ನಿತ್ಯ ಭವಿಷ್ಯ: ಈ ರಾಶಿಯವರಿಗೆ ಕೊಟ್ಟ ಹಣ ತಿರುಗಿ ಬರಲಿದೆ

Nitya-Bhavisya-FILEminimizer
Published on

ಮೇಷ: ದವಸ ಧಾನ್ಯ ವ್ಯಾಪಾರದಲ್ಲಿ ಲಾಭ. ಅನವಶ್ಯಕ ಚರ್ಚೆ ಬೇಡ. ಕುಟುಂಬದೊಂದಿಗೆ ಸಂತಸದ ದಿನ. ಚಿಕ್ಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 8

ವೃಷಭ: ಕುಟುಂಬದ ವ್ಯವಹಾರದಲ್ಲಿ ಸಹನೆ ಕಳೆದುಕೊಳ್ಳ ಬೇಡಿ. ಯಂತ್ರಗಳ ಮಾರಾಟದಲ್ಲಿ ವಿಶೇಷ ಲಾಭ. ಆರಕ್ಷಕ ವೃತ್ತಿಯಲ್ಲಿ ಲಾಭ. ಶುಭಸಂಖ್ಯೆ:9

ಮಿಥುನ: ನಿಮ್ಮ ಪ್ರತಿಭೆಗೆ ನೀವು ಕೆಲಸ ಮಾಡುವ ಕಂಪನಿಯಿಂದ ಯೋಗ್ಯ ಪುರಸ್ಕಾರ ಸಿಗಲಿದೆ. ಆಟೋ ಮೊಬೈಲ್ಸ್ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 4

ಕಟಕ: ಪರಿಶ್ರಮಕ್ಕೆ ಸೂಕ್ತ ಫಲ. ದೈಹಿಕ ಕಸರತ್ತಿನ ಮಳಿಗೆಯವರಿಗೆ ಲಾಭ. ಕೃಷಿಕರಿಗೆ ಬೆಳೆ ನಷ್ಟ ಚಿಂತೆ. ಸಾಲ ಮಾಡುವಾಗ ಯೋಚಿಸಿ. ಶುಭಸಂಖ್ಯೆ:1

ಸಿಂಹ: ಹೊಸ ಮನೆ ಖರೀದಿಗೆ ನಿರ್ಧಾರ. ಹೊಸ ಹೂಡಿಕೆದಾರರಿಂದ ಹೊಸ ಯೋಜನೆ ಕಾರ್ಯಗತ. ಟ್ರಾವೆಲ್ಸ್ ಮಾಲೀಕರಿಗೆ ಲಾಭ. ಶುಭಸಂಖ್ಯೆ: 7

ಕನ್ಯಾ: ಉನ್ನತ ಹುದ್ದೆಗೆ ಆಯ್ಕೆಯಾಗಲಿದ್ದೀರಿ. ತಾಂತ್ರಿಕ ವರ್ಗದವರಿಗೆ ಲಾಭ. ಕೊಟ್ಟ ಹಣ ತಿರುಗಿ ಬರಲಿದೆ. ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ: 6

ತುಲಾ: ಪುಣ್ಯ ಸಂಪಾದನೆಗಾಗಿ ಕುಲದೇವರತ್ತ ಪ್ರಯಾಣ. ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಸ್ಪರ್ಧೆ. ಪ್ರಭಾವಿಗಳ ಭೇಟಿ. ಶುಭಸಂಖ್ಯೆ: 2

ವೃಶ್ಚಿಕ: ಪರಾವಲಂಬನೆಯಿಂದ ಅಸಮಾಧಾನ. ಲೆಕ್ಕಪತ್ರ ಪರಿಶೋಧಕರಿಗೆ ವಿಶೇಷ ದಿನ. ತೀರ್ಥಕ್ಷೇತ್ರದಲ್ಲಿ ಧರ್ಮಕಾರ್ಯ ಮಾಡುವಿರಿ. ಶುಭಸಂಖ್ಯೆ: 9

ಧನುಸ್ಸು: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಸಾಧ್ಯತೆ. ಮಗಳ ವಿವಾಹ ನಿಶ್ಚಯ. ಹೋಟೆಲ್ ಉದ್ಯಮದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ಶುಭಸಂಖ್ಯೆ: 6

ಮಕರ: ಆಸ್ತಿಗಾಗಿ ಕುಟುಂಬದಲ್ಲಿ ಮಾತುಕತೆ. ಅನಿರೀಕ್ಷಿತ ಘಟನೆ ನಡೆಯಲಿದೆ. ಹೊಸ ವಾಹನ ಖರೀದಿ. ನಿರೀಕ್ಷಿತ ಪ್ರಯಾಣ ರದ್ದು.ಶುಭಸಂಖ್ಯೆ: 4

ಕುಂಭ: ಕೈಗೊಂಡ ಕೆಲಸಗಳಲ್ಲೆಲ್ಲ ಜಯ ಸಿಗಲಿದೆ. ಹೃದಯ ಸಂಬಂಧಿ ಕಾಯಿಲೆ ನಿಯಂತ್ರಣಕ್ಕೆ ಬರಲಿದೆ. ಮಕ್ಕಳ ಭವಿಷ್ಯ ದಲ್ಲಿ ಪ್ರಗತಿ. ಶುಭಸಂಖ್ಯೆ: 5

ಮೀನ: ಉನ್ನತ ಹುದ್ದೆಯ ಆಕಾಂಕ್ಷಿಗಳಿಗೆ ಶುಭದಿನ. ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ಲಾಭ. ಅಡಕೆ ಮಂಡಿಯಲ್ಲಿ ಸಾಲ ಸಿಗಲಿದೆ. ಶುಭಸಂಖ್ಯೆ:.3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net