ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆನ್ ಹತ್ಯೆ; ಈ ಹಿಂದಿನ ದಾಳಿಗೆ ಸೇಡು ತೀರಿಸಿಕೊಂಡ ಇಸ್ರೇಲ್

Ismail Haniyeh
Published on

ನವದೆಹಲಿ: ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆನ್ ಮತ್ತು ಅವರ ಅಂಗರಕ್ಷಕ ಇರಾನ್​ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪ್ಯಾಲಿಸ್ತೇನ್ ಗುಂಪು ಧೃಢಪಡಿದೆ.

ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಭಯಾನಕವಾಗಿ ದಾಳಿ ನಡೆಸಿ, ಸಾವಿರಾರು ನಾಗರಿಕರ ಸಾವಿಗೆ ಕಾರಣನಾಗಿದ್ದ ಹಮಾಸ್‌ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ, ಇರಾನ್‌ನಲ್ಲಿ ಹತ್ಯೆಯಾಗಿದ್ದಾನೆ. ಕತಾರ್‌ನಿಂದ ಗೋಪ್ಯವಾಗಿ ಹಮಾಸ್ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ ಹನಿಯೆ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಟೆಹರಾನ್‌ಗೆ ಬಂದಿದ್ದ.

ಮಂಗಳವಾರ ಬೆಳ್ಳಗ್ಗೆ ಟೇಹರಾನ್​ನ ಅವರ ಮನೆ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹೆಚ್ಚಿನ ವಿವವರಗಳನ್ನು ಕಂಡುಹಿಡಿಯಲು ತನಿಖೆಗಳು ನಡೆಯುತ್ತಿದೆ.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆಹ್ ಇರಾನ್ ರಾಜಧಾನಿಯಲ್ಲಿದ್ದರು ಎಂದು ವರದಿಯಾಗಿದೆ.

ಈ ಕುರಿತು ಹಮಾಸ್ ರಾಜಕೀಯ ಬ್ಯುರೋ ಸದಸ್ಯ ಮಾತನಾಡಿ, ನಾಯಕ ಯೆನಿಯನ್ ಹತ್ಯೆ ಹೇಡಿತನದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಇದ್ದಕ್ಕೆ ತಕ್ಕ ಉತ್ತರ ಸಿಗಲಿದೆ ಎಂದಿದ್ದಾರೆ.

ಇಸ್ರೇಲ್ ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕಳೆದ 2023 ಅ.7 ರ ದಾಳಿಯ ನಂತರ ಇಸ್ಮಾಯಿಲ್ ಹನಿಯೆಹ್ ಅವರನ್ನು ಕೊಂದು ಹಮಾಸ್ ಗುಂಪನ್ನು ನಾಶಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿದೆ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net