಸ ಖರ್ಚುಗಳು ಸೇರಿಕೊಳ್ಳಬಹುದು. ಆದರೆ ಅತಿಯಾದ ಜಿಪುಣತನದಿಂದ ನಿಮಗೆ ಹಾನಿಯೇ ಉಂಟಾದೀತು. ಶುಭಸಂಖ್ಯೆ: 4
ಮಕರ: ಮಾನಸಿಕ ಒತ್ತಡಗಳಿಂದ ಕಾರ್ಯಕ್ಷಮತೆ ಕಳೆದುಕೊಳ್ಳದಿರಿ. ಧೈರ್ಯದಿಂದ ಮುನ್ನುಗ್ಗಿದರೆ ನಿಮಗೇ ಗೆಲುವಾಗಲಿದೆ. ಶುಭಸಂಖ್ಯೆ: 6
ಮೀನ: ಶ್ರೀ ದುರ್ಗಾಪರಮೇಶ್ವರಿಯ ಕೃಪೆಯಿಂದ ವೃತ್ತಿಗೆ ಸಂಬಂಧಿಸಿದಂತೆ ಅನಿರೀಕ್ಷಿತವಾದ ಶುಭವಾರ್ತೆಯೊಂದು ಸಿಗಲಿದೆ. ಶುಭಸಂಖ್ಯೆ: 5