ಈ 3 ರಾಶಿಯವರು ಬೆಳ್ಳಿ ಧರಿಸಿದರೆ ಸಾಕು, ಅದೃಷ್ಟ ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತೆ! Astrology

Astrology (ಸಾಂದರ್ಭಿಕ ಚಿತ್ರ)
Astrology (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ದಿನದಿಂದ ದಿನಕ್ಕೆ ಬೆಳ್ಳಿ ಬೆಲೆ ಏರಿಕೆ ಕಂಡಿದೆ. ಅದೇ ರೀತಿ ಇಳಿಕೆಯೂ ಕಾಣುತ್ತಿದೆ
  • ಜ್ಯೋತಿಷ್ಯದ ಪ್ರಕಾರ ಬೆಳ್ಳಿಯನ್ನು ಧರಿಸುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ
  • ಬೆಳ್ಳಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ, ಇದು ಮನಸ್ಸು ಮತ್ತು ಭಾವನೆಗಳಿಗೆ ಸ್ಪಂದಿಸುತ್ತದೆ
Astrology: ದಿನದಿಂದ ದಿನಕ್ಕೆ ಬೆಳ್ಳಿ ಬೆಲೆ ಏರಿಕೆ ಕಂಡಿದೆ. ಅದೇ ರೀತಿ ಇಳಿಕೆಯೂ ಕಾಣುತ್ತಿದೆ. ಆದರೆ, ಬೆಲೆ ಇನ್ನೂ ನಮ್ಮೆಲ್ಲರ ಬಜೆಟ್ ಮೀರಿರುವುದಂತೂ ಕಟು ಸತ್ಯ. ಆದಾಗ್ಯೂ, ಜ್ಯೋತಿಷ್ಯದ ಪ್ರಕಾರ ಬೆಳ್ಳಿಯನ್ನು ಧರಿಸುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ, ಇದು ಮನಸ್ಸು ಮತ್ತು ಭಾವನೆಗಳಿಗೆ ಸ್ಪಂದಿಸುವ ಗ್ರಹವೆಂದು ಕರೆಯಲಾಗುತ್ತದೆ.
ಜ್ಯೋತಿಷ್ಯವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬೆಳ್ಳಿ ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ, ಯಾವ ರಾಶಿಯವರು ಬೆಳ್ಳಿ ಧರಿಸುವುದರಿಂದ ಲಾಭವನ್ನು ಪಡೆಯುತ್ತಾರೆ ಎಂದು ನೋಡೋಣ ಬನ್ನಿ...
ಕರ್ಕಾಟಕ, ವೃಶ್ಚಿಕ ಮತ್ತು ಮೀನದಂತಹ ಜಲ ರಾಶಿಯವರಿಗೆ ಬೆಳ್ಳಿ ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ರಾಶಿಯವರು ಬೆಳ್ಳಿ ಧರಿಸುವುದರಿಂದ ಅನೇಕ ಕ್ಷೇತ್ರಗಳಲ್ಲಿ ಲಾಭವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಬೆಳ್ಳಿ ಧರಿಸುವುದರಿಂದ ನೆಮ್ಮದಿ ಮತ್ತು ಶಾಂತಿ ದೊರೆಯಲಿದೆ. ಆರ್ಥಿಕ ಯೋಗಕ್ಷೇಮ ಸುಧಾರಿಸುವುದರ ಜೊತೆಗೆ ಆದಾಯ ಹೆಚ್ಚಾಗುತ್ತದೆ. ಹಾಗೇ ಕುಟುಂಬದಲ್ಲಿ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯ ಜನರು ಯಾವುದೇ ದೊಡ್ಡ ಅಡೆ ತಡೆಗಳನ್ನು ಎದುರಿಸುವುದಿಲ್ಲ ಬದಲಾಗಿ ಸಂತೋಷದಿಂದ ಇರುತ್ತಾರೆ.
ಜ್ಯೋತಿಷ್ಯದ ಪ್ರಕಾರ, ಈ ಮೂರು ರಾಶಿಯವರು ಬೆಳ್ಳಿ ಬಳೆ ಧರಿಸುವುದರಿಂದ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ. ಹಾಗೆಯೇ ಪುರುಷರು ತಮ್ಮ ಬಲಗೈಗೆ ಬೆಳ್ಳಿ ಬಳೆಯನ್ನು ಧರಿಸಿದರೆ, ಮಹಿಳೆಯರು ಎಡಗೈಗೆ ಬಳೆ ಧರಿಸಬೇಕು. ಹಾಗೆಯೇ ಸೋಮವಾರ ಮತ್ತು ಶುಕ್ರವಾರ ಧರಿಸುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಅಲ್ಲದೆ, ಮೇಷ, ಸಿಂಹ ಮತ್ತು ಧನು ರಾಶಿಯ ಜನರು ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರವೇ ಬೆಳ್ಳಿಯನ್ನು ಧರಿಸಬೇಕು. ಈ ಜನರು ಬೆಳ್ಳಿಯನ್ನು ಧರಿಸುವುದರಿಂದ ಮಾನಸಿಕ ಒತ್ತಡ, ಆರ್ಥಿಕ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಜ್ಯೋತಿಷಿಗಳನ್ನು ಸಂಪರ್ಕಿಸಿದ ನಂತರ ಬೆಳ್ಳಿ ಆಭರಣಗಳನ್ನು ಧರಿಸುವುದು ಉತ್ತಮ. ಇಲ್ಲದಿದ್ದರೆ, ಅನಾನುಕೂಲ ಕಟ್ಟಿಟ್ಟ ಬುತ್ತಿಯಾಗಬಹುದು (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net