ಏಷ್ಯಾಡ್‌ನಲ್ಲಿ ಇಂದಿನಿಂದ ಬ್ಯಾಡ್ಮಿಂಟನ್ ಸ್ಪರ್ಧೆ: 1986ರ ಬಳಿಕ ಪದಕ ಗೆಲ್ಲುವಲ್ಲಿ ವಿಫಲ

New-Project-1-4
Published on

ಹಾಂಗ್‌ರೆೌ: ಏಷ್ಯಾಡ್‌ನಲ್ಲಿ ಗುರುವಾರ ಬ್ಯಾಡ್ಮಿಂಟನ್ ವಿಭಾಗದ ಸ್ಪರ್ಧೆಗಳು ಆರಂಭವಾಗಲಿದ್ದು, ಭಾರತೀಯ ಷಟ್ಲರ್‌ಗಳು ಪದಕದೊಂದಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಮೊದಲಿಗೆ ತಂಡ ವಿಭಾಗದ ಸ್ಪರ್ಧೆಯಿಂದ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು. ವೈಯಕ್ತಿಕ ವಿಭಾಗದ ಸ್ಪರ್ಧೆಗಳು ಅಕ್ಟೋಬರ್ 2ರಂದು ಆರಂಭವಾಗಲಿವೆ.

ಮೊದಲ ಸುತ್ತಿನಲ್ಲಿ ಬೈ ಪಡೆದುಕೊಂಡಿರುವ ಪುರುಷರ ತಂಡ ಕ್ವಾರ್ಟರ್‌ೈನಲ್‌ನಲ್ಲಿ ಕೊರಿಯಾ ಅಥವಾ ಮಲೇಷ್ಯಾ ತಂಡವನ್ನು ಎದುರಿಸಲಿದೆ. 1986ರ ಬಳಿಕ ಪುರುಷರ ತಂಡ ಪದಕ ಗೆಲ್ಲುವಲ್ಲಿ ವಿಲವಾಗಿದೆ. 2022ರ ಥಾಮಸ್ ಕಪ್ ಚಾಂಪಿಯನ್ ಆಗಿರುವ ಪುರುಷರ ತಂಡ ಈ ಬಾರಿ ಪದಕ ಗೆಲ್ಲುವ ೇವರಿಟ್ ತಂಡ ಎನಿಸಿದೆ. ಎಚ್‌ಎಸ್ ಪ್ರಣಯ್, ಲಕ್ಷ್ಯಸೇನ್, ಸಾತ್ವಿಕ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಉತ್ತಮ ಾರ್ಮ್‌ನಲ್ಲಿದ್ದು ಚೀನಾ, ಕೊರಿಯಾ, ಮಲೇಷ್ಯಾ ಹಾಗೂ ಜಪಾನ್ ತಂಡಗಳ ಸವಾಲು ಹಿಮ್ಮೆಟ್ಟಿಸ ಬೇಕಿದೆ. ಸಿಂಗಲ್ಸ್‌ನಲ್ಲಿ ಇದುವವರೆಗೆ ಸಯ್ಯದ್ ಮೋದಿ ಕಂಚಿನ ಪದಕ ಜಯಿಸಿರುವುದು ಅತ್ಯುತ್ತಮ ಸಾಧನೆ ಎನಿಸಿದೆ.

ಮಹಿಳಾ ವಿಭಾಗದಲ್ಲಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಹಾಲಿ ಋತುವಿನಲ್ಲಿ ಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಸೈನಾ ನೆಹ್ವಾಲ್ ಕಂಚಿಗೆ ಕೊರಳೊಡ್ಡಿದ್ದರು. ತಂಡ ವಿಭಾಗದಲ್ಲಿ ಇಂಚೋನ್ ಕೂಟದಲ್ಲಿ ಕಂಚು ಪಡೆದಿದ್ದರು. ಪಿವಿ ಸಿಂಧು ಹೊರತುಪಡಿಸಿ ಡಬಲ್ಸ್‌ನಲ್ಲಿ ಗಾಯತ್ರಿ-ತ್ರಿಸಾ ಜೋಲಿ ಜೋಡಿ ಟೂರ್ನಿಯಲ್ಲಿ ಉನ್ನತ ಶ್ರೇಯಾಂಕ ಹೊಂದಿದೆ. ಮಹಿಳೆಯರ ತಂಡ ಆರಂಭಿಕ ಪಂದ್ಯದಲ್ಲಿ ಮಂಗೋಲಿಯಾ ತಂಡವನ್ನು ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net