ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ಮೂಲಗಳು ಚೆನ್ನಾಗಿವೆ

Nitya Bhavisya Vijayavani
Published on

ಮೇಷ: ಕೌಟುಂಬಿಕ ಸ್ಥಿತಿ ಆಹ್ಲಾದಕರವಾಗಿರುತ್ತದೆ. ಆಲಸ್ಯವನ್ನು ನಿಯಂತ್ರಣದಲ್ಲಿಡಿ. ಅಜಾಗರೂಕತೆಯಿಂದ ತೊಂದರೆಯಾದೀತು. ಶುಭಸಂಖ್ಯೆ: 9

ವೃಷಭ: ಉದ್ಯೋಗದಲ್ಲಿ ಹೆಚ್ಚು ಒತ್ತಡ ಎದುರಿಸಬೇಕಾಗುವುದು. ಆಕಸ್ಮಿಕ ಧನಾಗಮ. ಆತುರದ ನಿರ್ಧಾರ ಬೇಡ. ಕೃಷಿಕರಿಗೆ ನಷ್ಟವಾಗಬಹುದು. ಶುಭಸಂಖ್ಯೆ: 7

ಮಿಥುನ: ದಾಂಪತ್ಯದಲ್ಲಿ ಸಂತಸ. ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶ. ಪತಿಯ ಆರೋಗ್ಯ ವ್ಯತ್ಯಾಸ. ತೀರ್ಥಯಾತ್ರೆಯಿಂದ ಸಮಾಧಾನ. ಶುಭಸಂಖ್ಯೆ:6

ಕಟಕ: ಮನಸ್ಸಿನಲ್ಲಿ ಅಸ್ಥಿರತೆ. ಮಾಲೀಕರ ನಿರ್ಲಕ್ಷ್ಯದಿಂದ ಆರ್ಥಿಕ ನಷ್ಟ. ಮಹಿಳಾ ಉದ್ಯೋಗಿಗಳು ಯಶಸ್ಸನ್ನು ಪಡೆಯುವ ಸಾಧ್ಯತೆ. ಶುಭಸಂಖ್ಯೆ:3

ಸಿಂಹ: ಅನಗತ್ಯ ಊಹಾಪೋಹಗಳಿಂದ ದೂರವಿರುವುದು ಕ್ಷೇಮ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಣ್ಣ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ:1

ಕನ್ಯಾ:  ರೇಷ್ಮೆ ಕೃಷಿಯಲ್ಲಿ ಅಧಿಕ ಲಾಭ. ಅನವಶ್ಯಕ ಚರ್ಚೆಗಳನ್ನು ತಪ್ಪಿಸಬೇಕು. ಗಾಯಗೊಳ್ಳುವ ಸಾಧ್ಯತೆ. ಮಕ್ಕಳ ಬಗ್ಗೆ ಕಾಳಜಿವಹಿಸಿ. ಶುಭಸಂಖ್ಯೆ:6

ತುಲಾ: ಪ್ರತಿಭೆಗೆ ಕುಟುಂಬದಿಂದ ಬೆಂಬಲ. ಅಧ್ಯಯನದಲ್ಲಿ ತೊಂದರೆ. ತಾಯಿಯ ಆರೋಗ್ಯದಲ್ಲಿ ಎಚ್ಚರ. ಕಲಾವಿದರಿಗೆ ಶುಭದಿನ. ಶುಭಸಂಖ್ಯೆ: 7

ವೃಶ್ಚಿಕ: ಸಂಬಂಧಗಳಲ್ಲಿ ಉದ್ವಿಗ್ನತೆ. ಹಣಕಾಸಿನ ಮೂಲಗಳು ಚೆನ್ನಾಗಿವೆ. ವಿದ್ಯಾರ್ಥಿಗಳು ಕಾಲಹರಣ ಮಾಡದೇ ಗಮನವಿಟ್ಟು ಓದುವುದು ಅಗತ್ಯ. ಶುಭಸಂಖ್ಯೆ:7

ಧನಸ್ಸು: ವ್ಯಾಪಾರಿಗಳಿಗೆ ಸರಾಸರಿ ಲಾಭ ಬರಲಿದೆ. ವೃತ್ತಿ ಜೀವನದಲ್ಲಿ ಏಳಿಗೆಯಿದೆ. ಕೆಲಸದಲ್ಲಿ ಆತುರ ಬೇಡ. ಅನಿರೀಕ್ಷಿತ ಬೆಳವಣಿಗೆ. ಶುಭಸಂಖ್ಯೆ: 7

ಮಕರ:  ಕಾರ್ವಿುಕರು, ಮಾಲೀಕರ ಮಧ್ಯೆ ವೈಮನಸ್ಯ. ಕಠಿಣ ಪರಿಶ್ರಮದ ಅಗತ್ಯವಿದೆ. ಆತ್ಮವಿಶ್ವಾಸದಿಂದ ಲಾಭ. ಕುಟುಂಬದಲ್ಲಿ ಶಾಂತಿ. ಶುಭಸಂಖ್ಯೆ:3

ಕುಂಭ: ಆಹಾರದಿಂದ ಆರೋಗ್ಯ ಸಮಸ್ಯೆ. ಸಣ್ಣಪುಟ್ಟ ತಪ್ಪುಗಳು ದೊಡ್ಡದಾಗುತ್ತವೆ. ಆರ್ಥಿಕ ಸಹಾಯ. ನಿಮ್ಮವರೇ ನಿಮಗೆ ಶತ್ರುಗಳು, ಎಚ್ಚರ. ಶುಭಸಂಖ್ಯೆ: 7

ಮೀನ: ತಂದೆ-ಮಕ್ಕಳಲ್ಲಿ ಆಸ್ತಿಗಾಗಿ ಕಲಹ. ಉಳಿತಾಯದ ಮಹತ್ವ ತಿಳಿಯಲಿದೆ. ಉನ್ನತ ಸ್ಥಾನಮಾನ. ಅಮೂಲ್ಯ ವಸ್ತು ಖರೀದಿಸುವಿರಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net