ಬ್ರಹ್ಮ ಮುಹೂರ್ತದಲ್ಲಿ ಹೀಗೆ ಮಾಡಿದ್ರೆ, ಜೀವನದಲ್ಲಿ ವಿಶೇಷ ಪ್ರಗತಿಯನ್ನು ಸಾಧಿಸುವಿರಿ! | Brahma Muhurta

Bbau (96)
Published on

ಬೆಂಗಳೂರು: ಶಾಸ್ತ್ರಗಳಲ್ಲಿ ಬ್ರಹ್ಮಮುಹೂರ್ತವನ್ನು(Brahma Muhurta) ವಿಶೇಷವಾಗಿ ಪರಿಗಣಿಸಲಾಗಿದೆ.ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನ ಪಡೆದಿದೆ ಬ್ರಹ್ಮ ಮುಹೂರ್ತ.ಬ್ರಹ್ಮ ಮುಹೂರ್ತ ಎಂದರೆ ಸೂರ್ಯೋದಯಕ್ಕೆ ಸುಮಾರು 1.5ಗಂಟೆಗಳ ಮೊದಲು, ಸಾಮಾನ್ಯವಾಗಿ ಬೆಳಿಗ್ಗೆ 4:೦೦ ರಿಂದ 5:30ರವರೆಗಿನ ಸಮಯ. ಈ ಸಮಯದಲ್ಲಿ ವಾಯು ಶುದ್ಧವಾಗಿರುತ್ತದೆ, ಧನಾತ್ಮಕ ಶಕ್ತಿಗಳು ಹೆಚ್ಚಿರುತ್ತವೆ ಮತ್ತು ಮನಸ್ಸು ಏಕಾಗ್ರವಾಗುತ್ತದೆ. ಶಾಸ್ತ್ರಗಳ ಪ್ರಕಾರ, ಈ ಮುಹೂರ್ತದಲ್ಲಿ ಏಳಿ ಧ್ಯಾನ, ಮಂತ್ರ ಜಪ ಅಥವಾ ಸರಳ ಪರಿಹಾರಗಳನ್ನು ಮಾಡಿದರೆ ಜೀವನದಲ್ಲಿ ಯಶಸ್ಸು, ಆರೋಗ್ಯ, ಸಂಪತ್ತು ಮತ್ತು ಮಾನಸಿಕ ಶಾಂತಿ ಸಾಧ್ಯವಾಗುತ್ತದೆ.

ಬ್ರಹ್ಮ ಮುಹೂರ್ತದಲ್ಲಿ ಏಳುವುದರ ಪ್ರಯೋಜನಗಳು

ಆರೋಗ್ಯ ಮತ್ತು ಶಕ್ತಿ: ದೇಹ ಶುದ್ಧಗೊಳ್ಳುತ್ತದೆ, ದೈಹಿಕ ಶಕ್ತಿ ಹೆಚ್ಚುತ್ತದೆ ಮತ್ತು ದಿನವಿಡೀ ಉತ್ಸಾಹ ಉಳಿಯುತ್ತದೆ.

ಬುದ್ಧಿ ಮತ್ತು ಜ್ಞಾನ: ಮನಸ್ಸು ಶಾಂತವಾಗಿ, ಏಕಾಗ್ರತೆ ಹೆಚ್ಚುತ್ತದೆ; ಅಧ್ಯಯನ ಅಥವಾ ಕೆಲಸದಲ್ಲಿ ಯಶಸ್ಸು ಸಾಧ್ಯ.

ಸೌಂದರ್ಯ ಮತ್ತು ಸಂಪತ್ತು: ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಸೌಂದರ್ಯ ಮತ್ತು ಧನ ಲಾಭ.

ಮಾನಸಿಕ ಶಾಂತಿ: ಭಯ, ಒತ್ತಡ ಮತ್ತು ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗುತ್ತವೆ; ದೈವಿಕ ಶಕ್ತಿ ಪಡೆಯುತ್ತೀರಿ.

ವಿಶೇಷ ಪರಿಹಾರಗಳು ಮತ್ತು ಮಂತ್ರಗಳು

ಬ್ರಹ್ಮ ಮುಹೂರ್ತದಲ್ಲಿ ಈ ಸರಳ ಪರಿಹಾರಗಳನ್ನು ಮಾಡಿ. ಇವುಗಳನ್ನು ಪ್ರತಿದಿನ 10-15ನಿಮಿಷಗಳು ಮಾಡಿದರೆ ಸಾಕು. ನೀರು ಸೇವಿಸಿ, ಸ್ನಾನ ಮಾಡಿ, ಶುದ್ಧ ಬಟ್ಟೆ ಧರಿಸಿ ಆರಂಭಿಸಿ.

ಕರಾಗ್ರೆ ವಸತೇ ಲಕ್ಷ್ಮಿ ಮಂತ್ರ

ಮಂತ್ರ: ಕರಾಗ್ರೆ ವಸತೇ ಲಕ್ಷ್ಮಿ, ಕರಮಧ್ಯೆ ಸರಸ್ವತಿ, ಕರಮೂಲೆ ಸ್ಥಿತೋ ಬ್ರಹ್ಮ, ಪ್ರಭಾತೇ ಕರದರ್ಶನಂ. ಅಂಗೈಗಳನ್ನು ನೋಡುತ್ತಾ 108 ಬಾರಿ ಜಪಿಸಿ.

ಗ್ರಹ ಶಾಂತಿ ಮಂತ್ರ

ಮಂತ್ರ: ಬ್ರಹ್ಮ ಮುರಾರಿ ತ್ರಿಪುರಾಂತಕಾರೀ ಭಾನುಃ ಶಶಿ ಭೂಮಿ ಸುತೋ ಬುಧಶ್ಚ, ಗುರುಶ್ಚ ಶುಕ್ರ ಶನಿ ರಾಹು ಕೇತವ ಸರ್ವೇ ಗ್ರಹ ಶಾಂತಿ ಕರ ಭವಂತು.

ಕಣ್ಣು ಮುಚ್ಚಿ ಜಪಿಸಿ, ಕೈಯಲ್ಲಿ ನೀರು ತೆಗೆದು ಆಸೆ ಹೇಳಿ ನೆಲಕ್ಕೆ ಬಿಡಿ (108 ಬಾರಿ). ಆಸೆಗಳ ಈಡೇರಿಕೆ ಮತ್ತು ಜೀವನ ಪ್ರಗತಿಯಾಗುತ್ತದೆ.

ಗಾಯತ್ರಿ ಮಂತ್ರ

ಮಂತ್ರ: ಓಂ ಭೂರ್ಭುವಃ ಸ್ವಃ, ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯಃ ಧೀಮಹಿ, ಧಿಯೋ ಯೋ ನಃ ಪ್ರಚೋದಯಾತ್.

ಸೂರ್ಯನಿಂದರೆ ಎದುರಿಸಿ 21 ಬಾರಿ ಜಪಿಸಿ. ಇದರಿಂದ ಬುದ್ಧಿ, ಏಕಾಗ್ರತೆ ಅಧಿಕವಾಗಲಿದೆ ವಿದ್ಯಾರ್ಥಿಗಳಿಗೆ ವಿಶೇಷ ಲಾಭ.

ಮಹಾಮೃತ್ಯುಂಜಯ ಮಂತ್ರ

ಮಂತ್ರ: ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ, ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್.

ಶಿವಲಿಂಗ ಅಥವಾ ಚಿತ್ರದ ಮುಂದೆ 108 ಬಾರಿ ಜಪಿಸಿ. ಇದರಿಂದ ಆರೋಗ್ಯ, ಭಯ-ಒತ್ತಡ ನಿವಾರಣೆ ದೀರ್ಘಾಯುಷ್ಯ ಮತ್ತು ಶಾಂತಿ. ಈ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ; ಅದರಿಂದ ದಿನ ಹಾನಿಗೊಳಗಾಗಬಹುದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net