ಶುಕ್ರನ ಕೃಪೆಯಿಂದ ಈ 3 ರಾಶಿಯವರಿಗೆ ಒಳ್ಳೆಯ ಸಮಯ ಪ್ರಾರಂಭ! ಹಾಗಿದ್ದರೆ ನಿಮ್ದೂ ಇದೇ ರಾಶಿನಾ? Astrology

Daily-horoscope-June-2-star-sign-astrology-zodiac-today-1290049
Published on

Astrology: ಜ್ಯೋತಿಷ್ಯದಲ್ಲಿ ಶುಕ್ರನು ತನ್ನ ನಕ್ಷತ್ರ ಬದಲಾಯಿಸಿದಾಗ ಅದು ವ್ಯಕ್ತಿಯ ಸಂಬಂಧಗಳು, ಸಂಪತ್ತು, ವೃತ್ತಿ ಮತ್ತು ಸೃಜನಶೀಲ ಚಿಂತನೆಯ ಆಳವಾದ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯದ ಪ್ರಕಾರ, ಶುಕ್ರನನ್ನು ಸೌಂದರ್ಯ, ಪ್ರೀತಿ, ಕಲೆ, ವೈಭವ, ಐಷಾರಾಮಿ ಮತ್ತು ಸಂಬಂಧಗಳ ಗ್ರಹವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಸ್ವಾತಿ ನಕ್ಷತ್ರದ ಅಧಿಪತಿ ರಾಹು ಎಂದು ಕರೆಯಲಾಗುತ್ತದೆ. ಇವುಗಳು ರಾಶಿಗಳಲ್ಲಿ ಸಂಚಾರ ನಡೆಸುವುದರಿಂದ ಇವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ.

* ಮೇಷ

ಮೇಷ ರಾಶಿಯವರಿಗೆ ಶುಕ್ರನ ಸಂಚಾರವು ಆರ್ಥಿಕ ಮತ್ತು ವೃತ್ತಿಜೀವನದ ವಿಷಯದಲ್ಲಿ ಅದೃಷ್ಟವನ್ನು ತರುವಂತೆ ಮಾಡುತ್ತದೆ. ಉದ್ಯೋಗದ ಬದಲಾವಣೆ ಹಾಗೂ ಹೊಸ ಯೋಜನೆಗಳನ್ನು ಪ್ರಾರಂಭಿಸುವವರಿಗೆ ಶುಭ ಸುದ್ದಿ ಸಿಗುವಂತಹ ಸಮಯ ಇದಾಗಿದೆ. ಹೊಸ ಪ್ರಯತ್ನಗಳು ಜನರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರೀತಿ ಪ್ರೇಮ ವಿಚಾರದಲ್ಲಿ ಯಾವುದೇ ಆತಂಕ ಇರುವುದಿಲ್ಲ. ಮದುವೆ ಪ್ರಸ್ತಾಗಳು ಬರುತ್ತವೆ.

* ಮಿಥುನ

ಮಿಥುನ ರಾಶಿಯವರಿಗೆ ಈ ದಿನ ಸಕರಾತ್ಮಕ ಶಕ್ತಿಯನ್ನು ತುಂಬಿಸುವಂತಹ ದಿನವಾಗಿದೆ. ಈ ಸಮಯವು ಆತ್ಮವಿಶ್ವಾಸವನ್ನು ಬಲಪಡಿಸಿ ಅವರನ್ನು ಮುನ್ನುಗ್ಗುವಂತೆ ಮಾಡುತ್ತದೆ. ಹಾಗೆಯೇ ಮಾರ್ಕೆಟಿಂಗ್​ ಕೆಲಸದಲ್ಲಿ ತೊಡಗಿಕೊಂಡವರಿಗೆ ಅವಕಾಶಗಳ ಹೆಚ್ಚಾಗಿ ಸಿಗುತ್ತವೆ. ಈ ಸಮಯದಲ್ಲಿ ಹೊಸ ಸಂಬಂಧಗಳು ಅರಳುವ ಸಾಧ್ಯತೆ ಹೆಚ್ಚಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಯ ನಿರೀಕ್ಷೆ ಇದ್ದು, ದಿನಾಂತ್ಯದಲ್ಲಿ ಶುಭ ಫಲಿತಾಂಶವನ್ನು ಪಡೆಯಬಹುದಾಗಿದೆ.

* ಸಿಂಹ

ಸಿಂಹ ರಾಶಿಯವರಿಗೆ, ಶುಕ್ರನ ಸಂಚಾರವು ಪ್ರತಿಷ್ಠೆಯನ್ನು ಹೆಚ್ಚಿಸಿ, ಕೆಲಸ ಕಾರ್ಯಗಳಲ್ಲಿ ಮುನ್ನಣೆ ಸಾಧಿಸಲು ಸಹಾಯ ಮಾಡುತ್ತದೆ. ನೀವು ಕುಟುಂಬದಲ್ಲಿ ಸಂತೋಷದ ಕ್ಷಣಗಳ ಕಳೆಯುವ ಸಮಯ ಇದಾಗಿದೆ. ಸಂಬಂಧಗಳಲ್ಲಿದ್ದ ತೊಂದರೆಗಳು ನಿವಾರಣೆಯಾಗಿ, ಪತಿ ಪತ್ನಿ ಜೀವನದಲ್ಲಿ ಸುಖವಾಗಿರುತ್ತೀರಿ. ಹೂಡಿಕೆಗಳಲ್ಲಿ ಅಧಿಕ ಲಾಭಗಳಿಸಬಹುದಾಗಿದೆ. (ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net