

ಮೇಷ: ನಿಮ್ಮ ಕುತರ್ಕಗಳಿಂದ ಜನಸಂಪರ್ಕ ದೂರ ಸಾಗಲಿದೆ. ಮನುಷ್ಯಜೀವಿತಕ್ಕೆ ಎಲ್ಲರ ಸಹಕಾರ ಕೂಡ ಮುಖ್ಯ ಎಂದರಿಯಿರಿ. ಶುಭಸಂಖ್ಯೆ: 9
ವೃಷಭ: ನಿಮ್ಮ ಕಾರ್ಯಗಳು ಸುಗಮವಾಗಿ ಸಾಗಲಿವೆ. ನಿಮ್ಮ ಕೆಲಸಕ್ಕೆ ಸಂಗಾತಿ, ಮಕ್ಕಳು ಕೂಡ ಸಹಾಯ ಮಾಡುವರು. ಶುಭಸಂಖ್ಯೆ: 8
ಮಿಥುನ: ಆಲಸ್ಯದ ಕಾರಣದಿಂದ ನಿರ್ದಿಷ್ಟ ಗುರಿಯನ್ನು ಶೀರ್ಘವಾಗಿ ತಲುಪಲು ಅಸಾಧ್ಯ. ಭಕ್ತಿಯಿಂದ ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 7
ಕಟಕ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಆರೋಗ್ಯದ ವಿಚಾರದಲ್ಲಿ ಉದಾಸೀನ ಮಾಡುವುದು ಬೇಡ. ಶುಭಸಂಖ್ಯೆ: 3
ಸಿಂಹ: ಯಾವುದೇ ಥರದ ಪೂರ್ವ ಯೋಜನೆ ಇಲ್ಲದೆ ಹಣ ಹೂಡಿದಲ್ಲಿ ಅಧಿಕ ಪ್ರಮಾಣದ ಹಾನಿ ಅನುಭವಿಸುವಿರಿ. ಶುಭಸಂಖ್ಯೆ: 2
ಕನ್ಯಾ: ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ಮನೆವೈದ್ಯರ ಸಲಹೆ ಸ್ವೀಕರಿಸಿ. ಶುಭಸಂಖ್ಯೆ: 1
ತುಲಾ: ಮೇಲಧಿಕಾರಿಗಳ ಮೆಚ್ಚುಗೆಯಿಂದಾಗಿ ಸಹ ಕೆಲಸಗಾರರ ಅಸೂಯೆಗೆ ಒಳಗಾಗುವಿರಿ. ಮಾರುತಿಯನ್ನು ಪ್ರಾರ್ಥಿಸಿ. ಶುಭಸಂಖ್ಯೆ: 6
ವೃಶ್ಚಿಕ: ಸಹಾಯ ಮಾಡಿದ ಗುರುಹಿರಿಯರನ್ನು ಗೌರವಿಸಿ. ಮುಂದೆ ನಿಮಗೆ ಉತ್ತಮವಾದ ದಿನಗಳು ಬಂದೊದಗಲಿವೆ. ಶುಭಸಂಖ್ಯೆ: 5
ಧನಸ್ಸು: ಕಟ್ಟಡ ವಿನ್ಯಾಸಕಾರರಿಗೆ ಅತ್ಯುತ್ತಮ ದಿನ. ಪ್ರಮುಖವಾದ ಅವಕಾಶವೊಂದು ದೊರೆಯುವ ಸಾಧ್ಯತೆಯಿದೆ. ಶುಭಸಂಖ್ಯೆ: 4
ಮಕರ: ಸಂಬಂಧದ ನೆಲೆಯನ್ನು ಅರಿಯುವಿರಿ. ನಿಮ್ಮ ಕಾರ್ಯಗಳನ್ನು ಸಾರ್ಥಕವಾಗಿಸಲು ಮಕ್ಕಳ ಸಹಕಾರ ಸಿಗಲಿದೆ. ಶುಭಸಂಖ್ಯೆ: 9
ಕುಂಭ: ಕೆಲವು ಹಿತೈಷಿಗಳ ಸತತ ಪ್ರಯತ್ನದಿಂದಾಗಿ ನಿಮ್ಮ ಮನಸ್ಸಿಗೆ ಒಪ್ಪುವಂಥ ಹೊಸ ಕೆಲಸ ದೊರೆಯಬಹುದಾಗಿದೆ. ಶುಭಸಂಖ್ಯೆ: 8
ಮೀನ: ಎಷ್ಟೋ ದಿನಗಳಿಂದ ಸಾಧಿಸಲು ಸಾಧ್ಯವಾಗದ ವಿಚಾರವೊಂದು ಸಾಕಾರ ಸಿದ್ಧಿಯನ್ನು ಹೊಂದುವ ಕಾಲ ಬಂದಿದೆ. ಶುಭಸಂಖ್ಯೆ: 7