ನಿತ್ಯ ಭವಿಷ್ಯ: ಈ ರಾಶಿಯವರು ಕೋಪದ ಕೈಗೆ ಬುದ್ದಿ ಕೊಡದಿರಿ

Nitya-Bhavisya-FILEminimizer
Published on

ಮೇಷ: ಮನೆಯಲ್ಲಿ ಕಿರಿಕಿರಿ ಆಗಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯುವ ಅವಕಾಶ. ಬಂಧುಗಳ ಸಹಾಯ ಸಿಗಲಿದೆ. ಶುಭಸಂಖ್ಯೆ: 6

ವೃಷಭ: ರೇಷ್ಮೆ ಕೃಷಿಕರಿಗೆ ಲಾಭ ಬಂದು ಸಂತಸ. ರಕ್ಷಣಾ ಕ್ಷೇತ್ರದಲ್ಲಿರುವವರಿಗೆ ವಿಶೇಷ ಗೌರವ. ದೂರ ಪ್ರಯಾಣ ಮಾಡಬೇಕಾಗುವುದು. ಶುಭಸಂಖ್ಯೆ: 1

ಮಿಥುನ: ಮಕ್ಕಳಿಂದ ಸಂತೋಷ. ಹಿರಿಯರ ಆರೋಗ್ಯದತ್ತ ಗಮನಹರಿಸುವುದು ಮುಖ್ಯ. ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 9

ಕಟಕ: ಬಂಧುಮಿತ್ರರ ಭೇಟಿಯಾಗಲಿದೆ. ಕೋಪದಿಂದ ಸಂಬಂಧಗಳಲ್ಲಿ ಬಿರುಕು ಮೂಡಬಹುದು, ಹುಷಾರು. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 4

ಸಿಂಹ: ದೈಹಿಕ ಅಸಮರ್ಥತೆ ಹೆಚ್ಚು ಕಾಡಬಹುದು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವಿರಿ. ಅಧ್ಯಾತ್ಮದ ಕಡೆ ಜಾಸ್ತಿ ಒಲವು. ಶುಭಸಂಖ್ಯೆ: 5

ಕನ್ಯಾ: ಕೀರ್ತಿ ಸಂಪಾದನೆಯಾಗಲಿದೆ. ನಿಮ್ಮ ಪ್ರತಿಭೆಗೆ ಸಮಾಜದಲ್ಲಿ ಜನಮನ್ನಣೆ ಸಿಗಲಿದೆ. ಸ್ವಸಾಮರ್ಥ್ಯ ದಿಂದ ಧನಾಗಮನ. ಶುಭಸಂಖ್ಯೆ: 7

ತುಲಾ: ಸಹೋದ್ಯೋಗಿಗಳಿಂದ ನಿರೀಕ್ಷೆಗಿಂತ ಹೆಚ್ಚು ಸಹಕಾರ. ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ಅನಾರೋಗ್ಯದಿಂದ ಚೇತರಿಕೆ. ಶುಭಸಂಖ್ಯೆ: 2

ವೃಶ್ಚಿಕ: ದಾಂಪತ್ಯದಲ್ಲಿ ಅಸಮಾಧಾನ ಉಂಟಾಗಬಹುದು. ಕೋಪದ ಕೈಗೆ ಬುದ್ದಿ ಕೊಡದಿರಿ. ಪರರಿಂದ ವಂಚನೆ. ಹಣಕಾಸಿನ ಕೊರತೆ. ಶುಭಸಂಖ್ಯೆ: 5

ಧನುಸ್ಸು: ಆಸ್ತಿಯ ವಿವಾದ ತಾರಕ್ಕಕ್ಕೇರಬಹುದು. ಸಮಾಧಾನ ವಿರಲಿ. ಗುರುಹಿರಿಯರಿಂದ ಮಾರ್ಗದರ್ಶನ. ಉನ್ನತ ವ್ಯಾಸಂಗದಲ್ಲಿ ಆಸಕ್ತಿ. ಶುಭಸಂಖ್ಯೆ: 3

ಮಕರ: ವಿವಾಹ ಕಾರ್ಯಕ್ಕೆ ಅಡೆತಡೆ ಬರಬಹುದು. ಸಹೋದರರಿಂದ ಸಕಾಲಕ್ಕೆ ಸಹಾಯ ದೊರೆಯಲಿದೆ. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ: 2

ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ. ಸಾವಯವ ಕೃಷಿಕರಿಗೆ ಬೇಡಿಕೆ ಬರುವುದು. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ. ಶುಭಸಂಖ್ಯೆ: 7

ಮೀನ: ಹಿತೈಷಿಗಳ ಸಲಹೆಗಳನ್ನು ಅಲಕ್ಷ್ಯ ಮಾಡದೇ ಸ್ವೀಕರಿಸಿ. ಮಾತನಾಡುವ ಮುನ್ನ ಎಚ್ಚರವಿರಲಿ. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net