ಒಡಿಶಾದ ಮಂತ್ರಿಗೆ ಪೊಲೀಸ್ ಅಧಿಕಾರಿಯಿಂದಲೇ ಗುಂಡು!

odisha heakth minister
Published on

ನವದೆಹಲಿ: ಮಂತ್ರಿಯ ಮೇಲೆಯೇ ಪೊಲೀಸ್ ಅಧಿಕಾರಿ ಗುಂಡು ಹೊಡೆದಿರುವುದನ್ನು ಎಲ್ಲಾದರೂ ಕೇಳಿದ್ದೀರಾ? ಖಂಡಿತವಾಗಿಯೂ ಇಲ್ಲ. ಆದರೆ ಈ ವಿಲಕ್ಷಣ ಘಟನೆ ಒಡಿಶಾದಲ್ಲಿ ನಡೆದಿದ್ದು ಈಗ ಗುಂಡು ಹೊಡೆಸಿಕೊಂಡ ಆರೋಗ್ಯ ಸಚಿವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಮೇಲೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡು ಹಾರಿಸಿದ ಘಟನೆ ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರದ ಬಳಿಯ ಗಾಂಧಿ ಚೌಕ್ ಬಳಿ ಇಂದು ನಡೆದಿದೆ. ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಒಡಿಶಾದ ಆರೋಗ್ಯ ಸಚಿವರ ಮೇಲೆ ಗುಂಡು ಹಾರಿಸಲಾಗಿದ್ದು ಅದು ಅವರ ಎದೆಗೆ ತಗುಲಿದೆ. ಅವರ ಪರಿಸ್ಥಿತಿ ಗಂಭಿರವಾಗಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ತಮ್ಮ ವಾಹನದಿಂದ ಹೊರಬರುತ್ತಿದ್ದಂತೆಯೇ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಪೊಲೀಸ್ ಅಧಿಕಾರಿ ಮಾಡಿದ ದಾಳಿಯ ಹಿಂದಿನ ಉದ್ದೇಶಗಳು ಇನ್ನೂ ಅಸ್ಪಷ್ಟವಾಗಿವೆ. ರಕ್ತಸಿಕ್ತ ಶ್ರೀ ದಾಸ್ ಅವರನ್ನು ಕಾರಿನಲ್ಲಿ ಕರೆದೊಯ್ಯುವುದನ್ನು ಸ್ಥಳದ ವೀಡಿಯೊಗಳು ತೋರಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net