ಅದೃಷ್ಟವೋ ಅದೃಷ್ಟ.. 4 ದಿನಗಳಲ್ಲಿ 4 ಗ್ರಹಗಳ ಸ್ಥಾನಪಲ್ಲಟ; ಈ ರಾಶಿಯವರು ಕೋಟ್ಯಾಧಿಪತಿಗಳಾಗೋದು ಫಿಕ್ಸ್! Astrology

Astrology (ಸಾಂದರ್ಭಿಕ ಚಿತ್ರ)
Astrology (ಸಾಂದರ್ಭಿಕ ಚಿತ್ರ)
Published on
Astrology: ಇನ್ನೇನು ಕೆಲವೇ ದಿನಗಳಲ್ಲಿ ಮಾರ್ಚ್​ ತಿಂಗಳು ಆರಂಭವಾಗಲಿದೆ. ಈ ತಿಂಗಳಲ್ಲಿ ಗ್ರಹಗಳ ಚಲನೆಯು ವಿಶೇಷವಾಗಿರುತ್ತದೆ. ಈ ವೇಳೆ ಶುಕ್ರನು ಮೀನ ರಾಶಿಗೆ ಸಾಗುತ್ತಾನೆ. ಜೊತೆಗೆ ಪ್ಲುಟೊ ಶ್ರಾವಣ ನಕ್ಷತ್ರಕ್ಕೆ ಸಾಗುತ್ತಾನೆ. ಸೂರ್ಯನು ಪೂರ್ವ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. ಈ ಗ್ರಹಗಳ ಸಂಚಾರದಿಂದ ಕೆಲವೊಂದು ರಾಶಿಚಕ್ರಗಳಿಗೆ ತುಂಬಾ ಶುಭವಾಗುತ್ತದೆ ಎನ್ನಲಾಗುತ್ತದೆ. ಹಾಗಿದ್ದರೆ, ಗ್ರಹಗಳ ಸಂಚಾರವು ಯಾವ ರಾಶಿಯವರಿಗೆ ಒಳ್ಳೆಯದು ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮೇಷ ರಾಶಿಯವರಿಗೆ ಈ ಗ್ರಹ ಸಂಚಾರವು ತುಂಬಾ ಶುಭಕರವಾಗಿರುತ್ತದೆ. ಹಠಾತ್ ಆರ್ಥಿಕ ಲಾಭಗಳು ಕಂಡುಬರುತ್ತವೆ. ಅರ್ಧದಲ್ಲೇ ನಿಂತಿದ್ದ ಕೆಲಸಗಳು ಮುನ್ನಡೆ ಸಾಧಿಸಲಿವೆ. ಹೊಸ ವೃತ್ತಿಜೀವನದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ಹೊಸ ಅವಕಾಶಗಳು ನಿಮಗೆ ಒದಗಿ ಬರಲಿವೆ. ಕುಟುಂಬದ ವಾತಾವರಣವು ಸಂತೋಷ ಮತ್ತು ಶಾಂತಿಯನ್ನು ನೀಡಲಿದೆ. ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಅನುಭವಿಸಲಿದ್ದಾರೆ. ಈ ಯೋಗವು ಬಡ್ತಿ ಅಥವಾ ಸಂಬಳ ಹೆಚ್ಚಳ ಸಾಧ್ಯವಾಗಲಿದೆ. ಹೊಸ ಉದ್ಯಮ ಪ್ರಾರಂಭಿಸಬೇಕು ಎಂಬುವವರಿಗೆ ಈ ತಿಂಗಳು ಬಹಳ ಶುಭವಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗುತ್ತದೆ ಮತ್ತು ಹೊಸ ಸಂಬಂಧಗಳು ಭವಿಷ್ಯದಲ್ಲಿ ಪ್ರಯೋಜನಗಳನ್ನು ತರುತ್ತವೆ. ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆ ಪಡೆಯಲಿದ್ದೀರಿ.

ಸಿಂಹ ರಾಶಿ

ಈ ಸಮಯ ಸಿಂಹ ರಾಶಿಯವರಿಗೆ ಅನುಕೂಲಕರವೆಂದು ತೋರುತ್ತದೆ. ಅದೃಷ್ಟ ನಿಮ್ಮ ಪರವಾಗಿರುತ್ತದೆ. ಕೆಲಸದಲ್ಲಿರುವವರಿಗೆ ಒಳ್ಳೆಯ ಬಡ್ತಿ ಅಥವಾ ಸಂಬಳ ಹೆಚ್ಚಾಗುವ ನಿರೀಕ್ಷೆ ಇದೆ. ಹೊಸ ವಿಚಾರಗಳು ನಿಮ್ಮನ್ನು ಆಕರ್ಷಸಿಲಿವೆ. ನಾಯಕತ್ವ ಕೌಶಲ್ಯಗಳು ಬಲಗೊಳ್ಳುವುದ ಜೊತೆಗೆ ಜವಬ್ದಾರಿಯನ್ನು ಹೊಂದಲಿದ್ದೀರಿ. ಆದಾಗ್ಯೂ, ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸಚನೆ: ಮೇಲೆ ತಿಳಿಸಲಾದ ಎಲ್ಲಾ ಮಾಹಿತಿಯನ್ನು ಮಾಧ್ಯಮಗಳು / ಜ್ಯೋತಿಷಿಗಳು /ಪಂಚಾಂಗಗಳು /ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಜವಬ್ದಾರಿಯಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net