ಶುಕ್ರ ಸಂಚಾರ: ಈ ರಾಶಿಯವರಿಗೆ ಲಕ್ಕೋ ಲಕ್ಕು! ನಿಮ್ದೂ ಇದೇ ರಾಶಿನಾ? Astrology

Astrology  (ಸಾಂದರ್ಭಿಕ ಚಿತ್ರ)
Astrology (ಸಾಂದರ್ಭಿಕ ಚಿತ್ರ)
Published on
Astrology: ಇಂದು ಶುಕ್ರನು ಮೇಷ ರಾಶಿಯಿಂದ ಹೊರಟು ವೃಶ್ಚಿಕ ರಾಶಿಗೆ ಪ್ರವೇಶ ಪಡೆಯುತ್ತಾನೆ. ಈ ವೇಳೆ ತನ್ನ ರಾಶಿಯಲ್ಲಿ ಶುಕ್ರ ಕೆಲವೊಂದು ಸ್ಥಾನಬದಲಾವಣೆಯನ್ನು ಮಾಡುತ್ತಾನೆ. ಇದರಿಂದ ಕೆಲವೊಂದು ರಾಶಿಗಳು ಪ್ರಯೋಜನ ಪಡೆಯುತ್ತಾರೆ ಎಂದು ಹೇಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಈ ಶುಕ್ರನ ಸಂಚಾರವು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಪ್ರತಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ. ಹಾಗಿದ್ದರೆ ಯಾವ ರಾಶಿಯವರಿಗೆ ಪ್ರಯೋಜನಗಳಿವೆ ಎಂದು ನೋಡೋಣ ಬನ್ನಿ....

ಕನ್ಯಾ ರಾಶಿ

ಜ್ಯೋತಿಷ್ಯದಲ್ಲಿ ಬುದ್ಧಿವಂತ ಗ್ರಹ ಎಂದು ಕರೆಯಲಾಗುವ ಶುಕ್ರನು ಇಂದು ಎರಡನೇ ಮನೆಯಲ್ಲಿ ಸಾಗುತ್ತಾನೆ. ಈ ಕಾರಣದಿಂದ ಈ ರಾಶಿಯವರು ಆರ್ಥಿಕವಾಗಿ ಭದ್ರತೆಯನ್ನು ಪಡೆಯುತ್ತಾರೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದ್ದೀರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು, ಗುರು-ಹಿರಿಯರ ಆಶೀರ್ವಾದ ನಿಮ್ಮ ಕೈ ಹಿಡಿಯಲಿದೆ.

ಧನು ರಾಶಿ

ಈ ಶುಕ್ರನ ಸಂಚಾರವು ನಿಮ್ಮ ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಲಿದ್ದೀರಿ. ಆರ್ಥಿಕ ಲಾಭಗಳು ನಿಮಗೆ ಸಹಾಯ ಮಾಡಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡಲಿದ್ದೀರಿ.

ಮೀನ ರಾಶಿ

ಶುಕ್ರನು ನಿಮ್ಮ ನಾಲ್ಕನೇ ಮನೆಯನ್ನು ಸಾಗಿಸುತ್ತಾನೆ, ಇದನ್ನು ಸಂತೋಷದ ಮನೆ ಎಂದು ಹೇಳಲಾಗುತ್ತದೆ. ಶುಕ್ರನ ಉಪಸ್ಥಿತಿಯು ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ. ಅನಿರೀಕ್ಷಿತ ಬದಲಾವಣೆಗಳು ನಿಮ್ಮ ಕೈಹಿಡಿಯಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕೆಲಸಕ್ಕೆ ಸಂಬಂಧಿಸಿದಂತೆ ಬಡ್ತಿ, ಸಂಬಳ ಹೆಚ್ಚಾಗುವ ನಿರೀಕ್ಷೆ ಇದೆ. ಪ್ರೇಮ ಸಂಬಂಧಗಳಿಗೆ ಉತ್ತಮ ಸಮಯವಾಗಲಿದ್ದು, ನಿಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ಸಾಗಿಸಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net