ಪುತ್ತೂರು: ರಸ್ತೆಯಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಪಿಕಪ್ ಚಾಲಕ ಸರ್ಕಾರಿ ಬಸ್ ಚಾಲಕನ ಮೇಲೆ ಉರಿಮಜಲಿನಲ್ಲಿ ಹಲ್ಲೆ ನಡೆಸಿದ್ದು, ಇದನ್ನು ವಿಡಿಯೋ ಚಿತ್ರೀಕರಣಕ್ಕೆ ಮುಂದಾದ ನಿರ್ವಾಹಕನ ಮೇಲೆಯೂ ಹಲ್ಲೆ ನಡೆದಿದೆ.
ಕಬಕದ ಮೂಲದ ಪಿಕಪ್ ಚಾಲಕ ಹನೀಫ್ ಎಂಬಾತ ಹಲ್ಲೆ ನಡೆಸಿರುವುದೆನ್ನಲಾಗಿದೆ. ಕಬಕ-ವಿಟ್ಲ ರಸ್ತೆಯ ಬಗ್ಗುಮೂಲೆ ಎಂಬಲ್ಲಿ ಪಿಕಪ್‌ಗೆ ಕೆ.ಎಸ್.ಆರ್.ಟಿ.ಸಿ ಬಸ್ ಸರಿಯಾಗಿ ಸೈಡ್ ಕೊಡಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಬಸ್ಸನ್ನು ಬೆನ್ನಟ್ಟಿ ಬಂದ ಪಿಕಪ್ ಚಾಲಕ ಉರಿಮಜಲಿನಲ್ಲಿ ಬಸ್ಸನ್ನು ಅಡ್ಡ ಹಾಕಿ ಚಾಲಕನಿಗೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯನ್ನು ನಿರ್ವಾಹಕ ವಿಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದು, ಆತನ ಮೇಲೆಯೂ ಹಲ್ಲೆ ನಡೆದಿದೆ.