ಬಾಬಾ ವಂಗಾ Prediction: 2026ಕ್ಕೆ ಜಗತ್ತು ಸಿಲುಕಲಿದೆ... Baba Vanga ಭವಿಷ್ಯಕ್ಕೆ ಬೆಚ್ಚಿಬಿದ್ದ ವಿಶ್ವ!

Untitled design - 2025-10-14T073802.712
Published on

Prediction: ಬಲ್ಲೇರಿಯನ್‌ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಬಾಬಾ ವಂಗಾ ಮಾಡಿದ ಕೆಲವು ಭವಿಷ್ಯವಾಣಿಗಳು ಜ್ಯೋತಿಷ್ಯ ಚಲನೆಗಳು ಮತ್ತು ಗ್ರಹಗಳ ಚಲನೆಗಳಿಗೆ ಸಂಬಂಧಿಸಿವೆ ಎಂದು ಜ್ಯೋತಿಷಿಗಳು ಮತ್ತು ಆಧ್ಯಾತ್ಮಿಕ ನಾಯಕರು ನಂಬುತ್ತಾರೆ. ಇದೀಗ ಮುಂದಿನ ವರ್ಷ ಗಳಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ತಿಳಿಸಿದ್ದು ಏನು ಎಂಬುದು ತಿಳಿಯೋಣ..

ನಗದು ಮೋಹಕ್ಕೆ ಜಗತ್ತು ತತ್ತರ!

ಮುಂದಿನ ವರ್ಷ(2026) ಆತಂಕಕಾರಿ ಜಾಗತಿಕ ಘಟನೆಗಳ ಸರಣಿಯನ್ನು ಬಾಬಾ ವಂಗಾ ಮುನ್ಸೂಚಿಸಿದ್ದರು ಎಂದು ಹೇಳಲಾಗುತ್ತದೆ. ಇದರಲ್ಲಿ ಅವರು 'Cash Crus'(ತೀವ್ರ ಜಾಗತಿಕ ಆರ್ಥಿಕ ಬಿಕ್ಕಟ್ಟು) ಜಗತ್ತಿಗೆ ಕಾಡಲಿದೆ. ಜಾಗತಿಕ ಆರ್ಥಿಕತೆಯು ಒತ್ತಡದ ಲಕ್ಷಣಗಳನ್ನು ತೋರಿಸುತ್ತಿರುವುದರಿಂದ ಅವರ ಎಚ್ಚರಿಕೆಗಳು ಹೊಸ ಗಮನ ಸೆಳೆದವು ಎಂದು ಲ್ಯಾಡ್‌ಬೈಬಲ್ ವರದಿ ಮಾಡಿದೆ.

LadBible ಪ್ರಕಾರ, ಬಾಬಾ ವಂಗಾ 2026ರಲ್ಲಿ ತೀವ್ರ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಭವಿಷ್ಯ ನುಡಿದಿದ್ದರು. ಡಿಜಿಟಲ್ ಮತ್ತು ಭೌತಿಕ ಎರಡೂ ಹಣ ವ್ಯವಸ್ಥೆಗಳು ಕುಸಿಯುತ್ತವೆ. ಇದು 'ನಗದು ಮೋಹ'ಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆಯನ್ನು ಆಧರಿಸಿದೆ.

ಈ ಬಿಕ್ಕಟ್ಟು ಬ್ಯಾಂಕಿಂಗ್ ಬಿಕ್ಕಟ್ಟುಗಳು, ಕರೆನ್ಸಿ ಅಪಮೌಲ್ಯೀಕರಣ ಮತ್ತು ಮಾರುಕಟ್ಟೆ ದ್ರವ್ಯತೆ ಕಡಿತದಂತಹ ಘಟನೆಗಳಿಗೆ ಕಾರಣವಾಗಬಹುದು. ಇದು ಹಣದುಬ್ಬರ, ಹೆಚ್ಚಿನ ಬಡ್ಡಿದರಗಳು ಮತ್ತು ತಂತ್ರಜ್ಞಾನ ಉದ್ಯಮದಲ್ಲಿನ ಅಸ್ಥಿರತೆಯಿಂದ ತತ್ತರಿಸುತ್ತಿರುವ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net