

ಬೆಂಗಳೂರು: ಇಲ್ಲಿನ ವಿದ್ಯಾಪೀಠ ರಸ್ತೆಯಲ್ಲಿ ತಾಯಿ-ಮಗಳನ್ನು ಹತ್ಯೆ ಮಾಡಲು ಯತ್ನಿಸಿದ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೆಪ್ಟೆಂಬರ್ 4ರಂದು ಸಂಜೆ 7.40ರ ಹೊತ್ತಿಗೆ ಘಟನೆ ನಡೆದಿದೆ. ತಾಯಿ ದೀಪಾ ಶ್ರೀಕುಮಾರ್ ಮತ್ತು ಮಗಳು ಹಿಷಿತಾ ದ್ವಿಚಕ್ರವಾಹನದಲ್ಲಿ ವಿದ್ಯಾಪೀಠ ರಸ್ತೆಯಲ್ಲಿ ತೆರಳುತ್ತಿದ್ದರು. ಇನ್ನೊಂದು ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೀಪಾ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಹೋದ ಹಿಷಿತಾ ಮೇಲೆ ಕೂಡ ದಾಳಿ ಮಾಡಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರು ಸೇರಿದ್ದರಿಂದ ಕೂಡಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಕೇರಳ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಪತ್ನಿಗೆ ಗಂಡುಮಗು ಜನನ
ದೀಪಾ ಅವರು ಆಸ್ಟಿನ್ ಸ್ಕೂಲ್ ಸಂಸ್ಥಾಪಕ ಶ್ರೀಕುಮಾರ್ ಅವರ ಎರಡನೇ ಪತ್ನಿ. ಇವರಿಬ್ಬರ ನಡುವೆ ಆಸ್ತಿ ವಿವಾದವಿದೆ. ಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಇದೀಗ ಶ್ರೀಕುಮಾರ್, ಅವರ ಪುತ್ರ ಜಯಂತ್, ಪುತ್ರಿ ಮೋನಿಷಾ ಮತ್ತು ಅಳಿಯ ನವೀನ್ ಅವರೇ ದೀಪಾ ಮತ್ತು ಹಿಷಿತಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿ.ಕೆ.ಅಚ್ಚುಕಟ್ಟು ಠಾಣೆಯಲ್ಲಿ ಈ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಘಟನೆ ನಡೆದು ಮೂರು ದಿನವಾದರೂ ಆರೋಪಿಗಳನ್ನು ಪೊಲೀಸರು ಬಂಧಿಸಲಿಲ್ಲ ಎನ್ನಲಾಗಿದೆ.