ಓರ್ವ ವ್ಯಕ್ತಿಯ ಜನ್ಮ ರಾಶಿಯ ಪ್ರಭಾವವು ಆತನ ಹಣಕಾಸಿನ ಸ್ಥಿತಿ, ಪ್ರೀತಿ, ಶಿಕ್ಷಣ, ನೋಟ, ಮದುವೆ, ದಾಂಪತ್ಯ ಜೀವನ, ಉದ್ಯೋಗ ಮತ್ತು ಆತನ ಒಳ್ಳೆಯ ಗುಣಗಳು ಮತ್ತು ಕೆಟ್ಟ ಗುಣಗಳ ಮೇಲೆ ಪ್ರತಿಫಲಿಸುತ್ತದೆ ಎಂದು ಹೇಳಲಾಗಿದೆ. ಹೀಗಾಗಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ತಮ್ಮ ಅಪಾರ ಇಚ್ಛಾಶಕ್ತಿ ಮತ್ತು ಪ್ರತಿಭೆಯ ಮೂಲಕ ತಮ್ಮ ಹಣೆಬರಹವನ್ನು ತಾವೇ ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾರಂತೆ. ಇವರು ಎಂದಿಗೂ ಅದೃಷ್ಟವನ್ನು ನಂಬುವುದೇ ಇಲ್ಲ. ತಮ್ಮ ಶ್ರಮ ಹಾಗೂ ಜಾಣ್ಮೆಯಿಂದ ಅದೃಷ್ಟವೇ ಅವರನ್ನು ಹುಡುಕಿಕೊಂಡು ಬರುವಂತೆ ಮಾಡುತ್ತಾರಂತೆ.