

Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.
ಸಾಲ ಯಾವುದೇ ಸಂಬಂಧವನ್ನು ಕ್ಷಣ ಮಾತ್ರದಲ್ಲಿ ಮುರಿದು ಹಾಕುತ್ತದೆ. ಕೆಲವರು ತಮ್ಮ ಆಗತ್ಯತೆಗಳಿಗಾಗಿ ಹಣ ಪಡೆಯುತ್ತಾರೆ. ಆದ್ರೆ ಕೇಳಿದ ಸರಿಯಾದ ಸಮಯಕ್ಕೆ ಹಣ ಮರುಪಾವತಿ ಮಾಡಲ್ಲ. ಹೋಗಾಗಿ, ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ. ಕೆಲವು ರಾಶಿಚಕ್ರ ಚಿಹ್ನೆಗಳು ಸಾಲವನ್ನು ತೆಗೆದುಕೊಂಡ ನಂತರ ಅದನ್ನು ಎಂದಿಗೂ ಮರುಪಾವತಿಸುವುದಿಲ್ಲ. ಆ ರಾಶಿಚಕ್ರ ಚಿಹ್ನೆಗಳು ಯಾರು ಎಂಬುದನ್ನು ತಿಳಿಯೋಣ.
1.ಧನುಸ್ಸು ರಾಶಿ
ಧನು ರಾಶಿಯ ಜನರನ್ನು ಸಾಮಾನ್ಯವಾಗಿ ಗುರು ಆಳುತ್ತಾನೆ. ಅವರು ಸಾಹಸಮಯರು ಆದರೆ,ಉಳಿತಾಯದಲ್ಲಿ ಹೆಚ್ಚು ಆಸಕ್ತಿ ಅವರಿಗೆ ಇಲ್ಲ.ಅಲ್ಲದೆ, ಹೆಚ್ಚಿನ ನಿರೀಕ್ಷೆಗಳಿಲ್ಲ. ಅವರು ಹೆಚ್ಚಾಗಿ ಅಸಡ್ಡೆ ಹೊಂದಿರುತ್ತಾರೆ. ಈ ರೀತಿಯಾಗಿ, ಅವರು ತಾವು ತೆಗೆದುಕೊಂಡ ಸಾಲವನ್ನು ಮರುಪಾವತಿಸುವ ಜವಾಬ್ದಾರಿಯನ್ನು ಮರೆತುಬಿಡುತ್ತಾರೆ.
2.ಮಿಥುನ
ಮಿಥುನ ರಾಶಿಯವರಿಗೆ ಬುಧನು ಅಧಿಪತಿ. ಇತರರೊಂದಿಗೆ ಸಿಹಿಯಾಗಿ ಮಾತನಾಡುತ್ತಾರೆ ಮತ್ತು ಸಾಲವನ್ನು ಪಡೆಯುತ್ತಾರೆ. ಆದರೆ ಅದನ್ನು ಮರಳಿ ಕೇಳುವ ವಿಷಯ ಬಂದಾಗ, ಅವರು ತಪ್ಪಿಸಿಕೊಳ್ಳಲು ತಮ್ಮ ವಾಗ್ಮಿತೆಯನ್ನು ಬಳಸುತ್ತಾರೆ. ಮಿಥುನ ರಾಶಿಯವರಿಗೆ ಹಣವನ್ನು ನೀಡಿ ಅದನ್ನು ಮರಳಿ ಪಡೆಯುವುದು ಸವಾಲಿನ ಕೆಲಸ.
3.ಮೀನ
ಜ್ಯೋತಿಷ್ಯದ ಪ್ರಕಾರ, ನೆಪ್ಚೂನ್ ಕಲ್ಪನೆಯ ಪ್ರಪಂಚಕ್ಕೆ ಸಂಬಂಧಿಸಿದ ಗ್ರಹವಾಗಿದೆ. ಮೀನ ರಾಶಿಯವರು ತಮ್ಮ ಕಲ್ಪನೆ ಮತ್ತು ಮರೆವುಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಸಾಲಗಳನ್ನು ಮರೆತುಬಿಡುತ್ತಾರೆ. ಅವರು ಉದ್ದೇಶಪೂರ್ವಕವಾಗಿ ತಮ್ಮ ಸಾಲಗಳನ್ನು ಮರುಪಾವತಿಸುವುದಿಲ್ಲ.
4.ಸಿಂಹ
ಸಿಂಹ ರಾಶಿಯವರು ಸೂರ್ಯನಿಂದ ಆಳಲ್ಪಡುತ್ತಾರೆ. ಅವರು ಸ್ವಾಭಾವಿಕವಾಗಿ ವರ್ಚಸ್ವಿ ಮತ್ತು ಪ್ರಾಬಲ್ಯ ಹೊಂದಿದ್ದಾರೆ. ಆದರೆ ಅವರ ಅಜಾಗರೂಕ ಖರ್ಚುಗಳಿಂದಾಗಿ, ಅವರು ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲ. ಸಾಲವನ್ನು ತೀರಿಸಲು ಅವರು ಮತ್ತೆ ಮತ್ತೆ ಸಾಲ ತೆಗೆದುಕೊಳ್ಳುತ್ತಾರೆ.(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.