ಸೂರ್ಯ ಸಂಚಾರ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಡಿಸೆಂಬರ್​ 14 ರಂದು ಅಧಿದೇವತೆ ಸೂರ್ಯ ಮತ್ತು ಚಂದ್ರನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಸಾಗುತ್ತಾನೆ. ಈ ಪರಿಣಾಮವಾಗಿ ಚಂದ್ರ ಮತ್ತು ಸೂರ್ಯ ವೇಶಿ ಯೋಗವನ್ನು ರೂಪಿಸುತ್ತಾರೆ. ಸೂರ್ಯ ಮತ್ತು ಬುಧನ ಸಂಯೋಗವು ಬುಧಾದಿತ್ಯ ಯೋಗವನ್ನು ರೂಪಿಸುತ್ತದೆ. ಈ ಆಶೀರ್ವಾದದಿಂದ ಈ ರಾಶಿಗಳಿಗೆ ಅದೃಷ್ಟವು ಬರಲಿದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ತುಂಬಾ ಅದೃಷ್ಟವಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ವಿಶೇಷ ಸಮಯವನ್ನು ಕಳೆಯುವ ಅವಕಾಶ ನಿಮಗೆ ಸಿಗುತ್ತದೆ. ಕುಟುಂಬದೊಂದಿಗೆ ದೂರ ಪ್ರಯಾಣ ಬೆಳೆಸಲಿದ್ದಾರೆ. ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನವ ಪ್ರಭಾವ ಹಾಗೂ ಗೌರವವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸಂಬಂಧಿಗಳನ್ನು ಭೇಟಿಯಾಗುವ ಸಾಧ್ಯತೆ ಇರುತ್ತದೆ. ಪಾಲುದಾರಿಕೆ ಕೆಲಸದಲ್ಲಿಯೂ ಇದು ನಿಮಗೆ ಆಹ್ಲಾದಕರ ದಿನವಾಗಿರುತ್ತದೆ. ಐಷರಾಮಿ ವಸ್ತುಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೀರಿ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಇಂದು ನೆಮ್ಮದಿ ಮತ್ತು ಅನುಕೂಲತೆಯ ದಿನವಾಗಿರುತ್ತದೆ. ಕುಟುಂಬದ ಸದಸ್ಯರಿಂದ ನಿಮಗೆ ಸಂಪೂರ್ಣ ಗೌರವ ಸಿಗಲಿದೆ. ಆಸ್ತಿ ಒಪ್ಪಂದವನ್ನು ಮಾಡಿಕೊಳ್ಳಲು ಬಯಸಿದರೆ, ಕೆಲಸದಲ್ಲಿ ಯಶಸ್ವಿಯಾಗಲಿದ್ದೀರಿ. ಬಹಳ ದಿನಗಳಿಂದ ಸಾಗಬೇಕಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ತಾಯಿಯಿಂದ ಸಹಾಯ ಸಿಗುತ್ತದೆ. ಸಂಗಾತಿಗಳು ಇಂದು ತಮ್ಮ ಪ್ರೀತಿಪಾತ್ರರಿಂದ ಶುಭ ಸಂದೇಶವನ್ನು ಕೇಳಲಿದ್ದೀರಿ. ವಾಹನ ಖರೀದಿಸಲು ಉತ್ತಮ ದಿನವಾಗಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಸೃಜನಶೀಲಕ್ಕೆ ಕೆಲಸ ಲಾಭದಾಯಕ ದಿನವಾಗಿರುತ್ತದೆ. ನಿಮಗೆ ಒಂದು ಪ್ರಮುಖ ಅವಕಾಶ ಸಿಗುತ್ತದೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ವ್ಯವಹಾರದಲ್ಲಿ ಜಾಸ್ತಿ ಲಾಭಗಳಿಸುವ ಸಾಧ್ಯತೆ ಹೆಚ್ಚಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಲಿದ್ದೀರಿ. ಮನೆ ಅಥವಾ ಆಸ್ತಿ ಖರೀದಿಸುವವರಿಗೆ ಉತ್ತಮ ದಿನವಾಗಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನಹರಿಸುತ್ತಾರೆ. ಇದು ಭವಿಷ್ಯದ ಯಶಸ್ಸಿಗೆ ಕಾರಣವಾಗುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net