ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಸಂಕಷ್ಟ ದೂರವಾಗಲಿದೆ

astrology
Published on

ಮೇಷ: ಆಧ್ಯಾತ್ಮಿಕ ಚಿಂತನೆಯಿಂದ ಸಮಾಧಾನ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ತಾಳುವಿರಿ. ಹೂವು ಹಣ್ಣು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1

ವೃಷಭ: ವಾಹನ ಮಾಲೀಕರಿಗೆ ಶುಭದಿನ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ವಕೀಲ ವೃತ್ತಿಯಲ್ಲಿ ಪ್ರಗತಿ. ಕೋರ್ಟ್ ಕೇಸ್ ವಿಳಂಬ. ಶುಭಸಂಖ್ಯೆ: 6

ಮಿಥುನ: ಸ್ವಂತ ಊರಿಗೆ ಪ್ರಯಾಣ ಮಾಡುವಿರಿ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂತೋಷ. ಕಚೇರಿಯಲ್ಲಿ ಅಹಂಭಾವದ ನಡವಳಿಕೆ ಬೇಡ. ಶುಭಸಂಖ್ಯೆ: 7

ಕಟಕ: ಅಡಕೆ ವ್ಯಾಪಾರದಲ್ಲಿ ಅನುಕೂಲ. ನೇರ ನುಡಿ ನಿಯಂತ್ರಿಸಿ. ಷೇರು ವ್ಯವಹಾರದಲ್ಲಿ ಲಾಭ. ಮಗಳಿಗೆ ಉತ್ತಮ ಸಂಬಂಧ ಬರಲಿದೆ.ಶುಭಸಂಖ್ಯೆ: 6

ಸಿಂಹ: ಭೂ ವ್ಯವಹಾರದಲ್ಲಿ ಲಾಭ. ಖರೀದಿಯಲ್ಲಿ ಎಚ್ಚರ. ದೈವಿಕ ಆಚರಣೆಯಲ್ಲಿ ಪಾಲ್ಗೊಂಡ ಸಮಾಧಾನ. ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 2

ಕನ್ಯಾ: ಮಾನಸಿಕ ಒತ್ತಡ ನಿಯಂತ್ರಿಸಿ. ಗೃಹ ನಿರ್ವಣಕ್ಕೆ ಚಾಲನೆ. ಧರ್ಮಕಾರ್ಯದಲ್ಲಿ ನಿರಾಸಕ್ತಿ. ಖರೀದಿಗೆ ಕೂಡಿಟ್ಟ ಹಣ ಖರ್ಚು. ಶುಭಸಂಖ್ಯೆ:7

ತುಲಾ: ಬಂಧುಗಳಿಂದ ಆಸ್ತಿ ಖರೀದಿಗೆ ಸಹಾಯ. ನ್ಯಾಯಾಲಯದಲ್ಲಿ ಕಾರ್ಯಜಯ. ಹಿರಿಯರ ಮಾರ್ಗದರ್ಶನದಿಂದ ಯಶಸ್ಸು. ಶುಭಸಂಖ್ಯೆ: 6

ವೃಶ್ಚಿಕ: ಉದ್ಯೋಗ ಅರಸಿ ಪರ ಊರಿಗೆ ಪ್ರಯಾಣ. ಅಧಿಕಾರಿಗಳಿಂದ ಕೃಷಿ ಜಮೀನಿನ ವಿಚಾರಣೆ ನಡೆಯಬಹುದು. ಆರ್ಥಿಕ ಪ್ರಗತಿ.ಶುಭಸಂಖ್ಯೆ: 6

ಧನುಸ್ಸು: ದೂರದೃಷ್ಟಿಯ ಯೋಜನೆ. ಅಧ್ಯಾತ್ಮದತ್ತ ಒಲವು. ಮಾಧ್ಯಮದವರಿಗೆ ಉತ್ತಮ ಗೌರವ. ಆರ್ಥಿಕ ಸಂಕಷ್ಟ ದೂರವಾಗಲಿದೆ. ಶುಭಸಂಖ್ಯೆ:3

ಮಕರ: ಮಗಳ ವಿವಾಹ ವಿಳಂಬವಾಗುತ್ತಿರುವ ಚಿಂತೆ. ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಭವಿಷ್ಯದ ಭರವಸೆ ಮೂಡಲಿದೆ. ಶುಭಸಂಖ್ಯೆ: 7

ಕುಂಭ ಸಂಗಾತಿಯ ಸಲಹೆಯಿಂದ ವ್ಯಾಪಾರದಲ್ಲಿ ಪ್ರಗತಿ. ಕುಟುಂಬದಲ್ಲಿ ಶುಭಕಾರ್ಯ. ನೇರ ನಡೆ ನುಡಿಯಿಂದ ವಿರೋಧಗಳು. ಶುಭಸಂಖ್ಯೆ: 6

ಮೀನ: ತಾಂತ್ರಿಕ ಉದ್ಯೋಗಿಗಳಿಗೆ ವೇತನ ಹೆಚ್ಚಲಿದೆ. ಮಹಿಳೆಯರು ವ್ಯಾಧಿಗಳಿಂದ ಮುಕ್ತರಾಗುವರು. ಬಾಡಿಗೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net