

ಮೇಷ: ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರಗಳಲ್ಲಿ ಮುನ್ನಡೆ ಕಾಣುವಿರಿ. ಮಕ್ಕಳ ವಿಚಾರವಾಗಿ ವಾದ-ವಿವಾದಗಳು ಹೆಚ್ಚಾಗಬಹುದು. ಶುಭಸಂಖ್ಯೆ: 3
ವೃಷಭ: ಮುಕ್ತ ಭಾವನೆಯಿಂದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ವಿರೋಧಿಗಳ ಬೆಂಬಲ. ಶುಭಸಂಖ್ಯೆ: 8
ಮಿಥುನ: ಹಿರಿಯರ ಸಕಾಲಿಕ ಸಲಹೆಯಿಂದ ಆಪತ್ತಿನಿಂದ ಪಾರು. ಮಕ್ಕಳ ಆರೋಗ್ಯದತ್ತ ಹೆಚ್ಚಿನ ಗಮನ ಅಗತ್ಯ. ಹಣದ ಒಳಹರಿವು ವೃದ್ಧಿ. ಶುಭಸಂಖ್ಯೆ: 1
ಕಟಕ: ಪದೇಪದೆ ನಿರ್ಧಾರ ಬದಲಿಸುವ ನಡವಳಿಕೆಯಿಂದ ತೊಂದರೆ. ಆಹಾರ ಪದಾರ್ಥ ತಯಾರಿಸಿ ಮಾರುವವರಿಗೆ ಲಾಭ ಹೆಚ್ಚುತ್ತದೆ. ಶುಭಸಂಖ್ಯೆ: 8
ಸಿಂಹ: ವಿವಾಹದ ವಿಚಾರದಲ್ಲಿ ದೃಢ ನಿರ್ಧಾರವಿರಲಿ. ಸ್ತ್ರೀಯರಿಗೆ ಅಭರಣ ಲಾಭ. ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ಶುಭಸಂಖ್ಯೆ: 5
ಕನ್ಯಾ: ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ಸಾಲ ಮರುಪಾವತಿ ಮಾಡುವಿರಿ. ವಸ್ತ್ರ ವ್ಯಾಪಾರಿಗಳಿಗೆ ಅನಿರೀಕ್ಷಿತ ಆದಾಯ. ಶುಭಸಂಖ್ಯೆ: 9
ತುಲಾ: ಸಂಪನ್ಮೂಲ ಕ್ರೋಡೀಕರಣಕ್ಕೆ ಪ್ರಯತ್ನ ಮಾಡುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ. ಸ್ವಉದ್ಯೋಗಿಗಳಿಗೆ ಉತ್ತಮ ಆದಾಯ. ಶುಭಸಂಖ್ಯೆ: 4
ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ. ಬಾಹ್ಯಾಕಾಶ ಸಂಸ್ಥೆಯಲ್ಲಿ ನೌಕರರಿಗೆ ಮೇಲ್ದರ್ಜೆಯ ಹುದ್ದೆ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 9
ಧನಸ್ಸು: ಮನೆಯಲ್ಲಿ ಸಮಾಧಾನದಿಂದ ವ್ಯವಹರಿಸಿರಿ. ಬ್ಯಾಂಕ್ ವ್ಯವಹಾರದಲ್ಲಿ ಮುನ್ನಡೆ. ಕೃಷಿಕರಿಗೆ ತಮ್ಮ ಬೆಳೆಯಿಂದ ಹೆಚ್ಚಿನ ಹಣ. ಶುಭಸಂಖ್ಯೆ: 1
ಮಕರ: ಪಾಲುದಾರಿಕೆಯಲ್ಲಿ ಆಂತರಿಕ ಗೊಂದಲ ನಿವಾರಣೆಯಾಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ. ಶುಭಸಂಖ್ಯೆ: 9
ಕುಂಭ: ಯಂತ್ರ ಮಾಲೀಕರಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ. ಪ್ರೇಮಿಗಳಿಗೆ ಹಿನ್ನಡೆ. ವಿದೇಶಿ ವಿನಿಮಯ ಮಾಡುವವರಿಗೆ ಮುನ್ನಡೆ. ಶುಭಸಂಖ್ಯೆ: 7
ಮೀನ: ಸಾಮರ್ಥ್ಯಕ್ಕೆ ಸರಿಯಾದ ಕಾರ್ಯ ಆಯ್ಕೆ ಮಾಡಿಕೊಳ್ಳಿ. ಪೊಲೀಸರಿಗೆ ಬಯಸಿದ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 9