ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ಸಿಗಲಿದೆ

Nitya Bhavisya Vijayavani
Published on

ಮೇಷ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ. ಸಂಗೀತ ಕಲಾವಿದರ ಯಶಸ್ಸಿನ ದಾರಿ ಸುಗಮವಾಗಲಿದೆ. ಸ್ನೇಹಿತರೊಂದಿಗೆ ಪ್ರವಾಸ. ಶುಭಸಂಖ್ಯೆ: 5

ವೃಷಭ: ಸ್ಥಿರಾಸ್ತಿ ಖರೀದಿಯಲ್ಲಿ ಅಡೆತಡೆ ನಿವಾರಣೆ. ಶತ್ರುಗಳ ನಿಗ್ರಹ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1

ಮಿಥುನ: ಮಸ್ತಿಗಾಗಿ ಪ್ರಯಾಣ. ಪ್ರೇಮದ ವಿಚಾರ ಮನೆಯಲ್ಲಿ ಪ್ರಸ್ತಾಪ. ಉದ್ಯೋಗಸ್ಥ ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ:7

ಕಟಕ: ಹೊಸ-ವಾಹನ ಖರೀದಿಗೆ ಯೋಚನೆ. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಪದವಿ ಪ್ರಾಪ್ತಿ. ಅತಿಥಿಗಳ ಆಗಮನ. ಶುಭಸಂಖ್ಯೆ:1

ಸಿಂಹ: ಉದ್ಯೋಗ ಸ್ಥಳದಲ್ಲಿ ಗೌರವ. ಮಕ್ಕಳ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಿ. ಸಹೋದರರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ:9

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ನೆರವು. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಭವಿಷ್ಯದ ಚಿಂತೆ ಬೇಡ. ಪತ್ರ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:4

ತುಲಾ: ಶತ್ರುಗಳು ಮಿತ್ರರಾಗುವರು. ಕಲಾವಿದರಿಗೆ ಸರ್ಕಾರಿ ಗೌರವ. ವ್ಯಾಪಾರ ವ್ಯವಹಾರದಲ್ಲಿ ಲಾಭ. ಆಕಸ್ಮಿಕ ಉತ್ತಮ ಅವಕಾಶ. ಶುಭಸಂಖ್ಯೆ:7

ವೃಶ್ಚಿಕ: ಕೆಟ್ಟ ಹವ್ಯಾಸ ತ್ಯಜಿಸುವಿರಿ. ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ. ಹೊಸವಸ್ತು ಖರೀದಿ. ವಸ್ತ್ರಾಭರಣ ಖರೀದಿಯಲ್ಲಿ ಸಂತೋಷ. ಶುಭಸಂಖ್ಯೆ: 3

ಧನುಸ್ಸು: ಯಂತ್ರೋಪಕರಣಗಳ ಖರೀದಿಯಲ್ಲಿ ಕೃಷಿಕರಿಗೆ ಲಾಭ. ಗೃಹ ನಿರ್ವಣಕ್ಕೆ ಆಪ್ತರ ಸಹಾಯ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ಶುಭಸಂಖ್ಯೆ: 4

ಮಕರ: ಕ್ರೀಡಾಪಟುಗಳ ಜೀವನದಲ್ಲಿ ಅನಿರೀಕ್ಷಿತ ತಿರುವು. ಆರ್ಥಿಕ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ಸಿಗಲಿದೆ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 9

ಕುಂಭ: ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಭವಿಷ್ಯದ ಚಿಂತನೆ. ದಾಂಪತ್ಯದಲ್ಲಿ ಸಾಮರಸ್ಯ ಸಾಧನೆ. ಶಕ್ತಿದೇವತೆಗಳ ದರ್ಶನ. ಶುಭಸಂಖ್ಯೆ:5

ಮೀನ: ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸುವಿರಿ. ಮಕ್ಕಳ ವಿಚಾರದಲ್ಲಿ ಹೆಮ್ಮೆ. ಅಡಕೆ, ಸಾಂಬಾರು ಪದಾರ್ಥ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net