ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಮದುವೆಗೆ ಕಾಲ ಕೂಡಿ ಬರಲಿದೆ

Nitya-Bhavisya-FILEminimizer
Published on

ಮೇಷ: ಬಾಳೆ ಕೃಷಿಯಿಂದ ನಿರೀಕ್ಷೆಗಿಂತ ಹೆಚ್ಚು ಲಾಭ, ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ಮದುವೆಗೆ ಕಾಲ ಕೂಡಿ ಬರಲಿದೆ. ಶುಭಸಂಖ್ಯೆ: 5

ವೃಷಭ: ಕಾರ್ಖಾನೆ ಮಾಲೀಕರಿಗೆ ಕೆಲಸಗಾರರ ಬಗ್ಗೆ ಕಾಳಜಿ ಅಗತ್ಯ. ಪ್ರಭಾವಿಗಳ ಭೇಟಿ. ಭೂಮಿಯ ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಶುಭಸಂಖ್ಯೆ: 1

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ. ಕುಟುಂಬದಲ್ಲಿ ವಿವಾಹ ನೆರವೇರುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ಆದಾಯ. ಶುಭಸಂಖ್ಯೆ:1

ಕಟಕ: ವಿವಾಹಕ್ಕೆ ಸಂಬಂಧಿಸಿದ ಪ್ರಯತ್ನ ಫಲಿಸಲಿದೆ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಬೆಳೆಗಳ ಕೃಷಿಕರಿಗೆ ಅಧಿಕ ಲಾಭ. ಶುಭಸಂಖ್ಯೆ: 9

ಸಿಂಹ: ಉದ್ಯೋಗ ಬದಲಿಸಲು ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ಆದಾಯವಿದೆ. ಮಕ್ಕಳ ಪ್ರಗತಿ ಕಂಡು ಸಮಾಧಾನ. ಶುಭಸಂಖ್ಯೆ: 2

ಕನ್ಯಾ: ಪ್ರಮುಖ ತೀರ್ವನಗಳಲ್ಲಿ ವಿಶೇಷ ಎಚ್ಚರವಿರಲಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭವಾಗಿ ಸಂತಸ. ಗೃಹ ನಿರ್ವಣಕ್ಕೆ ಅನುಕೂಲ. ಶುಭಸಂಖ್ಯೆ: 6

ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ. ವಿಜ್ಞಾನಿಗಳಿಗೆ ಯಶ. ವೈದ್ಯರ ಸಲಹೆ ಪಾಲಿಸಿ. ಕೌಟುಂಬಿಕ ಜಟಿಲ ಸಮಸ್ಯೆ ಇತ್ಯರ್ಥವಾಗಲಿದೆ. ಶುಭಸಂಖ್ಯೆ:1

ವೃಶ್ಚಿಕ: ಔಷಧಿ ಮಾರಾಟದವರಿಗೆ ಬೇಡಿಕೆ. ಅಧಿಕಾರಿ ಗಳೊಂದಿಗೆ ವಾದ ವಿವಾದ ಉಂಟಾದೀತು. ಲೇವಾ ದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 6

ಧನುಸ್ಸು: ಶ್ರಮಕ್ಕೆ ತಕ್ಕ ಯಶಸ್ಸು ದೊರೆಯಲಿದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ: 5

ಮಕರ: ವೈದ್ಯರಿಗೆ ಕಾರ್ಯದೊತ್ತಡ. ಕಿರುಚಿತ್ರ ನಿರ್ದೇಶಕರಿಗೆ ಪ್ರತಿಷ್ಠೆ ಹೆಚ್ಚುತ್ತದೆ. ಗುತ್ತಿಗೆ ಕೆಲಸಗಾರರಿಗೆ ನಿರೀಕ್ಷೆಗಿಂತ ಹೆಚ್ಚು ಆದಾಯ. ಶುಭಸಂಖ್ಯೆ: 2

ಕುಂಭ: ಯಂತ್ರೋಪಕರಣ ಜತೆ ಕೆಲಸ ಮಾಡುವಾಗ ಎಚ್ಚರ. ಲೆಕ್ಕಪರಿಶೋಧಕರ ಆದಾಯ ಹೆಚ್ಚಲಿದೆ. ಸಂಗೀತ ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ: 9

ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ಲಭ್ಯವಾಗುವುದು. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ಉದ್ಯೋಗದ ಹುಡುಕಾಟ ಸಫಲ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net