

ಮೇಷ: ಸಿನಿಮಾ ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ. ಪ್ರಭಾವಿ ವ್ಯಕ್ತಿಗಳ ಭೇಟಿ. ಋಣ ಬಾಧೆ. ಕ್ರಯವಿಕ್ರಯಗಳಿಂದ ಲಾಭ ಬರುವುದು. ಶುಭಸಂಖ್ಯೆ: 9
ವೃಷಭ: ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ. ಸಾಲ ತೀರಿಸಲು ಗೆಳೆಯರ ಸಹಾಯ. ಮಹಿಳೆಯರಿಗೆ ತಾಳ್ಮೆ ಅಗತ್ಯ. ಶರೀರದಲ್ಲಿ ಆಯಾಸ. ಶುಭಸಂಖ್ಯೆ: 3
ಮಿಥುನ: ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭ. ಆಪ್ತರೊಂದಿಗೆ ಮುಖ್ಯ ಯೋಜನೆಯ ಮಾತುಕತೆ. ದೃಷ್ಟಿ ದೋಷದಿಂದ ತೊಂದರೆ. ಶುಭಸಂಖ್ಯೆ: 6
ಕಟಕ: ವಸ್ತ್ರ ವ್ಯಾಪಾರಿಗಳಿಗೆ ಲಾಭ. ಕಾರ್ಯಕ್ಷೇತ್ರದಲ್ಲಿ ಬದಲಾವಣೆ. ನ್ಯಾಯಾಲಯದ ವ್ಯವಹಾರಗಳಲ್ಲಿ ಅಪಜಯವಾಗುವ ಸಾಧ್ಯತೆ. ಶುಭಸಂಖ್ಯೆ:2
ಸಿಂಹ: ಮುಖ್ಯ ಕೆಲಸಗಳು ಅಂತಿಮ ಹಂತಕ್ಕೆ ಬರಲಿವೆ. ಪರಸ್ಥಳವಾಸ. ಹಿರಿಯರ ಸಹಾಯ ಸಿಗಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:1
ಕನ್ಯಾ: ಯಂತ್ರೋಪಕರಣಗಳಿಂದ ಲಾಭವಿದೆ. ಶಿಕ್ಷಕರಿಗೆ ಸುಖ ಭೋಜನ. ರಾಜಕೀಯದಲ್ಲಿರುವವರಿಗೆ ಅಧಿಕಾರ ಪ್ರಾಪ್ತಿ. ತಿರುಗಾಟ. ಶುಭಸಂಖ್ಯೆ: 6
ತುಲಾ: ಉನ್ನತ ಅಧಿಕಾರಿಗಳಿಗೆ ಬೇಜವಾಬ್ದಾರಿತನದಿಂದ ಸಂಕಷ್ಟ. ಅತಿಒಳ್ಳೆಯತನದಿಂದ ತೊಂದರೆ. ಹೊಸ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ:2
ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ. ಮನೆಯಲ್ಲಿ ದೇವತಾ ಕಾರ್ಯ ನಡೆಸುವಿರಿ. ವಿದ್ಯಾರ್ಥಿಗಳಲ್ಲಿ ಶ್ರದ್ಧೆ. ಬೇಸಾಯಗಾರರಿಗೆ ಧನ ಲಾಭ. ಶುಭಸಂಖ್ಯೆ: 3
ಧನಸ್ಸು: ಪ್ರತಿ ಕೆಲಸವನ್ನೂ ತಾಳ್ಮೆಯಿಂದ ನಿಭಾಯಿಸಿ. ಕಚೆೇರಿಯಲ್ಲಿ ವಿನಾಕಾರಣ ನಿಷ್ಠುರ ಉಂಟಾದೀತು. ನಿರೀಕ್ಷಿತ ಆದಾಯವಿದೆ. ಶುಭಸಂಖ್ಯೆ:3
ಮಕರ: ಸಲ್ಲದ ಅಪವಾದ, ನಿಂದನೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು. ಎಲ್ಲ ಕೆಲಸ ಕಾರ್ಯಗಳಲ್ಲಿ ವಿಘ್ನ. ಸದವವಕಾಶ ಕೈ ತಪ್ಪಲಿದೆ. ಶುಭಸಂಖ್ಯೆ: 8
ಕುಂಭ: ಭೂಮಿಯಿಂದ ಲಾಭ. ವ್ಯಾಪಾರದಲ್ಲಿ ಸಾಮಾನ್ಯ ವರಮಾನ. ವೃಥಾ ಅಲೆದಾಟ. ಮಿತ್ರರಲ್ಲಿ ಕಿರಿಕಿರಿ. ಆಸ್ತಿ ಸಂಬಂಧ ಮನಸ್ತಾಪ. ಶುಭಸಂಖ್ಯೆ:1
ಮೀನ: ಮಹಿಳೆಯರಿಗೆ ಚಿನ್ನಾಭರಣ ಲಾಭ. ಸಹವರ್ತಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ದಿನಸಿ ಅಂಗಡಿಗಳಲ್ಲಿ ಉತ್ತಮ ಆದಾಯ. ಶುಭಸಂಖ್ಯೆ:5