

ಮೇಷ: ಪಾರಂಪರಿಕ ವ್ಯವಹಾರಗಳಲ್ಲಿ ಮುನ್ನಡೆ. ಸಿನಿಮಾರಂಗದವರಿಗೆ ಶುಭದಿನ. ಸಿಎ ವ್ಯಾಸಂಗದಲ್ಲಿ ತೊಂದರೆಯಾಗಬಹುದು. ಶುಭಸಂಖ್ಯೆ: 5
ವೃಷಭ:ಸ್ನೇಹಿತರ ಸಹಕಾರ. ವಿವಾಹಕಾಂಕ್ಷಿಗಳಿಗೆ ಶುಭ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಇಷ್ಟ ದೇವನ್ನು ಭಕ್ತಯಿಂದ ಪೂಜಿಸಿ. ಶುಭಸಂಖ್ಯೆ:3
ಮಿಥುನ: ಹೊಸ ಕೆಲಸದಲ್ಲಿ ಜಯ ದೊರೆಯುವುದು. ಕಠಿಣ ಶ್ರಮದಿಂದ ಫಲ ಸಿಕ್ಕೇ ಸಿಗುವುದು. ಕುಟುಂಬದ ಸದಸ್ಯರಿಂದ ತೊಂದರೆ. ಶುಭಸಂಖ್ಯೆ: 8
ಕಟಕ: ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯಾಗುವುದು. ಆಹಾರ ವಿಷಯದಲ್ಲಿ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ಸಾಹ. ಶುಭಸಂಖ್ಯೆ: 1
ಸಿಂಹ: ಕಾರ್ವಿುಕ ವರ್ಗದವರಿಗೆ ಉತ್ತಮ ದಿನ. ಕರಕುಶಲ ವಸ್ತುಗಳ ತಯಾರಕರಿಗೆ ಶುಭವಾಗುವುದು. ಸ್ತ್ರೀಯರಿಗೆ ಕೆಲಸದಲ್ಲಿ ಒತ್ತಡ. ಶುಭಸಂಖ್ಯೆ: 6
ಕನ್ಯಾ: ಸ್ನೇಹಿತರ ಸಹಕಾರ ದೊರೆಯುವುದು. ಉದ್ಯೋಗದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಲಿದೆ. ಮಕ್ಕಳ ಆರೋಗ್ಯದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ:1
ತುಲಾ: ಯೋಜನೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುವುದು. ಕಟ್ಟಡ ವಿನ್ಯಾಸಕರಿಗೆ ಅಧಿಕ ಲಾಭ. ಮಾತುಗಳಿಂದ ಮುಜುಗರ. ಶುಭಸಂಖ್ಯೆ: 5
ವೃಶ್ಚಿಕ: ಆದಾಯದಲ್ಲಿ ಸ್ಥಿರತೆ ಇರುವುದು. ಪರಿಸರವಾದಿಗಳಿಗೆ ಗೌರವ ದೊರೆಯುವುದು. ಸ್ವಯಂ ಉದ್ಯೋಗಸ್ಥರಿಗೆ ಉತ್ತಮ ದಿನ. ಶುಭಸಂಖ್ಯೆ: 3
ಧನಸ್ಸು: ಬಂಧುಗಳಿಂದ ಸಮಸ್ಯೆಯಾಗುವುದು. ವಿದ್ಯಾರ್ಥಿ ಗಳಿಗೆ ಅನುಕೂಲವಿದೆ. ನೌಕರರಿಗೆ ಅಧಿಕಾರಿಗಳಿಂದ ಸಹಾಯ ಸಿಗುವುದು. ಶುಭಸಂಖ್ಯೆ: 2
ಮಕರ: ವೈದ್ಯರಿಗೆ ಮಾನಸಿಕ ವೇದನೆ ಕಾಡಲಿದೆ. ವಿಚ್ಛೇದಿತರಿಗೆ ಮರುವಿವಾಹ ಯೋಗವಿದೆ ಐಟಿ ಉದ್ಯೋಗಿಗಳಿಗೆ ಆದಾಯದಲ್ಲಿ ಏರಿಕೆ. ಶುಭಸಂಖ್ಯೆ: 9
ಕುಂಭ: ಬ್ಯಾಂಕಿನಿಂದ ಧನಸಹಾಯ ದೊರೆತು ಸಮಾಧಾನ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಬಂಧುಗಳಿಂದ ಅನುಕೂಲ. ಶುಭಸಂಖ್ಯೆ: 7
ಮೀನ: ಭೂಮಿ ವ್ಯವಹಾರಸ್ಥರಿಗೆ ವಿಶೇಷ ಆದಾಯ. ವಿದ್ಯುತ್ ಸ್ಥ್ಥಾವರದ ಕಾರ್ವಿುಕರು ಎಚ್ಚರದಿಂದಿರಿ. ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 1