

ಮೇಷ: ಸಹೋದ್ಯೋಗಿಗಳಿಂದ ಅಸಹಕಾರ. ಕಾರ್ಖಾನೆ ಮಾಲೀಕರಿಗೆ ಆರ್ಥಿಕ ಸಂಕಷ್ಟ. ಪ್ರೀತಿಯ ವಿಷಯ ಗಳಲ್ಲಿ ನಿರ್ಧಾರ. ಸಾಲಬಾಧೆ. ಶುಭಸಂಖ್ಯೆ: 5
ವೃಷಭ: ನಿವೇಶನ ಖರೀದಿಸುವಿರಿ. ಆಸ್ತಿ ಉಳಿಸಿಕೊಳ್ಳಲು ಕಸರತ್ತು. ಆರ್ಥಿಕ ನೆರವಿಗೆ ಕಷ್ಟ ಪಡಬೇಕು. ದುರಾಚಾರಗಳಿಗೆ ಕಡಿವಾಣವಿರಲಿ. ಶುಭಸಂಖ್ಯೆ: 9
ಮಿಥುನ: ಅನಿರೀಕ್ಷಿತ ಪ್ರಯಾಣ ಮಾಡಬೇಕಾಗುವುದು. ಪತ್ರ ವ್ಯವಹಾರಗಳಲ್ಲಿ ಮುನ್ನಡೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವಿರಿ. ಶುಭಸಂಖ್ಯೆ: 7
ಕಟಕ: ಕೃಷಿಕರಿಗೆ ಶುಭದಿನ. ಧನಾಗಮನವಾಗಲಿದೆ. ಶುಭಕಾರ್ಯಗಳಿಗೆ ವೆಚ್ಚ ಮಾಡುವಿರಿ. ಮನೆಯಲ್ಲಿ ಆತಂಕದ ವಾತಾವರಣ. ಶುಭಸಂಖ್ಯೆ:9
ಸಿಂಹ: ಅಧಿಕ ಖರ್ಚು. ವ್ಯವಹಾರ ಸ್ಥಳದಲ್ಲಿ ಆತ್ಮಗೌರವಕ್ಕೆ ಧಕ್ಕೆಯಾಗಬಹುದು. ನೆರೆಹೊರೆಯವರಿಂದ ತೊಂದರೆ. ವೀಸಾ ಸಮಸ್ಯೆ. ಶುಭಸಂಖ್ಯೆ: 7
ಕನ್ಯಾ: ದೂರ ಪ್ರಯಾಣಕ್ಕಾಗಿ ಖರ್ಚು. ಮಿತ್ರರಿಂದ ಸಹಾಯ. ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ಯತ್ನ. ಕುಟುಂಬ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 1
ತುಲಾ: ಕಾರ್ಯಗಳಲ್ಲಿ ಮಂದಗತಿ. ಕೌಟುಂಬಿಕ ಜೀವನದಲ್ಲಿ ಏರುಪೇರು. ಮಿತ್ರರಿಂದ ನಿಮ್ಮ ಅಧಿಕಾರ ದುರುಪಯೋಗವಾದೀತು. ಶುಭಸಂಖ್ಯೆ:3
ವೃಶ್ಚಿಕ: ಮಿತ್ರರಿಂದ ತೊಂದರೆಗಳು ಎದುರಾದಾವು. ಅದೃಷ್ಟ ಕೈ ತಪ್ಪದಂತೆ ನೋಡಿಕೊಳ್ಳಿ. ಆಟೋಮೊಬೈಲ್ಸ್ ವ್ಯಾಪಾರದಲ್ಲಿ ಪ್ರಗತಿ. ಶುಭಸಂಖ್ಯೆ: 8
ಧನಸ್ಸು: ಜೇನು ಕೃಷಿಯಿಂದ ಲಾಭ. ತಂದೆಯಿಂದ ಬೇಸರ. ಸಾಲ ಮಾಡುವ ಸಂದರ್ಭ ಬರಬಹುದು. ಮಹಿಳಾ ಮಿತ್ರರಿಂದ ಗೊಂದಲ. ಶುಭಸಂಖ್ಯೆ:1
ಮಕರ: ಪಾಲುದಾರಿಕೆಯಲ್ಲಿ ಎಚ್ಚರ. ಮಕ್ಕಳ ವೈವಾಹಿಕ ಜೀವನದ ಚಿಂತೆ. ಧಾರ್ವಿುಕ ವೃತ್ತಿಯಲ್ಲಿ ಮನಸ್ತಾಪ ಬೇಡ. ಸಂಜೆ ಶುಭ ಸುದ್ದಿ. ಶುಭಸಂಖ್ಯೆ:3
ಕುಂಭ: ಅಧಿಕಾರಿಗಳಿಂದ ಕಿರಿಕಿರಿ. ಗುಪ್ತ ಆಲೋಚನೆಗಳಿಂದ ಹೊರಬನ್ನಿ. ಭವಿಷ್ಯದ ಯೋಚನೆ. ಸೌಂದರ್ಯ ವರ್ಧಕದಿಂದ ಅಪಾಯ. ಶುಭಸಂಖ್ಯೆ:6
ಮೀನ: ಸ್ನೇಹಿತರೇ ಶತ್ರುಗಳಾಗುವರು. ಹೆಣ್ಣುಮಕ್ಕಳಿಂದ ನಷ್ಟ. ಕೋರ್ಟ್ಗೆ ಅಲೆದಾಟ. ಸಂಗಾತಿಯ ಜೊತೆಗೆ ಪ್ರವಾಸ ಹೋಗುವಿರಿ. ಶುಭಸಂಖ್ಯೆ: 3