"ಭೂಮಿಗೆ ಭಾರ" ಇಂತಹ ಜನರಿಂದ ಯಾರೂ ಸಂತೋಷವಾಗಿರಲು ಸಾಧ್ಯವಿಲ್ಲ! Chanakya Niti

couple
Published on

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅವರು ಅನೇಕ ನೀತಿಗಳನ್ನು ರೂಪಿಸಿದರು. ಇಂದು ಅದನ್ನು ನಾವೆಲ್ಲರೂ ಚಾಣಕ್ಯ ನೀತಿ ಎಂದು ಕರೆಯುತ್ತಿದ್ದೇವೆ. ಆಚಾರ್ಯ ಚಾಣಕ್ಯ ಅವರ ನೀತಿ ಶಾಸ್ತ್ರವು ಮನುಷ್ಯನ ಕೆಲವು ಗುಣಗಳನ್ನು ವಿವರಿಸಿ ಭೂಮಿಗೆ ಭಾರ ಎಂದು ಹೇಳಿದ್ದಾರೆ. ನಾವು ಈ ಕುರಿತಾಗಿ ಇಂದು ತಿಳಿದುಕೊಳ್ಳೋಣ...

ಶಿಕ್ಷಣದಿಂದ ದೂರ ಉಳಿದವ ಭೂಮಿಗೆ ಹೊರೆ:

ಆಚಾರ್ಯ ಚಾಣಕ್ಯ ಹೇಳುವಂತೆ ಶಿಕ್ಷಣದಿಂದ ದೂರ ಉಳಿದು ಜ್ಞಾನವನ್ನು ಪಡೆಯಲು ನಿರಾಕರಿಸುವ ವ್ಯಕ್ತಿಯು ಭೂಮಿಗೆ ಹೊರೆಯಾಗುತ್ತಾನೆ. ಶಿಕ್ಷಣವಿಲ್ಲದ ವ್ಯಕ್ತಿ ಹಳೆಯ ವಿಚಾರಗಳೊಂದಿಗೆ ಬದುಕುತ್ತಾನೆ ಮತ್ತು ಹೊಸ ವಿಚಾರಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ.

ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪವಾದರೂ ಒಳ್ಳೆಯ ಕಾರ್ಯಗಳಿಗೆ ಬಳಸಬೇಕು. ದಾನ ಮಾಡದೆ.. ತನ್ನ ಜೀವನವನ್ನು ನಡೆಸುವ ವ್ಯಕ್ತಿಯನ್ನು ಭೂಮಿಯ ಮೇಲಿನ ಹೊರೆ ಎಂದು ಬಣ್ಣಿಸಿದ್ದಾನೆ. ನಿರ್ಗತಿಕರಿಗೆ ಮತ್ತು ಅಪಾಯದಲ್ಲಿರುವವರಿಗೆ ದಾನ ಮಾಡಬೇಕು.

ಇತರರೊಂದಿಗೆ ಅಸೂಯೆ ಮತ್ತು ದ್ವೇಷದ ಭಾವನೆಳು, ಕೆಟ್ಟದಾಗಿ ವರ್ತಿಸುವ ಮತ್ತು ಯಾವಾಗಲೂ ಕಠೋರವಾಗಿ ಮಾತನಾಡುವ ವ್ಯಕ್ತಿಯನ್ನು ಕುಟುಂಬ ಸದಸ್ಯರು ಮಾತ್ರವಲ್ಲದೆ ಇತರರು ಸಹ ಇಷ್ಟಪಡುವುದಿಲ್ಲ. ಅವರನ್ನು ಕಿರಿಕಿರಿಗೊಳಿಸುವ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.

ಮಹಿಳೆಯರು ಮತ್ತು ಹಿರಿಯರನ್ನು ಗೌರವಿಸದ ವ್ಯಕ್ತಿಗೆ ದೇವರ ಆಶೀರ್ವಾದ ಎಂದಿಗೂ ಸಿಗುವುದಿಲ್ಲ. ಇದಲ್ಲದೆ, ಚಾಣಕ್ಯರು ಅಂತಹ ಜನರನ್ನು ಭೂಮಿಯ ಮೇಲಿನ ಹೊರೆ ಎಂದು ಬಣ್ಣಿಸಿದ್ದಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net