Chanakya Niti: ಮದುವೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ, ಪ್ರೀತಿಯೇ ವಿಷವಾಗುತ್ತದೆಯಂತೆ!

Chanakya Niti
Published on

Chanakya Niti: ಚಾಣಕ್ಯನ ನೀತಿಯಲ್ಲಿ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಅವರ ಪ್ರಕಾರ, ವ್ಯಕ್ತಿಯ ನಿಜವಾದ ಪ್ರೀತಿ ಮತ್ತು ನಿಷ್ಠೆಯನ್ನು ಒಳ್ಳೆಯ ಸಮಯದಲ್ಲಿ ಅಳೆಯಲಾಗುವುದಿಲ್ಲ. ಕಷ್ಟದ ಸಮಯದಲ್ಲಿ ಯಾರು ನಿಮ್ಮೊಂದಿಗೆ ನಿಲ್ಲುತ್ತಾರೋ ಅವರ ನಿಜವಾದ ಸ್ವರೂಪ ನಿರ್ದರಿಸಲ್ಪಡುತ್ತದೆ. ನಿಮ್ಮ ವೈವಾಹಿಕ ಜೀವನವನ್ನು ಸಂತೋಷ ಮತ್ತು ಸುಂದರವಾಗಿಡಲು ಈ ವಿಷಯಗಳನ್ನು ಪಾಲಿಸಿ ಎಂದು ತಿಳಿಸಿದ್ದಾರೆ.

1. ಪರಸ್ಪರ ಗೌರವ ನೀಡಿ

ಪತಿ ಮತ್ತು ಪತ್ನಿ ಎಂದಿಗೂ ಪರಸ್ಪರ ಪ್ರೀತಿ ಮತ್ತು ಗೌರವವನ್ನು ನೀಡಬೇಕು. ಗೌರವವಿಲ್ಲದ ಸಂಬಂಧ ಬೇಗ ಮುರಿದು ಹೋಗುತ್ತದೆ. ಹಾಗಾಗಿ ಅನ್ಯೂನತೆಯನ್ನು ಕಾಪಾಡಿಕೊಳ್ಳುವುದು ಉತ್ತಮವಾಗಿದೆ. ಇನ್ನು ನಾನು ಮೇಲೆ ನೀನು ಕೀಳು ಎಂಬ ಭಾವನೆಯನ್ನು ಬಿಟ್ಟಾಗ ಸಂಬಂಧಗಳು ಉತ್ತಮವಾಗಿರುತ್ತದೆ.

2. ಪ್ರಾಮಾಣಿಕತೆ ಮತ್ತು ನಿಷ್ಠೆ ಮುಖ್ಯ

ಪ್ರತಿಯೊಂದು ಸಂಬಂಧದಲ್ಲೂ ಪ್ರಾಮಾಣಿಕತೆ ಮತ್ತು ನಿಷ್ಠೆ ತುಂಬಾ ಮುಖ್ಯವಾಗಿರುತ್ತದೆ. ಯಾವುದೇ ಸನ್ನಿವೇಶ ಅಥವಾ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಂಗಾತಿಗಳನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕು. ಸಂಬಂಧದಲ್ಲಿ ಅಪ್ರಮಾಣಿಕತೆ ಅಥವಾ ಸುಳ್ಳನ್ನು ಹೇಳುವುದರಿಂದ ಅಂತರ ಉಂಟಾಗುತ್ತದೆ.

3. ಬದ್ಧತೆ ಇರಬೇಕು

ಪ್ರೀತಿ ಅಥವಾ ಮದುವೆಯಲ್ಲಿ ಇಬ್ಬರೂ ಪರಸ್ಪರ ಬದ್ಧತೆಯನ್ನು ಹೊಂದಿರಬೇಕು. ಯಾವಾಗಲು ಒಬ್ಬರನೊಬ್ಬರು ಬಿಟ್ಟು ಕೊಡಬಾರದು. ಹಾಗೆಯೇ ಪ್ರತಿಯೊಂದು ಸಂದರ್ಭದಲ್ಲೂ ತ್ಯಾಗ ಮತ್ತು ತಾಳ್ಮೆಯಿಂದ ಇದ್ದರೆ ಸಂಬಂಧಗಳು ಪೂರ್ತಿಯಾಗಿ ಉಳಿಯುತ್ತವೆ.

4. ಮಾತು ನಿಯಂತ್ರಿಸಿ

ಸಂಸಾರದಲ್ಲಿ ಯಾರೇ ಒಬ್ಬರೂ ಕೋಪಗೊಂಡು ಜಗಳವಾಡಲು ಪ್ರಾರಂಭಿಸಿದರೂ, ಮತ್ತೊಬ್ಬರು ಮಾತನ್ನು ನಿಯಂತ್ರಿಸಿ. ಮಾತಿಗೆ ಮಾತು ಬೆಳೆಸುವುದರಿಂದ ಯಾವುದೇ ಉಪಯೋಗವಿಲ್ಲ. ಹಾಗೆಯೇ ಈ ರೀತಿ ಮಾಡುವುದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ.

5. ಸಂವಹನದಲ್ಲಿ ಯಾವುದೇ ಕೊರತೆ ಇರಬಾರದು

ಗಂಡ ಹೆಂಡತಿಯ ನಡುವೆ ಒಳ್ಳೆಯ ಸಂವಹನವಿಲ್ಲದಿದ್ದರೆ, ಚಿಕ್ಕ ಚಿಕ್ಕ ತಪ್ಪುಗಳೂ ದೊಡ್ಡದಾಗಿ ಕಾಣುತ್ತಾ ಹೋಗುತ್ತವೆ. ಇದು ಅಂತರವನ್ನು ಕಾಪಾಡುತ್ತದೆ. ಹಾಗಾಗಿ ಪ್ರತಿದಿನ ಒಳ್ಳೆಯ ಸಂಭಾಷಣೆಯನ್ನು ಮಾಡುವುದರಿಂದ ಸಂಬಂಧಗಳು ಬಲಪಡುತ್ತವೆ.

6. ಅತಿಯಾದ ಆತ್ಮವಿಶ್ವಾಸ ತಪ್ಪಾಗುತ್ತದೆ

ಚಾಣಕ್ಯನ ಪ್ರಕಾರ, ಅತಿಯಾದ ಆತ್ಮವಿಶ್ವಾಸ ದಾಂಪತ್ಯ ಜೀವನದಲ್ಲಿ ಮಾಡುವಂತಹ ದೊಡ್ಡ ತಪ್ಪುಗಳಾಗಿವೆ. ಸಂಬಂಧದಲ್ಲಿ ಸಂವಹನ ಎಂದಿಗೂ ನಿಲ್ಲಬಾರದು. ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಿಲ್ಲುವಂತಹ ನಿಷ್ಟಾವಂತ ಸಂಗಾತಿಯೇ ನಿಜವಾದ ಆಧಾರಸ್ತಂಭ ಎಂದು ಹೇಳಲಾಗುತ್ತದೆ.

ಚಾಣಕ್ಯನ ಪ್ರಕಾರ, ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ದಾಂಪತ್ಯದಲ್ಲಿ ಜೀವನ ಒಳ್ಳೆಯ ರೀತಿಯಲ್ಲಿ ಮುನ್ನಣೆಯಲು ಸಾಧ್ಯ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net