ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಲಾಭದಾಯಕ ದಿನ

Nitya-Bhavisya-FILEminimizer
Published on

ಮೇಷ: ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಮನೆಗೆ ಆತ್ಮೀಯರ ಆಗಮನ. ಆಹಾರ ಧಾನ್ಯಗಳ ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಶುಭಸಂಖ್ಯೆ: 9

ವೃಷಭ: ಆಸ್ತಿ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಸರ್ಕಾರಿ ವಲಯದ ಉದ್ಯೋಗಿಗಳಿಗೆ ಬಡ್ತಿ. ತೆಂಗು ಕೃಷಿಕರಿಗೆ ಹೆಚ್ಚಿನ ಧನ ಲಾಭ. ಶುಭಸಂಖ್ಯೆ:3

ಮಿಥುನ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ. ಬಂಧುಗಳಿಂದ ನಿಮ್ಮ ಬಗ್ಗೆ ಹೊಗಳಿಕೆ. ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 9

ಕಟಕ:ಗುರು ಹಿರಿಯರ ಮಾರ್ಗದರ್ಶನದಿಂದ ಶುಭ. ಧರ್ಮ ಕಾರ್ಯದಲ್ಲಿ ಆಸಕ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 5

ಸಿಂಹ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವ ಚಿಂತನೆ ಪಲಕಾರಿಯಾಗಲಿದೆ. ನಕಾರಾತ್ಮಕ ಯೋಚನೆ ನಿಯಂತ್ರಿಸಿ. ಶುಭಸಂಖ್ಯೆ: 8

ಕನ್ಯಾ: ಕಾರ್ಯಗಳಲ್ಲಿ ಪ್ರಗತಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಸರ್ಕಾರಿ ಕೆಲಸದಲ್ಲಿ ಯಶ. ರೈತರಿಗೆ ಖರೀದಿಯಲ್ಲಿ ಅಸಮಾಧಾನ.ಶುಭಸಂಖ್ಯೆ:1

ತುಲಾ: ಸೂಕ್ತ ಸಮಯದಲ್ಲಿ ಎಚ್ಚರಿಕೆಯ ನಡೆಯಿಂದ ವ್ಯಾಪಾರದಲ್ಲಿ ಪ್ರಗತಿ. ಒಪ್ಪಂದ ಮುಂದೂಡಿ. ಪುಸ್ತಕ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:2

ವೃಶ್ಚಿಕ: ದಾಂಪತ್ಯದಲ್ಲಿ ಸಂತೋಷ. ತಾಂತ್ರಿಕ ವಿದ್ಯಾರ್ಥಿಗಳ ಜೀವನದಲ್ಲಿ ದಿಢೀರ್ ಬದಲಾವಣೆ. ಐಟಿ ಉದ್ಯೋಗ ಬಿಡುವ ಸನ್ನಿವೇಶ. ಶುಭಸಂಖ್ಯೆ:9

ಧನುಸ್ಸು: ಕಲಾವಿದರಿಗೆ ಆತ್ಮವಿಶ್ವಾಸ ಅಧಿಕವಾಗಿರುತ್ತದೆ. ಉತ್ಪಾದನಾ ಕ್ಷೇತ್ರದವರಿಗೆ ನಿರೀಕ್ಷಿತ ಧನಲಾಭ. ಷೇರು ಹೂಡಿಕೆಯಲ್ಲಿ ಯಶಸ್ಸು. ಶುಭಸಂಖ್ಯೆ:4

ಮಕರ: ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಕಿರುಚಿತ್ರ ನಟರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ.ಶುಭಸಂಖ್ಯೆ:1

ಕುಂಭ: ಹೊಸ ಉದ್ಯೋಗದಲ್ಲಿ ಕಸಿವಿಸಿ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ನನೆಗುದಿಗೆ ಬಿದ್ದ ಗೃಹ ನಿರ್ಮಾಣ ಪುನಃ ಪ್ರಾರಂಭ.ಶುಭಸಂಖ್ಯೆ: 8

ಮೀನ: ಕೆಲಸದ ಸ್ಥಳದಲ್ಲಿ ಸೂಕ್ತ ಗೌರವ ಸಿಗಲಿದೆ. ಸಾಲಗಳಿಂದ ಮುಕ್ತರಾಗುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚುತ್ತವೆ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net