ಲೋಕಾಯುಕ್ತ ಅಧಿಕಾರಿಗಳಿಗೇ ಲಂಚದ ಆಮಿಷ ಕಾನೂನು ಮಾಪನಶಾಸ್ತ್ರ ಸಹಾಯ ನಿಯಂತ್ರಕ ಗಜೇಂದ್ರ ಬಂಧನ

mng--30 may Gajendra
Published on

ಮಂಗಳೂರು: ತನ್ನ ಹಾಗೂ ಇಲಾಖೆ ವಿರುದ್ಧ ಯಾವುದೇ ದಾಳಿ ಅಥವಾ ಪ್ರಕರಣ ದಾಖಲಿಸಬಾರದು ಎಂದು ಲೋಕಾಯುಕ್ತ ಅಧಿಕಾರಿಗೇ 3 ತಿಂಗಳಿಗೊಮ್ಮೆ 25 ಸಾವಿರ ರೂ. ಲಂಚದ ಆಮಿಷ ತೋರಿಸಿದ ಅಧಿಕಾರಿಯೋರ್ವನನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕಾನೂನು ಮಾಪನಶಾಸ್ತ್ರ ಸಹಾಯ ನಿಯಂತ್ರಕ ಗಜೇಂದ್ರ ವಿ.ಎಡಕೆ ಬಂಧಿತ. ಈತ ಹಾಗೂ ಕೋಟೆಕಣಿ ಪ್ರಶಾಂತ್ ಆಯಿಲ್ ಇಂಡಸ್ಟ್ರೀಸ್ ಮಾಲೀಕ ಪ್ರವೀಣ್ ನಾಯ್ಕ ಅವರು ಶುಕ್ರವಾರ ಬೆಳಗ್ಗೆ 11.15ರ ಸುಮಾರಿಗೆ ಲೋಕಾಯುಕ್ತ ಕಚೇರಿಗೆ ಬಂದು ಇನ್‌ಸ್ಪೆಕ್ಟರ್ ಜತೆ ಮಾತುಕತೆ ನಡೆಸಿ, ತನ್ನ ಹಾಗೂ ಇಲಾಖೆ ವಿರುದ್ಧ ಲೋಕಾಯುಕ್ತದಿಂದ ಯಾವುದೇ ದಾಳಿ ನಡೆಸಬಾರದು ಹಾಗೂ ಪ್ರಕರಣ ದಾಖಲಿಸಬಾರದು ಎಂದು ತಿಳಿಸಿ, ತಾನು 3 ತಿಂಗಳಿಗೊಮ್ಮೆ 25 ಸಾವಿರ ರೂ. ಲಂಚವಾಗಿ ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಈ ಬಗ್ಗೆ ಗಜೇಂದ್ರ ವಿ ಎಡಕೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಲೋಕಾಯುಕ್ತ ಮಂಗಳೂರು ವಿಭಾಗದ ಪ್ರಭಾರ ಪೊಲೀಸ್ ಅಧಿಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್‌ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net