

ಮೇಷ: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಶುಭವಾರ್ತೆ ಬರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಿ ನೆಮ್ಮದಿ. ಶುಭಸಂಖ್ಯೆ: 5
ವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ. ಬಂಧುಗಳಿಂದ ನಿರೀಕ್ಷಿತ ಸಹಕಾರ ಸಿಗಲಿದೆ. ದೈಹಿಕವಾಗಿ ಬಳಲುವಿಕೆ. ಧ್ಯಾನ ಮಾಡಿ.ಶುಭಸಂಖ್ಯೆ: 1
ಮಿಥುನ: ಗುತ್ತಿಗೆದಾರರಿಗೆ ಶುಭಫಲ. ನೇಕಾರರ ಮತ್ತು ಬಡಗಿ ಉದ್ಯೋಗದಲ್ಲಿ ಪ್ರಗತಿ. ಅವಕಾಶಗಳ ಸದುಪಯೋಗ ಮಾಡಿಕೊಳ್ಳುವಿರಿ. ಶುಭಸಂಖ್ಯೆ:9
ಕಟಕ: ವಿವಾಹ ವಿಚಾರದಲ್ಲಿ ತೊಂದರೆಯಾದೀತು. ಲೋಹದ ವಸ್ತುಗಳಿಂದ ಎಚ್ಚರ. ಲೇವಾದೇವಿಯ ವ್ಯವಹಾರದಿಂದ ದೂರವಿರಿ. ಶುಭಸಂಖ್ಯೆ: 7
ಸಿಂಹ: ಷೇರು ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ. ಖಾಸಗಿ ಉದ್ಯೋಗದಲ್ಲಿ ಬದಲಾವಣೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಶುಭಸಂಖ್ಯೆ: 3
ಕನ್ಯಾ: ತೈಲ ಮಾರಾಟದಿಂದ ಲಾಭವಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ. ಪ್ರಯಾಣದಲ್ಲಿ ಜಾಗೃತರಾಗಿರುವುದು ಉತ್ತಮ. ಶುಭಸಂಖ್ಯೆ: 7
ತುಲಾ: ಹಣಕಾಸಿನ ಮುಗ್ಗಟ್ಟು ಅಂತ್ಯವಾಗುವುದು. ಪ್ರಯಾಣದಲ್ಲಿ ಸಂತಸ. ಭೂ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಲು ಮರೆಯದಿರಿ. ಶುಭಸಂಖ್ಯೆ:2
ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಒಳ್ಳೆಯ ವ್ಯಾಪಾರವಾಗುವುದು. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ತಾಳುವಿರಿ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯ.ಶುಭಸಂಖ್ಯೆ: 6
ಧನಸ್ಸು: ಸಂಯಮದ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚು ಇದೆ. ಸಾಕುಪ್ರಾಣಿಗಳಿಂದ ತೊಂದರೆ. ಕೆಮಿಕಲ್ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 9
ಮಕರ: ವಿವಾಹ ವಿಚಾರದಲ್ಲಿ ಉತ್ತಮ ಬೆಳವಣಿಗೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿಯಿದೆ. ಆಹಾರ ಕ್ರಮದಲ್ಲಿ ಹೆಚ್ಚಿನ ಕಾಳಜಿವಹಿಸಿ. ಶುಭಸಂಖ್ಯೆ: 7
ಕುಂಭ: ರಾಜಕಾರಣಿಗಳಿಗೆ ಶುಭಸಮಯ ಬಂದಿದೆ. ಕಲಾವಿದರಿಗೆ ಮಾನಸಿಕ ಒತ್ತಡ ಅಧಿಕವಾಗಬಹುದು. ಕೃಷಿಕರಿಗೆ ಶುಭಫಲ ಕಾದಿದೆ. ಶುಭಸಂಖ್ಯೆ: 3
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ದಿನ. ಹಾಲು-ಹಣ್ಣು ವ್ಯಾಪಾರಸ್ಥರಿಗೆ ಲಾಭ. ಸಮಯ ಸಾಧಕರಿಂದ ಅಂತರವಿರಲಿ. ಶುಭಸಂಖ್ಯೆ:6