

ಮೇಷ: ಉದ್ಯೋಗ ಅಸ್ಥಿರತೆ ಕೊನೆಗೊಳ್ಳಲಿದೆ. ಕಾಪಿ ಬೆಳಗಾರರಿಗೆ ಶುಭ ಸುದ್ದಿ. ಐಟಿ ಉದ್ಯೋಗದ ಮಹಿಳೆಯರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ:8
ವೃಷಭ: ಹಣ್ಣಿನ ವ್ಯಾಪಾರದಲ್ಲಿ ಅಧಿಕ ಲಾಭ. ನಾಲ್ಕು ಚಕ್ರದ ವಾಹನ ಖರೀದಿಗೆ ಹಣ ದೊರಕಲಿದೆ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ:2
ಮಿಥುನ: ನಿಮ್ಮ ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಸಾರ್ವಜನಿಕವಾಗಿ ತಾಳ್ಮೆಂದಿರಿ. ಆತ್ಮೀಯ ಮಿತ್ರರೊಂದಿಗೆ ದೂರ ಪ್ರಯಾಣ. ಶುಭಸಂಖ್ಯೆ: 7
ಕಟಕ: ಚಾಲಕ ವೃತ್ತಿಯಲ್ಲಿ ಹಣ ಗಳಿಸುವಿರಿ. ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಯತ್ನದಲ್ಲಿ ಯಶ. ದಿನಸಿ ವ್ಯಾಪಾರದಲ್ಲಿ ಧನಲಾಭ. ಶುಭಸಂಖ್ಯೆ:1
ಸಿಂಹ: ಸ್ನೇಹಿತರೊಂದಿಗೆ ಮನಸ್ತಾಪ ಇತ್ಯರ್ಥ. ಸ್ವಂತ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಹೊಸ ಹೂಡಿಕೆದಾರರಿಂದ ಅಭಿವೃದಿ. ಶುಭಸಂಖ್ಯೆ: 6
ಕನ್ಯಾ: ಶಿಕ್ಷಕ ವೃತ್ತಿಯವರಿಗೆ ವರ್ಗಾವಣೆಯಾದೀತು. ಧಾರಾವಾಹಿ ನಿರ್ಮಾಪಕರಿಗೆ ಅದೃಷ್ಟದ ದಿನ. ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ: 5
ತುಲಾ: ಆಪತ್ತಿನಲ್ಲಿ ಸ್ನೇಹಿತರಿಂದ ಅಗತ್ಯ ಸಹಕಾರ ಸಿಗಲಿದೆ. ಉದ್ಯಮಸ್ಥ ಮಹಿಳೆಯರಿಗೆ ಹೆಚ್ಚಿದ ಒತ್ತಡ. ಕೊಟ್ಟ ಸಾಲ ತಿರುಗಿ ಬರಲಿದೆ. ಶುಭಸಂಖ್ಯೆ:3
ವೃಶ್ಚಿಕ: ವಿದೇಶೀ ವ್ಯಾಪಾರದಿಂದ ಲಾಭ. ಮಹಿಳೆಯರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಜೇನು ಕೃಷಿಕರಿಗೆ ಗೌರವ. ಶುಭಸಂಖ್ಯೆ:9
ಧನಸ್ಸು: ಸಾಮಾಜಿಕ ಹೋರಾಟಗಾರರಿಗೆ ಪದವಿ ದೊರೆಯುವುದು. ಭತ್ತ, ಅಡಿಕೆ ಬೆಳೆಗಾರರಿಗೆ ಲಾಭ. ಯಕ್ಷಗಾನ ಕಲಾವಿದರಿಗೆ ಗೌರವ. ಶುಭಸಂಖ್ಯೆ:4
ಮಕರ: ತಾಂತ್ರಿಕ ವಿದ್ಯಾರ್ಥಿಗಳಿಗೆ ಒತ್ತಡ ಸಾಧ್ಯತೆ. ನಾಟ್ಯ ಕಲಾವಿದರಿಗೆ ಬೇಡಿಕೆ ಬರಲಿದೆ. ಸರ್ಕಾರಿ ಒಪ್ಪಂದದಲ್ಲಿ ಧನಲಾಭವಾಗುವುದು. ಶುಭಸಂಖ್ಯೆ: 4
ಕುಂಭ: ಕೃಷಿ ಭೂಮಿ ಖರೀದಿಗೆ ಇದ್ದ ಅಡೆತಡೆ ನಿವಾರಣೆಯಾಗುವುದು. ಪಿತ್ರಾರ್ಜಿತ ಆಸ್ತಿ ಹಂಚಿಕೆ. ಛಾಯಾಗ್ರಾಹಕರಿಗೆ ಧನ ಲಾಭ. ಶುಭಸಂಖ್ಯೆ: 4
ಮೀನ: ಅವಿವಾಹಿತರಿಗೆ ವಿವಾಹ ಸಿದ್ದಿ. ಮನೆಯಲ್ಲಿ ಶುಭಕಾರ್ಯ. ಇವೆಂಟ್ ಮ್ಯಾನೇಜೈಂಟ್ ವ್ಯವಹಾರದಲ್ಲಿ ಲಾಭಗಳಿಸುವಿರಿ. ಶುಭಸಂಖ್ಯೆ:5