ಲಕ್ಷ್ಮಿ ಕೃಪೆಯಿಂದ ಈ ರಾಶಿಯವರಿಗೆ ಇನ್ಮುಂದೆ 'ಗೋಲ್ಡನ್ ಟೈಮ್'! ನಿಮ್ದೂ ಇದೇ ರಾಶಿನಾ? Astrology

Astrology (ಸಾಂದರ್ಭಿಕ ಚಿತ್ರ)
Astrology (ಸಾಂದರ್ಭಿಕ ಚಿತ್ರ)
Published on
Astrology: ಮೇ ತಿಂಗಳಿನಲ್ಲಿ ಲಕ್ಷ್ಮಿ ನಾರಾಯಣ ರಾಜ್ಯಯೋಗವು ಒಲಿದು ಬರಲಿದೆ. ಮೇ 14 ರಂದು ಶುಕ್ರನು ಮಿಥುನ ರಾಶಿಯಲ್ಲಿ ಸಂಚಾರ ನಡೆಸುತ್ತಾನೆ. ಇದರೊಂದಿಗೆ ಮೇ 29 ರಂದು ಬುಧ ತನ್ನದೇ ಆದ ರಾಶಿಯಾದ ಮಿಥುನ ರಾಶಿಯಲ್ಲಿ ಸಾಗುತ್ತಾನೆ. ಈ ಗ್ರಹಗಳ ಸಂಯೋಗದಿಂದ ಲಕ್ಷ್ಮೀ ನಾರಾಯಣ ರಾಜ್ಯಯೋಗ ರೂಪುಗೊಳ್ಳುತ್ತದೆ.
ಜ್ಯೋತಿಷ್ಯದಲ್ಲಿ, ಲಕ್ಷ್ಮಿ ನಾರಾಯಣ ರಾಜ ಯೋಗವನ್ನು ಅತ್ಯಂತ ಪರಿಣಾಮಕಾರಿ ಯೋಗವೆಂದು ಪರಿಗಣಿಸಲಾಗುತ್ತದೆ. ಈ ರಾಜ ಯೋಗವು ಜನರಿಗೆ ಸಂಪತ್ತು, ಆಸ್ತಿ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದರೊಂದಿಗೆ, ಮೇ ತಿಂಗಳಲ್ಲಿ ಲಕ್ಷ್ಮಿ ನಾರಾಯಣ ರಾಜ ಯೋಗವು ಯಾವ ರಾಶಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನೋಡೋಣ ಬನ್ನಿ....

ಮಿಥುನ ರಾಶಿ

ಈ ರಾಶಿಯವರ ಮನೆಯಲ್ಲಿ ನಾರಾಯಣ ರಾಜ್ಯಯೋಗವು ಉಂಟಾಗಲಿದೆ. ಇದರ ಪರಿಣಾಮ ಸಂಪತ್ತು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ತಂದೆಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಹೊಸ ಉದ್ಯಮ ಪ್ರಾರಂಭಿಸುವವರಿಗೆ ಈ ಸಮಯ ಉತ್ತಮವಾಗಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸಗಳು ಸಿಗುತ್ತವೆ.

ಕನ್ಯಾ ರಾಶಿ

ನಿಮ್ಮ ರಾಶಿಚಕ್ರದ ಹತ್ತನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ರಾಜ್ಯ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ, ಈ ಜನರು ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಮುಕ್ತಾಯಗೊಳ್ಳಲಿವೆ. ತಂದೆಯ ಸಹಾಯದಿಂದ ಗಮನಾರ್ಹ ಯಶಸ್ಸನ್ನು ಪಡೆಯಬಹುದು. ರಾಜಕೀಯದಲ್ಲಿ ತೊಡಗಿರುವವರಿಗೆ ಈ ಸಮಯವು ತುಂಬಾ ಪ್ರಯೋಜನಕಾರಿಯಾಗಿದೆ.

ತುಲಾ ರಾಶಿ

ತುಲಾ ರಾಶಿಯ ಒಂಬತ್ತನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ರಾಜ್ಯ ಯೋಗವು ಸ್ಥಾಪನೆಯಾಗುತ್ತದೆ. ಮೇ ತಿಂಗಳಲ್ಲಿ, ಈರಾಶಿಯ ಜನರಿಗೆ ಕೆಲಸದ ಒತ್ತಡದಿಂದ ಪರಿಹಾರ ಸಿಗುತ್ತದೆ. ಉದ್ಯೋಗಿಗಳಿಗೆ ಬಡ್ತಿ, ಸಂಬಳ ಹೆಚ್ಚಾಗಲಿದೆ. ನೀವು ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಈ ಸಮಯವು ಶುಭ ಮತ್ತು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಉನ್ನತ ಶಿಕ್ಷಣವನ್ನು ಪಡೆಯಲು ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಸಮಯ ಉತ್ತಮವಾಗಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net