ಏಷ್ಯಾಕಪ್​-2025 ; ಫೈನಲ್​​ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು; ಆದರೆ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಟೀಂ ಇಂಡಿಯಾ| Team India

Untitled design - 2025-09-29T075704.055
Published on

Team India: ಏಷ್ಯಾಕಪ್-2025 ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಪಾಕ್ ಸಚಿವ & ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿದೆ. ಈ ಹಿನ್ನೆಲೆ ಟ್ರೋಫಿ ಸ್ವೀಕರಿಸದೇ ಟೀಂ ಇಂಡಿಯಾ ಸಂಭ್ರಮಾಚಾರಣೆ ಮಾಡಿದೆ.

ನಿನ್ನೆ (ಸೆ. 28) ದುಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಭಾರತ ಗೆದ್ದ ಬಳಿಕ  ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭ ಆರಂಭವಾಯಿತು. ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ವೇದಿಕೆ ಏರುತ್ತಿದ್ದಂತೆ ಭಾರತೀಯ ಆಟಗಾರರು ವೇದಿಕೆ ಕಡೆ ಹೋಗಲಿಲ್ಲ. ಆದರೂ ವೈಯಕ್ತಿಕ ಪ್ರದರ್ಶನ ನೀಡಿದ ಆಟಗಾರರಿಗೆ ನಖ್ವಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೈದಾನದಲ್ಲಿ ವಿಜೇತ ತಂಡ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದೆ, ಹಾಗೆಯೇ ತಂಡಕ್ಕೆ ಪ್ರಶಸ್ತಿ ನೀಡದಿರುವ ಘಟನೆ ದಾಖಲಾಗಿದೆ. ಮೂರು ಏಷ್ಯಾಕಪ್ ಪಂದ್ಯಗಳಲ್ಲಿ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕದೆ ಮತ್ತು ಸಾಂಪ್ರದಾಯಿಕ ಪೂರ್ವ-ಟಾಸ್ ಫೋಟೋಶೂಟ್ ಅನ್ನು ತಪ್ಪಿಸಿಕೊಂಡು, ಭಾರತೀಯ ತಂಡವು ಎಸಿಸಿ ಅಧ್ಯಕ್ಷರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ಎಸಿಸಿಗೆ ಸಂದೇಶವನ್ನು ಮೊದಲೇ ಕಳುಹಿಸಿತ್ತು ಎನ್ನಲಾಗಿದೆ.

ಟೀಂ ಇಂಡಿಯಾ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿಯನ್ನು ಪಡೆಯಲು ಸಿದ್ಧವಾಗಿತ್ತು. ಆದರೆ ಅವರು ನಖ್ವಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ಈ ಹಿನ್ನೆಲೆ ಆಟಗಾರರು ವೇದಿಕೆ ಕಡೆಗೆ ಹೋಗಲಿಲ್ಲ.  ನಖ್ವಿ ಕಾಯುತ್ತಿದ್ದಂತೆ ಇದ್ದಕ್ಕಿದ್ದಂತೆ, ಸಂಘಟಕರಲ್ಲಿ ಒಬ್ಬರು ಡ್ರೆಸ್ಸಿಂಗ್ ಕೋಣೆಯೊಳಗೆ ಟ್ರೋಫಿಯನ್ನು ತೆಗೆದುಕೊಂಡು ಹೋದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಲ್ಲಿ ಆರು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂಬ ಪಾಕ್​ ಹೇಳಿಕೆಗಳನ್ನು ಉಲ್ಲೇಖಿಸಿ ಎಕ್ಸ್​ನಲ್ಲಿ ಭಾರತ ವಿರೋಧಿ ಪೋಸ್ಟ್ ಮಾಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net