ನಿತ್ಯಭವಿಷ್ಯ: ಈ ರಾಶಿಯ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ

Nitya Bhavisya Vijayavani
Published on

ಮೇಷ: ಕಚೇರಿಯಲ್ಲಿ ತಾಳ್ಮೆ ಇರಲಿ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಧಾರ್ವಿುಕ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ:5

ವೃಷಭ: ಪತ್ನಿಯ ಆರೋಗ್ಯದ ವಿಚಾರದಲ್ಲಿ ಎಚ್ಚರವಹಿಸಿ. ಆಕಸ್ಮಿಕವಾಗಿ ಧನಲಾಭವಾಗಿ ಸಂತಸ. ಮಾನಸಿಕ ಒತ್ತಡ ಹೆಚ್ಚಾಗುವುದು. ಶುಭಸಂಖ್ಯೆ: 9

ಮಿಥುನ: ಹಿತಶತ್ರುಗಳ ಬಾಧೆ ಜಾಸ್ತಿ. ಸಮಾಜದಲ್ಲಿ ಮನ್ನಣೆ. ದೂರದ ಊರಿನಲ್ಲಿ ಬಂಧುಗಳ ಭೇಟಿ. ಹಳೆ ನೆನಪುಗಳ ವಿನಿಮಯ. ಶುಭಸಂಖ್ಯೆ: 3

ಕಟಕ: ದಾಂಪತ್ಯದಲ್ಲಿ ಸಾಮರಸ್ಯ. ಉದ್ಯೋಗದಲ್ಲಿ ಒತ್ತಡ ಕಂಡುಬರುವುದು. ಸಹೋದರರೊಂದಿಗೆ ಜಗಳ ವಿಕೋಪಕ್ಕೆ ಹೋಗದಿರಲಿ. ಶುಭಸಂಖ್ಯೆ:1

ಸಿಂಹ: ಕಲಿತ ವಿದ್ಯೆಯಲ್ಲಿ ನಿರಾಸಕ್ತಿ ಕಾಡಲಿದೆ. ಕಾರ್ವಿುಕ ವರ್ಗದವರಿಗೆ ಶುಭದಾಯಕ ದಿನ. ಕುಟುಂಬದಲ್ಲಿ ಸಾಮರಸ್ಯ ಸಾಧಿಸುವಿರಿ. ಶುಭಸಂಖ್ಯೆ:2

ಕನ್ಯಾ: ಸ್ವಂತ ವ್ಯಾಪಾರದಲ್ಲಿ ವಿಶೇಷ ಕಾಳಜಿ, ಆಸಕ್ತಿ ವಹಿಸುವಿರಿ. ಅಧಿಕ ಖರ್ಚು ಆಗಬಹುದು. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಶುಭಸಂಖ್ಯೆ: 3

ತುಲಾ: ಹೂಡಿಕೆ ವ್ಯವಹಾರದಲ್ಲಿ ನಷ್ಟವಾಗುವುದು. ವೈಭವಯುಕ್ತ ವಸ್ತುಗಳ ಖರೀದಿ. ಕಾನೂನು ವ್ಯಾಜ್ಯಗಳಲ್ಲಿ ಜಯ ನಿಮ್ಮ ಕಡೆಗಿದೆ. ಶುಭಸಂಖ್ಯೆ: 6

ವೃಶ್ಚಿಕ: ಬಂಧು ವರ್ಗದಿಂದ ಧನಸಹಾಯ. ಉದ್ಯೋಗದಲ್ಲಿ ನೆಮ್ಮದಿ. ಕೌಟುಂಬಿಕ ಕಲಹ. ಔಷಧ ವ್ಯಾಪಾರದಲ್ಲಿ ವಿಶೇಷ ಲಾಭ. ಶುಭಸಂಖ್ಯೆ: 4

ಧನಸ್ಸು: ಉದ್ಯೋಗ ನಿಮಿತ್ತ ವರ್ಗ. ಸಹೋದ್ಯೋಗಿಗಳಿಂದ ಕಿರಿಕಿರಿ. ಮನೆಯಲ್ಲಿ ಅಶಾಂತಿ. ಬ್ಯಾಂಕ್ ವ್ಯವಹಾರದಲ್ಲಿ ಸಫಲರಾಗುವಿರಿ. ಶುಭಸಂಖ್ಯೆ: 6

ಮಕರ: ಸಿನಿಮಾರಂಗದವರಿಗೆ ಶುಭ. ಸಂಬಂಧಿಗಳ ಸಹಾಯ. ಯಂತ್ರೋಪಕರಣಗಳಿಂದ ತೊಂದರೆ. ಅಡಕೆ, ಏಲಕ್ಕಿ ಕೃಷಿಕರಿಗೆ ಸಂತಸ.ಶುಭಸಂಖ್ಯೆ: 3

ಕುಂಭ: ಭವಿಷ್ಯದ ಬಗ್ಗೆ ಚಿಂತೆ ಮಾಡಲೇಬೇಕಾಗಿದೆ. ಆಟಗಾರರಿಗೆ ಉತ್ತಮ ಆದಾಯ ಬರುವುದು. ಔಷಧ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 4

ಮೀನ: ಮಗನಿಗೆ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಹಿನ್ನಡೆ. ಅನವಶ್ಯಕ ತೊಂದರೆಗೆ ಒಳಗಾಗುವ ಸಾಧ್ಯತೆ. ಹೊಸ ಅಂಗಡಿ ಪ್ರಾರಂಭ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net