

ಮೇಷ: ಅನಗತ್ಯ ವಿಷಯಗಳ ಚರ್ಚೆ ಬೇಡ. ಆಹಾರ ವ್ಯಾಪಾರದಲ್ಲಿ ಅನಿರೀಕ್ಷಿತ ಧನ ಲಾಭ. ಶಾಂತಿ, ಶೀತ ಸಂಬಂಧಿ ರೋಗಗಳು. ಶುಭಸಂಖ್ಯೆ: 9
ವೃಷಭ: ವಾಹನ ಅಪಘಾತ ಸಾಧ್ಯತೆ. ಮಂಗಳ ಕಾರ್ಯಗಳಲ್ಲಿ ಭಾಗಿ. ಇಲ್ಲ ಸಲ್ಲದ ಅಪವಾದ. ದುಃಖ ಪ್ರಸಂಗಗಳು ಎದುರಾದಾವು. ಶುಭಸಂಖ್ಯೆ:3
ಮಿಥುನ: ರಿಯಲ್ ಎಸ್ಟೇಟ್ನವರಿಗೆ ಲಾಭ. ದಾನ ಧರ್ಮದಲ್ಲಿ ಆಸಕ್ತಿ. ಸಕಾಲಕ್ಕೆ ಭೋಜನ ಇರದು. ವೈದ್ಯಕೀಯ ವೃತ್ತಿಯವರಿಗೆ ಕೀರ್ತಿ. ಶುಭಸಂಖ್ಯೆ: 4
ಕಟಕ: ವಿವಾದಗಳಿಂದ ದೂರವಿರಿ. ಮಿತ್ರರಿಂದ ದ್ರೋಹ. ರೈತರಿಗೆ ಅಲ್ಪ ಲಾಭ. ಕುಟುಂಬ ಸೌಖ್ಯ. ಅಧಿಕ ತಿರುಗಾಟ ಮಾಡುವಿರಿ. ಶುಭಸಂಖ್ಯೆ:4
ಸಿಂಹ: ಪರಿಶ್ರಮಕ್ಕೆ ತಕ್ಕ ವರಮಾನ ಬರುವುದು. ಮಾನಸಿಕ ನೆಮ್ಮದಿ. ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆ. ಆಲಸ್ಯ ಮನೋಭಾವ. ಶುಭಸಂಖ್ಯೆ:2
ಕನ್ಯಾ: ರೇಷ್ಮೆ, ಹೈನುಗಾರಿಕೆಯಲ್ಲಿ ಲಾಭ. ಪಾಲುದಾರಿಕೆಯ ಮಾತುಕತೆ ಫಲಪ್ರದ. ಹಿರಿಯರ ಆಗಮನ. ಮನಸಿನ ಮೇಲೆ ದುಷ್ಪರಿಣಾಮ. ಶುಭಸಂಖ್ಯೆ:7
ತುಲಾ: ಅವಕಾಶ ಕೈ ತಪ್ಪುವುದು. ಮಹಿಳೆಯರಿಗೆ ಕಷ್ಟ. ಐಟಿ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಆಟೋಮೊಬೈಲ್ಸ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 8
ವೃಶ್ಚಿಕ: ನಿರೀಕ್ಷಿತ ಆದಾಯಕ್ಕೆ ಮೋಸವಿಲ್ಲ. ಟ್ರಾವೆಲ್ಸ್ ಉದ್ಯಮದವರಿಗೆ ನಿರೀಕ್ಷಿತ ಲಾಭ. ದುಷ್ಟ ಚಿಂತನೆ. ಅಮೂಲ್ಯ ವಸ್ತುಗಳ ಖರೀದಿ. ಶುಭಸಂಖ್ಯೆ:5
ಧನಸ್ಸು: ಗುರಿ ಸಾಧಿಸಲು ಹೆಚ್ಚಿನ ಶ್ರಮಪಡುವಿರಿ. ವ್ಯವಹಾರದಲ್ಲಿ ಮೋಸ ಎಚ್ಚರ. ಹಿತಶತ್ರುಗಳ ಕಾಟ. ಪೀಠೋಪಕರಣಗಳ ಖರೀದಿ. ಶುಭಸಂಖ್ಯೆ: 7
ಮಕರ: ಕವಿಗಳು, ಸಾಹಿತಿಗಳಿಗೆ ಉತ್ತಮ ಫಲ. ವಿದ್ಯಾಭ್ಯಾಸದಲ್ಲಿ ಯಶಸ್ಸು. ಭೂ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ಮಂದಗತಿ. ಶುಭಸಂಖ್ಯೆ:7
ಕುಂಭ: ಆತ್ಮೀಯರ ಜತೆ ಕಲಹವಾದೀತು. ಅಪರಿಚಿತರಿಂದ ತೊಂದರೆ. ಸ್ವಂತ ಪರಿಶ್ರಮದಲ್ಲಿ ಅಡ್ಡಿ ಆತಂಕ. ಆಟಗಾರರಿಗೆ ಸದವಕಾಶ. ಶುಭಸಂಖ್ಯೆ: 1
ಮೀನ: ಸ್ವಂತ ಕೆಲಸಗಳು ಕೈಗೂಡುವವು. ಪರರಿಗೆ ಸಹಾಯ ಮಾಡುವಿರಿ. ವಿರೋಧಿಗಳಿಂದ ಕಿರುಕುಳ. ವಿಪರೀತ ಕೆಲಸದೊತ್ತಡ. ಶುಭಸಂಖ್ಯೆ: 8