ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಮಧ್ಯವರ್ತಿಗಳ ಮಾತಿಗೆ ಮರುಳಾಗುವಿರಿ

Nitya Bhavisya Vijayavani
Published on

ಮೇಷ: ಮದುವೆ ಕಾರ್ಯ ವಿಳಂಬ. ಪುಣ್ಯಕ್ಷೇತ್ರ ಪ್ರವಾಸ. ಸತ್ಕಾರ್ಯಾಸಕ್ತಿ. ಮಿತ್ರರಿಂದ ಕೆಡುಕು. ಸಣ್ಣವ್ಯಾಪಾರಿಗಳಿಗೆ ಸಾಧಾರಣ ಲಾಭ. ಶುಭಸಂಖ್ಯೆ: 3

ವೃಷಭ:ನಟನಾ ವಿಚಾರಗಳಲ್ಲಿ ಆಸಕ್ತಿ. ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ. ಸೌಂದರ್ಯ ವರ್ಧಕಗಳ ಅಂಗಡಿಯವರ ಸ್ಥಳ ಬದಲಾವಣೆ. ಶುಭಸಂಖ್ಯೆ: 9

ಮಿಥುನ: ಮಧ್ಯವರ್ತಿಗಳ ಮಾತಿಗೆ ಮರುಳಾಗುವಿರಿ. ದುರಭ್ಯಾಸಕ್ಕೆ ಖರ್ಚು. ಉದ್ಯೋಗಸ್ಥ ಮಹಿಳೆಯರ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8

ಕಟಕ: ಪರರಿಂದ ಮೋಸ. ಮಕ್ಕಳಿಂದ ನಿಂದನೆ. ಉದ್ಯೋಗದಲ್ಲಿ ಕಿರಿಕಿರಿ. ಪ್ರಕೃತಿ ವಿಕೋಪದ ಭೀತಿ. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ:6

ಸಿಂಹ: ಮನಸ್ಸಿನಲ್ಲಿ ದುಗುಡ ಕಾಡುವುದು. ಋಣ ವಿಮೋಚನೆ. ದಾಂಪತ್ಯದಲ್ಲಿ ಪ್ರೀತಿ. ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ:3

ಕನ್ಯಾ: ಮನೆ ರಿಪೇರಿಗೆ ಖರ್ಚು. ಸ್ಪರ್ಧಾತ್ಮಕ ವ್ಯಾಸಂಗದಲ್ಲಿ ತೊಂದರೆ. ಸ್ತ್ರೀಯರಿಗೆ ಉತ್ತಮ ಆರೋಗ್ಯ. ಕಾರ್ಯ ಸಾಧನೆಗೆ ತಿರುಗಾಟ. ಶುಭಸಂಖ್ಯೆ:4

ತುಲಾ: ಶೈಕ್ಷಣಿಕ ಕಾರ್ಯ ಕ್ಷೇತ್ರದಲ್ಲಿ ಒತ್ತಡ. ವಾಣಿಜ್ಯ ವ್ಯವಹಾರಗಳಲ್ಲಿ ಲಾಭ. ಪಿತ್ರಾರ್ಜಿತ ಆಸ್ತಿಕಲಹ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಶುಭಸಂಖ್ಯೆ: 4

ವೃಶ್ಚಿಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ವಾಹನದಿಂದ ಕಂಟಕವಿದೆ, ಹುಷಾರು. ಸಾಲಬಾಧೆ. ಇತರರಿಗೆ ನಿಮ್ಮಿಂದ ಲಾಭ. ಶುಭಸಂಖ್ಯೆ:3

ಧನಸ್ಸು: ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ವಿವಾದಗಳಿಗೆ ಆಸ್ಪದ ಕೊಡದಿದ್ದರೆ ಕ್ಷೇಮ. ಶತ್ರು ಬಾಧೆ. ಕ್ರಯ ವಿಕ್ರಯದಲ್ಲಿ ಲಾಭವಿದೆ. ಶುಭಸಂಖ್ಯೆ: 2

ಮಕರ: ಸ್ತ್ರೀಯರಿಗೆ ಆಭರಣ ಲಾಭ. ವಾತಬಾಧೆ. ಮಕ್ಕಳಿಗಾಗಿ ಖರ್ಚು. ದೂರ ಪ್ರಯಾಣ. ಸುಖ ಭೋಜನ. ಮಕ್ಕಳ ಪ್ರತಿಭೆಗೆ ಮಾನ್ಯತೆ.ಶುಭಸಂಖ್ಯೆ:1

ಕುಂಭ: ವ್ಯಾಜ್ಯಗಳಲ್ಲಿ ಜಯ. ಆಹಾರದಲ್ಲಿ ವ್ಯತ್ಯಾಸ. ಅಮೂಲ್ಯ ವಸ್ತು ಖರೀದಿಸುವಿರಿ. ದುಷ್ಟರಿಂದ ದೂರವಿರಿ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ:6

ಮೀನ: ಪಾಪ ಬುದ್ಧಿ ನಿಯಂತ್ರಿಸಿ. ದುಡುಕು ಸ್ವಭಾವ ಬೇಡ. ಆಲಸ್ಯ ಮನೋಭಾವ. ಯಾರನ್ನೂ ನಂಬಬೇಡಿ. ತೀರ್ಥಯಾತ್ರೆ ಮಾಡುವ ಸಾಧ್ಯತೆ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net