ಕೃತಿಕಾ ನಕ್ಷತ್ರಕ್ಕೆ ಮಂಗಳನ ಎಂಟ್ರಿ: ಈ ರಾಶಿಯವರ ಲಕ್ ಖುಲಾಯಿಸಲಿದೆ; ವೃತ್ತಿಜೀವನದಲ್ಲಿ ಸಕ್ಸಸ್ ಪಕ್ಕಾ! Astrology

Astrology ಸಾಂದರ್ಭಿಕ ಚಿತ್ರ
Astrology ಸಾಂದರ್ಭಿಕ ಚಿತ್ರ
Published on
Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸದ ಕಾರಕ ಎಂದು ಕರೆಯಲ್ಪಡುವ ಮಂಗಳ ಗ್ರಹವು ಶೀಘ್ರದಲ್ಲೇ ತನ್ನ ರಾಶಿ ಪರಿವರ್ತನೆ ಮಾಡಲಿದ್ದಾನೆ. ಜೂನ್ 16, 2026 ರಂದು ಬೆಳಿಗ್ಗೆ 9:40 ಕ್ಕೆ ಮಂಗಳ ಗ್ರಹವು ಸೂರ್ಯನ ನಕ್ಷತ್ರವಾದ ಕೃತಿಕಾ ರಾಶಿಯನ್ನು ಪ್ರವೇಶಿಸಲಿದೆ. ಈ ಸಂಚಾರವು ಕೆಲವೊಂದು ರಾಶಿಚಕ್ರದವರಿಗೆ ಶುಭವನ್ನು ತರಲಿದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮಂಗಳನ ಸಂಚಾರವು ಯಾವ ರಾಶಿಯವರಿಗೆ ಒಳ್ಳೆಯದು ಎಂದು ನೋಡೋಣ ಬನ್ನಿ...

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ಮಂಗಳನ ಸಂಚಾರವು ಅದೃಷ್ಟಕರವಾಗಿರಬಹುದು. ಈ ಜನರಿಗೆ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅರ್ಧದಲ್ಲೇ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಹೊಸ ಉದ್ಯೋಗ ಹುಡುಕುವವರಿಗೆ ಕೆಲಸಗಳು ಸಿಗುತ್ತವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಬಂಧಿಕರೊಂದಿಗೆ ಆತ್ಮೀಯವಾಗಿ ಸಮಯ ಕಳೆಯಲಿದ್ದೀರಿ. 

ವೃಷಭ ರಾಶಿ

ಸೃಜನಶೀಲ ನಕ್ಷತ್ರದಲ್ಲಿ ಮಂಗಳ ಗ್ರಹದ ಸಂಚಾರವು ವೃಷಭ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ದಿನಗಳಲ್ಲಿ ಇವರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಆರ್ಥಿಕ ಲಾಭಗಳು ಹೆಚ್ಚಾಗಲಿದ್ದು, ಸಂಬಂಧಗಳು ಬಲಗೊಳ್ಳುತ್ತವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದ್ದು, ವ್ಯವಹಾರದಲ್ಲಿ ಆರ್ಥಿಕತೆ ಹೆಚ್ಚಾಗಲಿದೆ. ಇದು ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಇದಾಗಿದೆ. 

ಮೀನ ರಾಶಿ

ಮೀನ ರಾಶಿಯಲ್ಲಿ ಮಂಗಳ ಗ್ರಹದ ಸಂಚಾರವು ಅನುಕೂಲಕರ ಫಲಿತಾಂಶವನ್ನು ತರಲಿದೆ. ಈ ಜನರಿಗೆ ಹಣಕಾಸಿನ ಹರಿವು ಹೆಚ್ಚಾಗಲಿದ್ದು, ಆರ್ಥಿಕವಾಗಿ ಸಂಪನ್ನರಾಗಲಿದ್ದಾರೆ. ಉದ್ಯೋಗಿಗಳು ಕಚೇರಿಯಲ್ಲಿ ಮೇಲಾಧಿಕಾರಿಯಿಂದ ಪ್ರಶಂಸೆಯನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಅಧಿಕ ಲಾಭವನ್ನು ಪಡೆಯಲಿದ್ದೀರಿ. ಈ ದಿನಗಳು ನಿಮಗೆ ಶುಭವಾಗಲಿದ್ದು, ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವನ್ನು ನಡೆಸಲಿದ್ದೀರಿ (ಏಜೆನ್ಸೀಸ್).  
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net