

ಮೇಷ:ಅನಾರೋಗ್ಯದ ಏರಿಳಿತದಿಂದ ಹೊರಬರುತ್ತೀರಿ. ಆಸ್ತಿ ನೋಂದಣಿ ಕೆಲಸಗಳು ಸಕಾಲದಲ್ಲಿ ಪೂರ್ಣಗೊಂಡು ಸಂತಸ. ಶುಭಸಂಖ್ಯೆ: 9
ವೃಷಭ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೆಮ್ಮದಿ ದೊರೆಯುತ್ತದೆ. ಹೊಸ ಸಾಲದ ಪ್ರಯತ್ನಗಳು ನಿರಾತಂಕವಾಗಿ ಫಲಕಾರಿಯಾಗಲಿವೆ. ಶುಭಸಂಖ್ಯೆ:4
ಮಿಥುನ: ಶೋಷಿತರ ಸೇವಾ ಕಾರ್ಯದಲ್ಲಿ ಭಾಗವಹಿಸುವಿರಿ. ಸಹೋದರರೊಂದಿಗೆ ಪ್ರಯಾಣ. ಸಕೈಗೊಂಡ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ. ಶುಭಸಂಖ್ಯೆ: 7
ಕಟಕ:ಕಾನೂನು ವಿದ್ಯಾರ್ಥಿಗಳಿಗೆ ಅವಕಾಶ. ವಾಹನ ಖರೀದಿ ಮುಂದೂಡಿ. ಲೇವಾದೇವಿ ವ್ಯವಹಾರಸ್ಥರಿಗೆ ಲಾಭದಾಯಕ ದಿನ. ಶುಭಸಂಖ್ಯೆ: 4
ಸಿಂಹ: ಪ್ರಮುಖ ವ್ಯಕ್ತಿಗಳಿಂದ ಪುರಸ್ಕಾರ. ಅಗತ್ಯಕ್ಕೆ ತಕ್ಕಂತೆ ಹಣ ಬರಲಿದೆ. ವೃತ್ತಿ ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 5
ಕನ್ಯಾ: ವ್ಯವಹಾರದಲ್ಲಿ ಹೊಸ ಸವಾಲು. ಹೆಚ್ಚುವರಿ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಭಿನ್ನಾಭಿಪ್ರಾಯ ನಿವಾರಣೆ. ಶುಭಸಂಖ್ಯೆ: 1
ತುಲಾ: ಕೆಲಸದಲ್ಲಿ ಶ್ರಮ ಅಧಿಕವಾಗಲಿದೆ. ಕೈಗೆತ್ತಿಕೊಂಡ ಕೆಲಸಗಳು ಶೀಘ್ರಗತಿಯಲ್ಲಿ ಸಾಗುತ್ತವೆ. ದೂರದ ಬಂಧುಗಳಿಂದ ಸಹಾಯ. ಶುಭಸಂಖ್ಯೆ: 9
ವೃಶ್ಚಿಕ: ಮನೆಯ ಹೊರಗೆ ಗೌರವ ಹೆಚ್ಚಲಿದೆ. ಸರ್ಕಾರಿ ಕೆಲಸಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ:8
ಧನುಸ್ಸು: ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಪಾಲುದಾರರ ಆಗಮನ. ಉದ್ಯೋಗ ಗಿಟ್ಟಿಸುವ ಪ್ರಯತ್ನಗಳು ಸ್ವಲ್ಪ ಮಟ್ಟಿಗೆ ಫಲ ಕೊಡಲಿವೆೆ.ಶುಭಸಂಖ್ಯೆ: 3
ಮಕರ: ಅಮೂಲ್ಯ ವಸ್ತು ಲಾಭವನ್ನು ಪಡೆಯುತ್ತೀರಿ. ಹಳೆಯ ಸ್ನೇಹಿತರ ಸಮಾಗಮ. ವೈದ್ಯಕೀಯ ವಿದ್ಯಾರ್ಥಿಗಳು ಇಂದು ಯಶಸ್ಸು. ಶುಭಸಂಖ್ಯೆ: 7
ಕುಂಭ: ಆಧ್ಯಾತ್ಮಿಕ ಗುರುವಿನ ಭೇಟಿ. ಉದ್ಯೋಗಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ. ಶುಭಸಂಖ್ಯೆ:1
ಮೀನ ಆಸ್ತಿ ವಿಚಾರದಲ್ಲಿ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ಹೊಸ ವಸ್ತುಗಳ ಖರೀದಿ. ಶುಭಸಂಖ್ಯೆ: 4