ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿದೇಶದಲ್ಲಿ ವ್ಯಾಸಂಗಕ್ಕೆ ತೊಂದರೆಯಿದೆ

Nitya Bhavisya Vijayavani
Published on

ಮೇಷ: ಸಾಲ ತೀರಿಸಲು ಬಂಧು ಬಾಂಧವರ ಸಹಕಾರ ಸಿಗಲಿದೆ. ಪರರ ಧನಪ್ರಾಪ್ತಿ. ಸಜ್ಜನ ವಿರೋಧ. ಕೋಪ ಜಾಸ್ತಿ. ಅತಿಯಾದ ನಿದ್ರೆ. ಶುಭಸಂಖ್ಯೆ: 3

ವೃಷಭ: ಸರ್ಕಾರಿ ಕೆಲಸಕ್ಕೆ ಯತ್ನಿಸುವಿರಿ. ಕಾರ್ಯಾನುಕೂಲ. ಸ್ಥಿರಾಸ್ತಿ ಸಂಪಾದನೆ. ಮನಃಶಾಂತಿ. ಕೃಷಿಯಲ್ಲಿ ಉತ್ತಮ ಲಾಭ ಬರಲಿದೆ. ಶುಭಸಂಖ್ಯೆ: 4

ಮಿಥುನ: ಮನಸ್ಸಿನಲ್ಲಿ ಭಯ ಭೀತಿ ಕಾಡಲಿದೆ. ವಿವಾಹ ಯೋಗವಿದೆ. ಮಾತಿನಿಂದ ಅನರ್ಥ. ವಿದೇಶದಲ್ಲಿ ವ್ಯಾಸಂಗಕ್ಕೆ ತೊಂದರೆಯಿದೆ. ಶುಭಸಂಖ್ಯೆ:1

ಕಟಕ: ಶರೀರದಲ್ಲಿ ತಳಮಳ. ವೈದ್ಯರಿಂದ ಶಸ್ತ್ರ ಚಿಕಿತ್ಸೆಗೆ ಸೂಚನೆ. ಗೃಹೋಪಯೋಗಿ ವಸ್ತು ಖರೀದಿಯಲ್ಲಿ ವಿಪರೀತ ಖರ್ಚು. ಸಾಲಬಾಧೆ. ಶುಭಸಂಖ್ಯೆ: 6

ಸಿಂಹ: ಮಾಲೀಕರ ಕಾರ್ಯದಲ್ಲಿ ವಿಳಂಬ. ಷೇರು ವ್ಯವಹಾರದಲ್ಲಿ ಲಾಭ. ದಾಂಪತ್ಯದಲ್ಲಿ ಅನ್ಯೋನ್ಯತೆ. ಮಾತಿನಲ್ಲಿ ಹಿಡಿತವಿರಲಿ. ಶುಭಸಂಖ್ಯೆ:4

ಕನ್ಯಾ: ಸ್ನೇಹಿತರಿಂದ ವಂಚನೆ. ದೃಷ್ಟಿ ದೋಷ. ನಟರಿಗೆ ಸಲ್ಲದ ಅಪವಾದ, ಎಚ್ಚರ. ಯುವಜನರು ದಂಡ ಕಟ್ಟುವಿರಿ. ಮನಸ್ಸಿಗೆ ಬೇಸರ. ಶುಭಸಂಖ್ಯೆ:1

ತುಲಾ: ಆದಾಯಕ್ಕಿಂತ ಖರ್ಚು ಜಾಸ್ತಿ. ಶೈಕ್ಷಣಿಕ ಕ್ಷೇತ್ರದವರಿಗೆ ಅಪಕೀರ್ತಿ. ಸರ್ಕಾರಿ ಕೆಲಸಗಳು ವಿಳಂಬವಾಗಲಿವೆ. ದೂರ ಪ್ರಯಾಣ. ಶುಭಸಂಖ್ಯೆ:7

ವೃಶ್ಚಿಕ: ಕುಟುಂಬದಲ್ಲಿ ಅಹಿತಕರ ವಾತಾವರಣ. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ದ್ರವ್ಯಲಾಭ. ಕೈ ಹಾಕಿದ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ. ಶುಭಸಂಖ್ಯೆ:1

ಧನಸ್ಸು: ದೇವತಾ ಕಾರ್ಯದಲ್ಲಿ ಭಾಗಿ. ಅವಿವಾಹಿತರಿಗೆ ವಿವಾಹಯೋಗ. ಸಾಲಬಾಧೆ. ನಾನಾ ಚಿಂತೆ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ:8

ಮಕರ: ಖಾಸಗಿ ಉದ್ಯೋಗಿಗಳಿಗೆ ಕೆಲಸ ಹೋಗುವ ಭೀತಿ. ರೋಗಬಾಧೆ. ಹಿತಶತ್ರುಗಳಿಂದ ತೊಂದರೆ. ರಾಜಕಾರಣಿಗಳಿಗೆ ತಕರಾರು. ಶುಭಸಂಖ್ಯೆ:9

ಕುಂಭ: ಯತ್ನ ಕಾರ್ಯಗಳಲ್ಲಿ ಜಯ. ಆಕಸ್ಮಿಕ ಖರ್ಚು. ಹಳೆಯ ಗೆಳೆಯನ ಭೇಟಿ. ಗುಪ್ತ ವಿದ್ಯೆಗಳಲ್ಲಿ ಆಸಕ್ತಿ. ಆರೋಗ್ಯದ ಸಮಸ್ಯೆ. ಶುಭಸಂಖ್ಯೆ:5

ಮೀನ: ಹಣದ ಅಡಚಣೆ. ವ್ಯಾಪಾರದಲ್ಲಿ ಸಾಧಾರಣ ಲಾಭ. ಮಾತಾಪಿತರಲ್ಲಿ ವಾತ್ಸಲ್ಯ. ಋಣಬಾಧೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net